ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ HCL, CEO ಸಿ. ವಿಜಯಕುಮಾರ್ ಬಗ್ಗೆ ತಿಳಿದಿದೆಯಾ? ; ಇಲ್ಲಿದೆ ಮಾಹಿತಿ ಓದಿ

CEO

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಅಲಂಕರಿಸುವವರಿಗೆ ದೊಡ್ಡ ಮಟ್ಟದ ವೇತನ(Salary) ನೀಡಲಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿದೆ. ಐಟಿ(IT) ಕ್ಷೇತ್ರದಲ್ಲಿ ಅತ್ಯಧಿಕ ವೇತನ ಪಡೆಯುವ ಸಿಇಓ(CEO) ಗಳಲ್ಲಿ ಒಬ್ಬರಾದ ಸಿ. ವಿಜಯಕುಮಾರ್(C. VijayaKumar) ಅವರ ಬಗ್ಗೆ ನಿಮಗೆ ತಿಳಿದಿದೆಯಾ? ಸಿ.ವಿಜಯಕುಮಾರ್ ಅವರು ಎಚ್‌ಸಿಎಲ್ ಟೆಕ್ನಾಲಜೀಸ್‌ನ(HCL Technologies) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರು ಪ್ರಸ್ತುತ ಯುಎಸ್-ಇಂಡಿಯಾ(US-India) ಬಿಸಿನೆಸ್ ಕೌನ್ಸಿಲ್ನ ಮಂಡಳಿಯ ಸದಸ್ಯರೂ ಕೂಡ ಹೌದು.


ವಿಜಯ್ ಕುಮಾರ್ ಅವರು ತಮಿಳುನಾಡು(Tamilnadu) ರಾಜ್ಯದ ಕೊಯಮತ್ತೂರಿನಲ್ಲಿ(Coimbatore) ಜನಿಸಿದರು. ತಮಿಳುನಾಡಿನ ಲವ್‌ಡೇಲ್‌ನ ಲಾರೆನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು, 1986 ರಲ್ಲಿ ಪದವಿ ಪಡೆದರು. ಇವರು ತಮಿಳುನಾಡಿನ PSG ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಸಿ.ವಿಜಯಕುಮಾರ್ ಅವರು 1994 ರಲ್ಲಿ HCL ಟೆಕ್ನಾಲಜೀಸ್ ಕಂಪನಿಯಲ್ಲಿ ಹಿರಿಯ ತಾಂತ್ರಿಕ ಇಂಜಿನಿಯರ್ ಆಗಿ ಸ್ಟಾರ್ಟ್ಅಪ್ ತಂಡದಲ್ಲಿ ಸೇರಿದರು.

ತಮ್ಮ ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದ ಫಲವಾಗಿ, ಜುಲೈ 2016 ರಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡರು. ಕಂಪನಿಯ COO ಆಗುವ ಮೊದಲು, ಇವರು HCL ನ ಮೂಲಸೌಕರ್ಯ ಸೇವೆಗಳ ವ್ಯವಹಾರದ ಅಧ್ಯಕ್ಷರಾಗಿದ್ದರು. ಇನ್ನು, ಸಿಇಓ ಆಗಿರುವವರ ವೇತನದ ಬಗ್ಗೆ ಹೇಳುವುದಾದರೆ, 2021-22 ರ ಅವಧಿಯಲ್ಲಿ ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ 9.36 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 71.02 ಕೋಟಿ ರೂಪಾಯಿ ಆಗಿದೆ.

ಟಿಸಿಎಸ್ ಸಿಇಓ ರಾಜೇಶ್ ಗೋಪಿನಾಥನ್ ಹಣಕಾಸು ವರ್ಷ 2022ರಲ್ಲಿ 34 ಕೋಟಿ ರೂಪಾಯಿ ಅಂದ್ರೆ 4.48 ಮಿಲಿಯನ್ ಡಾಲರ್ ವೇತನ ಪಡೆದಿದ್ದಾರೆ. ಇನ್ನು ಹಣಕಾಸು ವರ್ಷ 2021ರಲ್ಲಿ ಎಚ್‌ಸಿಎಲ್ ಸಿಇಓ ಸಿ. ವಿಜಯಕುಮಾರ್ 4.15 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಟೆಕ್ ಮಹೀಂದ್ರಾದ ಸಿಪಿ ಗುರ್ನಾನಿ(CP Gurnani) 2.83 ಮಿಲಿಯನ್ ಡಾಲರ್ ಸಂಭಾವನೆಯನ್ನು ಪಡೆದಿದ್ದಾರೆ. ಹೀಗೆ, ವಿಜಯಕುಮಾರ್ ಅವರು ಅತ್ಯಧಿಕ ಸಂಬಳ ಪಡೆಯುವ ಸಿಇಒ ಗಳ ಪೈಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Exit mobile version