ಆರೋಗ್ಯಕ್ಕೆ ಕಿವಿ ಹಣ್ಣು ಎಷ್ಟು ಉತ್ತಮ ಗೊತ್ತಾ?

ಕಿವಿ ವಿದೇಶಿ ಹಣ್ಣಾಗಿದ್ದರೂ ಕೂಡ ಅದರ ಉಪಯೋಗ ಮಾತ್ರ ಅಧಿಕವಾಗಿದೆ. ಇಂದಿನ ದಿನಗಳಲ್ಲಿ ತಮ್ಮ ದೇಹದಲ್ಲಿ ಆರೋಗ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ಸಾಮಾನ್ಯವಾಗಿ ಮಾತನಾಡಿಕೊಳ್ಳುತ್ತೇವೆ. ಈ ಕರೋನದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದಕ್ಕೆ ಈ ಇಮ್ಯೂನಿಟಿ ಪವರ್ ನಮ್ಮ ದೇಹಕ್ಕೆ ಅಗತ್ಯವಾಗಿದೆ. ಕಿವಿ ಹಣ್ಣು ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ತಂದು ಕೊಡಲಿದೆ ಎಂಬುದನ್ನು ತಿಳಿಸಲಾಗಿದೆ ಮುಂದೆ ಓದಿ. ಕಿವಿ ಹಣ್ಣು, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಆದರೆ ಈ ಹಣ್ಣು ಈಗ ನಮ್ಮ ಭಾರತದಲ್ಲೂ ಕೂಡ ಬಹಳ ಸುಲಭವಾಗಿ ಲಭ್ಯವಿದೆ. ಈ ಕಿವಿ ಹಣ್ಣಿನಲ್ಲಿ ಫೈಬರ್ ,ವಿಟಮಿನ್ ಇ, ಪಾಲಿಫಿನಾಲ್ ಮತ್ತು ಕ್ಯಾರೊಟಿನಾಯ್ಡ್ಗಳು ಸಮೃದ್ಧವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಅನೇಕ ರೋಗವನ್ನು ದೂರವಿಡಬಹುದು. ಹಾಗಾದ್ರೆ ಈ ಕಿವಿ ಹಣ್ಣಿನ ಸೇವನೆಯಿಂದ ಪಡೆಯುವ ಅನುಕೂಲಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ :

ಕಿವಿ(kiwi) ಹಣ್ಣಿನ ಸೇವನೆಯಿಂದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದು ಕೂಡ ಕಡಿಮೆಯಾಗುತ್ತದೆ ಹಾಗೂ ಇದು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸಿದೆ. ಅಸ್ಪಿರಿನ್ ಎಂಬ ಔಷಧಿಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಅನುಕೂಲಕರವಾಗಿದೆ. ಆದರೆ ಆಸ್ಪರಿನ್ ಕರುಳು ಮತ್ತು ಜಟರಗಳಲ್ಲಿ ಕಂಡುಬರುವ ಉರಿಯೂತದಂತಹ ಸಮಸ್ಯೆಗಳು ಮೂಲಕ ಒಳಪದರಗಳಲ್ಲಿ ಅಂತ ಗಾಯ ಮತ್ತು ಅಲ್ಸರ್ ಉಂಟಾಗುವ ಅಂಶವನ್ನು ಹೊಂದಿದೆ. ಒಂದು ಸಂಶೋಧನೆಯ ಪ್ರಕಾರ ದಿನನಿತ್ಯ ಒಂದರಿಂದ ಎರಡು ಕಿವಿ ಹಣ್ಣು ಸೇವಿಸುವ ಅಭ್ಯಾಸವು ರಕ್ತವನ್ನು ತಿಳಿಗೊಳಿಸುವ ಹಾಗೂ ಕ್ರಮೇಣ ಹೃದಯದ ಮೇಲಿರುವ ಭಾರವನ್ನು ತಗ್ಗಿಸಲು ಉಪಯುಕ್ತವಾಗಿರುತ್ತದೆ.

