ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?

Bangalore : ಬೆಂಗಳೂರಿನ ಹೆಬ್ಬಾಗಿಲು ಹೆಬ್ಬಾಳದಲ್ಲಿ (Hebbal) ದಿಗ್ಗಜರ ಕಾದಾಟದ ಕದನ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಹೆಬ್ಬಾಳದ ಮಂದಿ ಬದಲಾವಣೆ ಬಯಸ್ತಿದ್ದಾರಾ? ಹೊಸತನ ಬಯಸೋ ಹೆಬ್ಬಾಳ (Hebbal Assembly Constituency) ಮಂದಿಯ ಈ ಬಾರಿಯ ಆಯ್ಕೆ ಯಾರು? ಗದ್ದುಗೆ ಗುದ್ದಾಟ, ಯಾರಾಗ್ತಾರೆ ಎಂಎಲ್‌ಎ?


ಒಂದು ಕಡೆ ಕಾಂಗ್ರೆಸ್‌ನ (Congress) ಬೈರತಿ ಸುರೇಶ್, ಮತ್ತೊಂದು ಕಡೆ ಬಿಜೆಪಿಯ (BJP) ಪ್ರಬಲ ಆಕಾಂಕ್ಷಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇನ್ನೊಂದು ಕಡೆ ಜೆಡಿಎಸ್‌ನ (JDS) ಡಾ. ಸೈಯದ್‌ ಮೋಹಿದ್‌ ಅಲ್ತಾಫ್‌.

ಸದ್ಯಕ್ಕೆ ಹೆಬ್ಬಾಳದಲ್ಲಿ ಆಡಳಿತದಲ್ಲಿರೋದು ಕಾಂಗ್ರೆಸ್ ಎಂಎಲ್ಎ ಭೈರತಿ ಸುರೇಶ್‌. ಬಿಜೆಪಿ ಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ.

ಆದ್ರೆ ಇದೇ ಕ್ಷೇತ್ರದಲ್ಲಿ ಹಿಂದೆ ಗೆದ್ದು ಸಚಿವರಾಗಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು (Katta Subramanya Naidu) ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಆದ್ರೆ ಜೆಡಿಎಸ್ ಅತ್ಯಂತ ಜಾಣ್ಮೆಯ ನಡೆ ಇಟ್ಟಿದ್ದು ಅತೀ ಹೆಚ್ಚು ಮುಸ್ಲಿಂ ಮತದಾರರಿರುವ ಈ ಕ್ಷೇತ್ರಕ್ಕೆ ವಿದ್ಯಾವಂತ, ವೃತ್ತಿಯಲ್ಲಿ ವಕೀಲರಾಗಿರುವ ಡಾ. ಸೈಯದ್‌ ಮೋಹಿದ್‌ ಅಲ್ತಾಫ್‌ (Dr. Syed Mohid Altaf) ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ : https://vijayatimes.com/vande-bharat-train/

ಜೆಡಿಎಸ್‌ ರಣತಂತ್ರ ಎರಡು ಪ್ರಬಲ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರ ಒಟ್ಟು 8 ವಾರ್ಡ್‌ಗಳನ್ನು ಹೊಂದಿದೆ.

2.75 ಲಕ್ಷ ಮತದಾರರನ್ನು ಹೊಂದಿರುವ ಹೆಬ್ಬಾಳ ಕ್ಷೇತ್ರ ಸದಾ ಹೊಸತನ ಬಯಸುವವರು. ಇವರು ಪ್ರತಿ ವರ್ಷ ಹೊಸ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರವೃತ್ತಿ ಹೊಂದಿದ್ದಾರೆ.

ಈ ಬಾರಿ ಇವರು ಹೊಸತನ ಬಯಸ್ತಿದ್ದಾರಾ? ಅಥವಾ ಕೈ ಗೇ ಜೈ ಅಂತಾರಾ ಕೇಳೋಣ ಬನ್ನಿ.

ಹೆಬ್ಬಾಳ ಕ್ಷೇತ್ರವನ್ನು 5 ವರ್ಷ ಆಳ್ವಿಕೆ ಮಾಡಿರುವ ಭೈರತಿ ಸುರೇಶ್‌ ಬಗ್ಗೆ ಜನರಿಗೆ ಅಸಮಾಧಾನಗಳಿವೆ.

ಇವರು ಕ್ಷೇತ್ರದ ಅಭಿವೃದ್ಧಿಗಿಂತ ಸ್ವ ಅಭಿವೃದ್ಧಿಯನ್ನೇ ಹೆಚ್ಚು ಮಾಡಿದ್ದಾರೆ ಅನ್ನೋ ಆರೋಪ ಇದೆ.

ರಾಜಧಾನಿಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಬ್ಬಾಳ ಕ್ಷೇತ್ರದಲ್ಲಿ ಇನ್ನೂ ಅನೇಕರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಕುಡಿಯುವ ನೀರು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ವಸತಿ ಹೀಗೆ ನಾನಾ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ.


ಹೆಬ್ಬಾಳ ಕ್ಷೇತ್ರದ ಶಾಸಕರ ಪ್ರೋಗ್ರೆಸ್‌ ಕಾರ್ಡ್‌ ನೋಡುವುದಾದ್ರೆ :

ರಸ್ತೆ – 60%
ನೀರು – 50%
ಆರೋಗ್ಯ – 40%
ಶಿಕ್ಷಣ – 40%
ಉದ್ಯೋಗ – 30%
ಜನಸ್ಪಂದನೆ – 60 %

ಇದನ್ನೂ ಓದಿ : https://vijayatimes.com/medicine-will-be-expensive/


ಹೆಬ್ಬಾಳ ಕ್ಷೇತ್ರದ ಜನತೆ ಈ ಹಿಂದೆ ಬಿಜೆಪಿಗೂ ಅವಕಾಶ ನೀಡಿದ್ರು.

