Bangalore: 5 ಮತ್ತು 8ನೇ ತರಗತಿಗಳ ಮಕ್ಕಳ ಬುದ್ದವಂತಿಕೆ ಅರಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾ ರ (State Govt) 5 ಹಾಗೂ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ಪರೀಕ್ಷೆ ನಡೆಸಲು (High Court important order) ಮುಂದಾಗಿತ್ತು.
ಇದೀಗ ಈ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ (High Court) ಅನೂರ್ಜಿತಗೊಳಿಸಿದೆ. ಹಾಗಾಗಿ, ರಾಜ್ಯ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

5 ಮತ್ತು 8ನೇ ತರಗತಿಗಳಿಗೆ ಬೋರ್ಡ್ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸೇರಿದಂತೆ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪ್ರದೀಪ್ಸಿಂಗ್ ಯೆರೂರ್ (Pradeep Singh Yerur) ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಸರಕಾರದ ಉದ್ದೇಶವನ್ನು ಹೈಕೋರ್ಟ್ ಶ್ಲಾಘಿಸಿದೆ. ಆದರೆ, ಅದು ಅನುಸರಿಸಿದ ಪ್ರಕ್ರಿಯೆ ಮತ್ತು ವಿಧಾನವೇ (High Court important order) ಸೂಕ್ತವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೋರ್ಟ್ ತೀರ್ಪೇನು ?
ಮಕ್ಕಳ ಬುದ್ಧಿವಂತಿಕೆ ಪರಿಶೀಲನೆ ಮತ್ತು ಗುಣಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ಅದೇ ರೀತಿ ಶಾಲೆಗಳ ಬೋಧನಾ ಸಿಬ್ಬಂದಿಯ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ.
ಇನ್ನು ಸರಕಾರ ತನ್ನ ಉದ್ದೇಶ ಈಡೇರಿಸಲು ಅನುಸರಿಸಿದ ಕಾರ್ಯ ವಿಧಾನವೇ ಸೂಕ್ತವಾಗಿಲ್ಲ.
ಇದನ್ನೂ ಓದಿ : https://vijayatimes.com/congress-candidates-list-ready/
ಯಾವುದೇ ಸುತ್ತೋಲೆ ಹೊರಡಿಸಿದಾಗ, ಅದು ಶಾಸನಾತ್ಮಕವಾಗಿ ಹೊರಹೊಮ್ಮಬೇಕು ಎಂದು ನ್ಯಾಯಮೂರ್ತಿ ಪ್ರದೀಪ್ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.
ಇನ್ನು ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (Karnataka Non-Granted Educational Institution), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ,
ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘಗಳ ಪರವಾಗಿ ವಾದ ಮಂಡಸಿದ ವಕೀಲರು, ರಾಜ್ಯ ಸರಕಾರ 5 ಮತ್ತು 8ನೇ ತರಗತಿಗಳ ಮಕ್ಕಳಿಗೆ ಬೋರ್ಡ್ ಮಟ್ಟದ ಪರೀಕ್ಷೆಯನ್ನು ಜಾರಿ ಮಾಡಿದ್ದು,
ಇದರಿಂದ ಶಿಕ್ಷಣ ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜೊತೆಗೆ ಮಕ್ಕಳ ಕಲಿಕೆಯ ಮೇಲೆಯೂ ಪರಿಣಾಮ ಬೀರಲಿದೆ.
ಇದನ್ನೂ ಓದಿ : https://vijayatimes.com/suspect-beef-smuggling-in-bihar/
ಹೀಗಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಹಿತದೃಷ್ಟಿಯಿಂದ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಾಲಯ ರದ್ದು ಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು ಇದೀಗ ಬೋರ್ಡ್ ಪರೀಕ್ಷೆಯನ್ನು (Board Exam) ರದ್ದುಗೊಳಿಸಿ ಆದೇಶ ನೀಡಿದೆ.