ಅಯೋಧ್ಯೆಯಲ್ಲಿ ಭಾರೀ ಭದ್ರತೆ: 30,000 ಯೋಧರು, AI ಕಣ್ಗಾವಲು

Lucknow: ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆ @Ayodhya ನಗರ ಜನವರಿ 22ರಂದು ನಡೆಯಲಿರುವ ಭವ್ಯ ರಾಮಮಂದಿರ ಉದ್ಘಾ ಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮೂಲಗಳ ಪ್ರಕಾರ, 3500ಕ್ಕೂ ಹೆಚ್ಚು ವಿವಿಐಪಿಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಇಡೀ ಅಯೋಧ್ಯೆ ನಗರಕ್ಕೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ.

ಭವ್ಯ ರಾಮಮಂದಿರ (Ramamandir) ಉದ್ಘಾಟನಾ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಉನ್ನತ ಮಟ್ಟದ ಅಧಿಕಾರಗಳ ತಂಡವನ್ನೇ ಇದಕ್ಕಾಗಿ ನಿಯೋಜನೆ ಮಾಡಿದೆ. ಮೂಲಗಳ ಪ್ರಕಾರ, ರಾಮ ಮಂದಿರದ ಭದ್ರತೆಯ ಸಂಪೂರ್ಣ ಹೊಣೆಯನ್ನು ಕಮಾಂಡೋ (Commando) ಪಡೆಗಳಿಗೆ ವಹಿಸಲಾಗಿದೆ. ಅಯೋಧ್ಯೆಯಲ್ಲಿ ಎನ್ಎಸ್ಜಿ, ಸಿಆರ್ಪಿಎಫ್ (CRPF), ಸಿಐಎಸ್ಎಫ್ ಸೇರಿದಂತೆ ಸುಮಾರು 30,000 ಯೋಧರನ್ನು ನಿಯೋಜಿಸಲಾಗುತ್ತಿದೆ.

15 ವಿವಿಧ ಭ್ರದ್ರತಾ ತಂಡಗಳು ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಉತ್ತರ ಪ್ರದೇಶ #UttarPradesh ರಾಜ್ಯ ಪಡೆಗಳು ಕೂಡಾ ಭದ್ರತೆಯ ವಿವಿಧ ಹಂತಗಳಲ್ಲಿ ಭಾಗಯಾಗಲಿವೆ. ಇನ್ನು IB, LIU, ATS, STF, NIA ಸೇರಿದಂತೆ 7 ಭದ್ರತಾ ಏಜೆನ್ಸಿಗಳು ಅಯೋಧ್ಯೆಯಲ್ಲೇ ಮೊಕ್ಕಾಂ ಹೂಡಿವೆ. ಗುಪ್ತಚರ ಮಾಹಿತಿ ಸಂಗ್ರಹಿಸಲು ಒಬ್ಬ ಡಿಎಸ್ಪಿ, ಇನ್ಸ್ಪೆಕ್ಟರ್ ಮತ್ತು 6 ಕಾನ್ಸ್ಟೆಬಲ್ಗಳನ್ನು (Constables) ಒಳಗೊಂಡ ಅನೇಕ ತಂಡಗಳನ್ನು ರಚಿಸಲಾಗಿದೆ.

ಎಲ್ಲರ ಮೇಲೂ ನಿಗಾವಹಿಸಲು ಮೊಬೈಲ್ ಟ್ರ್ಯಾಕಿಂಗ್ (Mobile Tracking) ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಪೂರ್ವಸಿದ್ದತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಪ್ತಚರ ತಂಡಗಳು ಅಯೋಧ್ಯೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ. ಆತ್ಮಹತ್ಯಾ ದಾಳಿಗಳನ್ನು ತಡೆಯಲು ದೇವಸ್ಥಾನದ ಸುತ್ತಲೂ ಕ್ರ್ಯಾಶ್ ರೇಟ್ (Crash Rate) ಬೋಲಾರ್ಡ್ಗಳನ್ನು ಅಳವಡಿಸಲಾಗುತ್ತಿದೆ.

ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಎಐ ತಂತ್ರಜ್ಞಾನದ ಮೂಲಕ ನಿಗಾ ಇಡಲಾಗುತ್ತಿದೆ. ಇನ್ನು ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯನ್ನು ಭದ್ರತಾ ಪಡೆಯ 6ನೇ ಕಾರ್ಪ್ಸ್ಗೆ ನೀಡಲಾಗಿದೆ. ಇಡೀ ಅಯೋಧ್ಯೆ ನಗರವನ್ನು ವಿವಿಧ ಸೆಕ್ಟರ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ 100 ಡಿಎಸ್ಪಿ, 300 ಇನ್ಸ್ಪೆಕ್ಟರ್, 800 ಸಬ್ ಇನ್ಸ್ಪೆಕ್ಟರ್ ಮತ್ತು 4,500 ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ.

ನಗರದಲ್ಲಿ ಜನವರಿ (January) 21 ಮತ್ತು 22ರಂದು ಭಾರೀ ವಾಹನಗಳು ಸಂಚರಿಸುವಂತಿಲ್ಲ. ಅನುಮತಿಯಿಲ್ಲದೇ ಡ್ರೋನ್ಗಳನ್ನು (Drone) ಹಾರಿಸುವಂತಿಲ್ಲ. ಜನಸಂದಣಿಯಲ್ಲಿ ಅವ್ಯವಸ್ಥೆ ಹರಡುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಭಕ್ತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ಪೊಲೀಸರಿಗೆ ವಿಶೇಷ ತರಭೇತಿ ನೀಡಲಾಗಿದೆ.

Exit mobile version