ಮುಂದಿನ ಆದೇಶದವರೆಗೂ ಹಿಜಾಬ್ – ಕೇಸರಿ ಶಾಲು ಧರಿಸುವಂತಿಲ್ಲ!

hijab case

ಬೆಂಗಳೂರು : ಹಿಜಾಬ್‌ ವಿವಾದ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಇಂದೂ ಕೂಡ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಾಗಿ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದ್ದು, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು ಎಂದಿದೆ. ಈ ಕುರಿತು ಮೌಖಿಕ ಆದೇಶ ನೀಡಿದ ಹೈಕೋರ್ಟ್ ಸಿಜೆ, ಮುಂದಿನ ವಿಚಾರಣೆಯನ್ನ ಸೋಮವಾರ ಮಧ್ಯಹ್ನ 2.30 ರ ಸಮಯಕ್ಕೆ ಮುಂದೂಡಲಾಗಿದೆ.

ಈಗ ಮಧ್ಯಂತರ ಆದೇಶ ನೀಡಲು ಬಯಸುತ್ತೇವೆ. ಅದ್ರಂತೆ, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ವಿಚಾರಣೆ ಮುಗಿಯುವವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಶಾಲು ಧರಿಸುವಂತಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು ಎಂದಿದ್ದಾರೆ. ಇನ್ನು ಶೀಘ್ರದಲ್ಲಿಯೇ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನ ಪ್ರಾರಂಭಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

Exit mobile version