ಆದ್ರೆ ಈ ಬಾರಿ ಇಲ್ಲಿ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆ ಅನ್ನೋದು ಇನ್ನೂ ಗೌಪ್ಯವಾಗಿ ಉಳಿದಿದೆ.

ಇಲ್ಲಿ ಯಾವ ನಾಯಕರು ಕಣಕ್ಕಿಳಿಯುತ್ತಾರೆ ಅನ್ನೋದರ ಮೇಲೆ ಸ್ಪರ್ಧೆಯ ತೀವ್ರತೆ (Hebbal Assembly Constituency) ನಿರ್ಧಾರವಾಗುತ್ತೆ.


ಆದ್ರೆ ಹೆಬ್ಬಾಳದಿಂದ ಕಣಕ್ಕಿಳೀಬೇಕು ಅನ್ನೋ ಉತ್ಸಾಹದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಇದ್ದಾರೆ.

ಅವರು ಈಗಾಗಲೇ ಭರ್ಜರಿ ಫೀಲ್ಡ್‌ ವರ್ಕ್‌ ಮಾಡ್ತಿದ್ದಾರೆ. ಈ ಬಾರಿ ಜೆಡಿಎಸ್‌ ಪಕ್ಷ ಹೆಬ್ಬಾಳ ಕ್ಷೇತ್ರದಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದೆ.

ಇಷ್ಟೂ ಬಾರಿಯೂ ಕಾಂಗ್ರೆಸ್‌ ಆಗಲಿ, ಬಿಜೆಪಿ ಆಗಲಿ ಅವರ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತಿದ್ದವರು ಮುಸ್ಲಿಂ ಸಮುದಾಯದವರು.

ಯಾಕಂದ್ರೆ ಇಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಅತ್ಯಧಿಕವಾಗಿದೆ. ಅದಕ್ಕಾಗಿ ಜೆಡಿಎಸ್‌ ಪಕ್ಷ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಉಳಿದ ಪಕ್ಷಗಳ ಬೆವರಿಸಿದೆ.

ಡಾ.ಸೈಯದ್‌ ಮೋಹಿದ್‌ ಅಲ್ತಾಫ್‌ ಅನ್ನೋ ಯುವ, ವಿದ್ಯಾವಂತ ನಾಯಕನನ್ನು ಕಣಕ್ಕಿಳಿಸಿದೆ. ಡಾ.ಅಲ್ತಾಫ್‌ ಅವರು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನಗೆಲ್ಲುತ್ತಿದ್ದಾರೆ.


ಹೆಬ್ಬಾಳದ ಜಾತಿ ಲೆಕ್ಕಾಚಾರ (ಸರಾಸರಿ) :


ಮುಸ್ಲಿಂ – 70,000
ಎಸ್‌ಸಿ/ಎಸ್‌ಟಿ – 35,000
ಒಕ್ಕಲಿಗರು – 38,000
ಹಿಂದುಳಿದ – 22,000
ಕುರುಬರು – 8,000
ಕ್ರಿಶ್ಚಿಯನ್‌ – 12,000
ಲಿಂಗಾಯತರು – 6,000

ಇದನ್ನೂ ಓದಿ : https://vijayatimes.com/medicine-will-be-expensive/


ಜಾತಿ ಸಮೀಕರಣ (Caste equation) ನೋಡುವುದಾದರೆ ಇಲ್ಲಿ ಮುಸ್ಲಿಂ, ಎಸ್‌ಸಿ/ಎಸ್‌ಟಿ ಹಾಗೂ ಒಕ್ಕಲಿಗರದ್ದೇ ಪ್ರಾಬಲ್ಯ.

ಇದೇ ಸಮೀಕರಣವನ್ನು ವರ್ಕೌಟ್‌ ಮಾಡಿ ಕಳೆದ ಬಾರಿ ಕಾಂಗ್ರೆಸ್‌ ಈ ಹಿಂದೆ ಬಿಜೆಪಿ ಗೆದ್ದಿರೋದು.

ಒಂದು ವೇಳೆ ಈ ಬಾರಿ ಮುಸ್ಲಿಂರು ಹಾಗೂ ಒಕ್ಕಲಿಗರು ಒಂದಾಗಿ ಜೆಡಿಎಸ್‌ ಅಭ್ಯರ್ಥಿ ಡಾ. ಮೋಹಿದ್‌ ಅಲ್ತಾಫ್‌ ಅವರಿಗೆ ಮತ ಹಾಕಿದ್ರೆ ಜೆಡಿಎಸ್‌ ಇತಿಹಾಸ ಬರೆಯಲಿದೆ.


ಹೆಬ್ಬಾಳ ಕ್ಷೇತ್ರ ದಲ್ಲಿ ಈ ಬಾರಿ ಜೆಡಿಎಸ್ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿರುವುದು ಸ್ಪಷ್ಟ.

ಆದ್ರೆ ಹೆಬ್ಬಾಳ ಜನತೆ ಕಾಸು, ಕುಕ್ಕರ್‌, ಟಿವಿ ಮುಖ ನೋಡಿ ಮತ ಹಾಕ್ತಾರಾ ಅಥವಾ ಅಭಿವೃದ್ಧಿಗೆ ಒತ್ತು ಕೊಟ್ಟು ಬದಲಾವಣೆ ಬಯಸ್ತಾರೋ ಅನ್ನೋದನ್ನು ಕಾದು ನೋಡಬೇಕು.

Exit mobile version