DNA ಗಳನ್ನು ಸಮಾತೋಲನದಲ್ಲಿ ಇಡುತ್ತದೆ :

ನಮ್ಮ ಶರೀರದ ಪ್ರತಿ ಜೀವಕೋಶದ DNA ರಚನೆ ವಿಶಿಷ್ಟವಾಗಿದ್ದು, ನಮ್ಮ ಎಲ್ಲಾ ಗುಣಲಕ್ಷಣಗಳಿಗೆ ಅಡಿಪಾಯವಾಗಿದೆ. ಇದೆಲ್ಲಾ ನಿರಂತರವಾದ ಸೆಳೆತಕ್ಕೆ ಗುರಿಯಾಗುತ್ತ ಇರುತ್ತದೆ. ಈ ರಚನೆ ಬದಲಾದಾಗ ಕಡಿಮೆ ಪ್ರಾಬಲ್ಯ ಅಥವಾ ಹೆಚ್ಚಿನ ಪ್ರಾಬಲ್ಯ ಕಾಡಿದರು ಅನಾರೋಗ್ಯ ಕಾಡುತ್ತದೆ. ಈ DNA ರಚನೆಗಳು ಬದಲಾದಾಗ ಅದನ್ನ ಸ್ವರೂಪಕ್ಕೆ ಹಿಂದಿರುಗಿಸುವಲ್ಲಿ ಈ ಕಿವಿ ಹಣ್ಣು ಸಹಕಾರಿಯಾಗಿರುತ್ತದೆ. ತಜ್ಞರು ಹೇಳುವ ಪ್ರಕಾರ ಕಿವಿ ಹಣ್ಣನ್ನು ನಿರಂತರವಾಗಿ ಸೇವಿಸುವುದರಿಂದ ಕರುಳು ಕ್ಯಾನ್ಸರ್ ನಿಂದ ದೂರವಿರಬಹುದು. ಈ ಮೂಲಕ ಕ್ಯಾನ್ಸರ್ ನಿರೋಧಕ ಆಹಾರವಾಗಿ ಕಿವಿ ಹಣ್ಣು ಹೆಚ್ಚು ಪ್ರಸಿದ್ಧಿ ಪಡೆದಿದೆ.

ತ್ವಚೆ ಆರೋಗ್ಯ :

ಕಿವಿ(kiwi) ಹಣ್ಣು ಸೇವನೆಯು ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಅಂಶವು ಚರ್ಮಕ್ಕೆ ತುಂಬಾ ಉಪಯುಕ್ತ. ಇದನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸುವುದು ಉತ್ತಮ. ಈ ವಿಟಮಿನ್ ಸಿ ಚರ್ಮದ ರೋಗವನ್ನು ದೂರವಿಡುತ್ತದೆ ಮತ್ತು ದೇಹವನ್ನು ಹೈಡ್ರೇಟ್ ಆಗಿರಿಸಲು ಅನುಕೂಲವಾಗಿದೆ.

ತೂಕ ಇಳಿಸಲು ಉಪಯುಕ್ತ :

ಇನ್ನು ತೂಕ ಇಳಿಸಲು ಯಾರಾದರೂ ಪ್ರಯತ್ನ ಪಡುತ್ತಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಕಿವಿ ಹಣ್ಣನ್ನು ಸೇರಿಸಿ, ಏಕೆಂದರೆ ಇದರಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿ ಹಾಗೂ ಒಳ್ಳೆಯ ಮಟ್ಟದ ನಾರಿನಂಶವು ಕೂಡ ಇದೆ. ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ನಮ್ಮ ತೂಕವನ್ನು ಇಳಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ.

ಹೃದಯದ ಆರೋಗ್ಯ :

ಕಿವಿ ಹಣ್ಣನ್ನು ನಿರಂತರವಾಗಿ ಸೇವಿಸುವುದರಿಂದ ಹೃದಯಾಘಾತದಂತಹ ದುರಂತವನ್ನು ತಪ್ಪಿಸುವಲ್ಲಿ ಸಹಕಾರಿಯಾಗಿರುತ್ತದೆ. ಇದರಲ್ಲಿರುವ ಪೋಟಾಷಿಯಮ್ ಅಂಶಗಳು ಹೃದಯಾಘಾತವನ್ನು ತಪ್ಪಿಸಲು ಅನುಕೂಲವಾಗಿರುತ್ತದೆ.
ಅದೇ ಸಮಯದಲ್ಲಿ ಫೈಬರ್ ಮತ್ತು ವಿಟಮಿನ್ ಪ್ರಮಾಣವು ಯಥೇಚ್ಛವಾಗಿಡಲು ಕಿವಿ ಹಣ್ಣು ಸಹಕಾರಿಯಾಗಿದೆ. ಇದಿಷ್ಟು ಕಿವಿ ಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಸಿಗುವಂತಹ ಅನುಕೂಲ ಹಾಗಾಗಿ ನಿರಂತರ ಸೇವಿಸಿ ಆರೋಗ್ಯವಾಗಿರಿ.

Exit mobile version