ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು

ದೋಸೆ ಅಂದ್ರೆ ಸಾಕು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೆಲವರಿಗೆ ಮಸಾಲಾ ದೋಸೆ (Masala Dose) ಇಷ್ಟವಾದರೆ ಇನ್ನು ಕೆಲವರಿಗೆ ಪ್ಲೇನ್‌, ಈರುಳ್ಳಿ ದೋಸೆ ಇಷ್ಟವಾಗುತ್ತದೆ ಇನ್ನೂ ಕೆಲವರಿಗೆ ದಾವಣೆಗೆರೆ ಬೆಣ್ಣೆ ದೋಸೆ ಆದರೆ ಇಲ್ಲೊಂದು ಹೊಸರೀತಿ ದೋಸೆಯ ರೆಸಿಪಿ ಇಲ್ಲಿದೆ ಹತ್ತರಿಂದ ಹದಿನೈದು ನಿಮಿಷದಲ್ಲಿ ಮಾಡಬಹುದು. ಅಲ್ಲದೆ ಇದು ಆರೋಗ್ಯಕ್ಕೂ ಒಳ್ಳೆಯದು

ಬೇರೆ ತರಕಾರಿಗಳಿಗಿಂತ ಬಿಟ್ರೋಟ್ (Beetroot) ನಲ್ಲಿ ಹೆಚ್ಚಿನ ಪೋಷ್ಟಕಾಂಶ ಇರುದರಿಂದ ನಮ್ಮ ದೇಹಕ್ಕೆ ಒಳ್ಳೆಯದು. ಅದಲ್ಲದೆ ಬೀಟ್ರೂಟ್‌ ನಲ್ಲಿ ಪೋಷಕಾಂಶ, ವಿಟಮಿನ್‌, ಖನಿಜಾಂಶವಿರುವುದರಿಂದ ತರಕಾರಿಗಳನ್ನು ಉಪಯೋಗಿಸುವುದರಿಂದ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಹಾಗಾದರೆ ಮತ್ತೇಕೆ ತಡ “ಬೀಟ್ರೂಟ್‌ ದೋಸೆ“ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ….

ಬೀಟ್ರೂಟ್‌ ದೋಸೆ ಬೇಕಾಗುವ ಸಾಮಗ್ರಿಗಳು
೧. ಬಾಂಬೆ ರವೆ-ಅರ್ಧಕಪ್‌,
೨. ಗೋಧಿ ಹಿಟ್ಟು-2 ಚಮಚ,
೩.ಅಕ್ಕಿಹಿಟ್ಟು-ಅರ್ಧಕಪ್‌,
೪.ಕಾಳುಮೆಣಸಿನ ಪುಡಿ-ಅರ್ಧಚಮಚ,
೫.ಅಚ್ಚಖಾರದ ಪುಡಿ-1 ಚಮಚ
೬.ಜೀರಿಗೆ-ಅರ್ಧ ಚಮಚ,

೭.1-ಬೀಟ್ರೂಟ್‌,ಈರುಳ್ಳಿ-1,
೮.ಕೊತ್ತಂಬರಿ ಸೊಪ್ಪು-ಸ್ವಲ್ಪ,
೯.ತೆಂಗಿನ ತುರಿ-2ಚಮಚ,
೧೦.ಕರಿಬೇವು-ಸ್ವಲ್ಪ ಹಾಗೂ ಉಪ್ಪು-ರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಬಾಂಬೆ ರವೆ, ಗೋಧಿ ಹಿಟ್ಟು ಮತ್ತು ಅಕ್ಕಿ ಹಿಟ್ಟು ಹಾಕಿ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ತುರಿದಿಟ್ಟ ಬೀಟ್ರೂಟ್‌ ಸಣ್ಣಗೆ ಹೆಚ್ಚಿದ ಈರುಳ್ಳಿ, ಅಚ್ಚಖಾರದ ಪುಡಿ, ಜೀರಿಗೆ,ಕಾಳುಮೆಣಸಿನ ಪುಡಿ, ,ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು.

ತದನಂತರ ಈ ಹಿಟ್ಟನ್ನು 5 ರಿಂದ 10ನಿಮಿಷಗಳ ಕಾಲ ಹಾಗೆ ಬಿಡಬೇಕು ಆ ಬಳಿಕ ದೋಸೆ ಪ್ಯಾನ್ ಗೆ ಎಣ್ಣೆಯನ್ನು ಸವರಿ ರೆಡಿ ಮಾಡಿಟ್ಟ ಹಿಟ್ಟನ್ನು ಹಾಕಿ ದುಂಡನೆಯ ಆಕಾರಕ್ಕೆ ತನ್ನಿ. ಎರಡು ಬದಿಯನ್ನು ಚೆನ್ನಾಗಿ ಗರಿ-ಗರಿಯಾಗುವವರೆಗೆ ಕಾಯಿಸಿದರೆ ಬೀಟ್ರೂಟ್‌ ದೋಸೆ ಸವಿಯಲು ಸಿದ್ಧ. ಇದನ್ನು ಯಾವುದೇ ಚಟ್ನಿಯೊಂದಿಗೆ ಸವಿದರು ಬಹಳ ರುಚಿಯಾಗಿರುತ್ತದೆ.

ಮೇಘಾ ಮನೋಹರ ಕಂಪು

Exit mobile version