Health : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸುತ್ತಿರುವ ಜನರಿಗೆ ಇದೀಗ ಸಾಮಾನ್ಯ ಬಳಕೆಯ ಔಷಧ (medicine) ಬೆಲೆ ಏರಿಕೆಯ ಬಿಸಿಯೂ ತಟ್ಟಲಿದೆ. ಸಾಮಾನ್ಯ ಬಳಕೆ ಔಷಧಗಳ (Medicine will be expensive) ಬೆಲೆಯನ್ನು ಏ. 1ರಿಂದ 12.12% ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (National Drug Price Control Authority) ಅನುಮೋದನೆ ನೀಡಿದೆ.
ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ
ಪ್ರತಿವರ್ಷ ಸಗಟು ಬೆಲೆ ಸೂಚ್ಯಂಕವನ್ನು ‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಪರಿಷ್ಕರಿಸುತ್ತದೆ.
ಅದರ ಆಧಾರದ ಮೇಲೆ ‘ಔಷಧ ದರ ನಿಯಂತ್ರಣ ಕಾಯಿದೆ-2013’ರ ಪ್ರಕಾರ ಪ್ರತಿ ವರ್ಷ ಏ. 1 ರಂದು ಬೆಲೆಯನ್ನು ಪರಿಷ್ಕರಿಸುತ್ತದೆ. ಕಳೆದ ವರ್ಷ ಶೇ. 10.76% ರಷ್ಟು ಬೆಲೆ ಏರಿಕೆಗೆ (Medicine will be expensive) ರಾಷ್ಟ್ರೀಯ
ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿತ್ತು. ಈ ವರ್ಷ ಇನ್ನಷ್ಟು ಅಧಿಕ ಪ್ರಮಾಣದಲ್ಲಿ 12.12% ರಷ್ಟು ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಇದನ್ನೂ ಓದಿ : https://vijayatimes.com/notification-of-election-commission/
‘ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ನಿಯಂತ್ರಿಸುವ ಸುಮಾರು 800 ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ (Scheduled Drugs) ಎನ್ನಲಾಗುತ್ತದೆ. ಉಳಿದ ಔಷಧಗಳು ಈ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ‘ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಅಡಿಯಲ್ಲಿ ಬರುವ 800 ಔಷಧಿಗಳಿಗೆ ವಾರ್ಷಿಕ ಗರಿಷ್ಠ ಶೇ. 10 ರಷ್ಟು ಬೆಲೆ ಹೆಚ್ಚಿಸಲು ಅವಕಾಶವಿದೆ.
ಯಾವೆಲ್ಲಾ ಔಷಧಗಳು ದುಬಾರಿ:
ನೋವು ನಿಯಂತ್ರಕ, ಉರಿಯೂತ ನಿಯಂತ್ರಕ ಔಷಧಗಳು (Anti-inflammatory drugs),
ಆ್ಯಂಟಿ ಬಯೋಟಿಕ್, ಆ್ಯಂಟಿ ಫಂಗಲ್, ಕಿವಿ, ಮೂಗು
ಹಾಗೂ ಗಂಟಲಿಗೆ ಸಂಬಂಧಿತ ಔಷಧಗಳು
ಇದೇ ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಔಷಧಗಳ ಕೊರತೆಯಾಗದಂತೆ ಗ್ರಾಹಕರಿಗೂ ಮತ್ತು ತಯಾರಕರಿಗು ಲಾಭವಾಗುವುದನ್ನು ಖಚಿತಪಡಿಸಿಕೊಳ್ಳಲು ಬೆಲೆ ಏರಿಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.