ಡಿಗ್ರಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಗೆ ಅನುಮತಿ ನಿರಾಕರಣೆ!

highcourt

ಹಿಜಾಬ್(Hijab) ವಿವಾದದ ಕುರಿತು ರಾಜ್ಯ ಹೈಕೋರ್ಟ್(Highcourt) ಅಂತಿಮ ತೀರ್ಪು(Verdict) ನೀಡಿ ಅನೇಕ ದಿನಗಳೇ ಕಳೆದಿವೆ. ಆದರೆ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತಾ ಕಣ್ಣೀರು ಹಾಕುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ರಾಜ್ಯ ಹೈಕೋರ್ಟ್ ಶಾಲೆಗಳಲ್ಲಿ ಹಿಜಾಬ್(Hijab) ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು, ಕೆಲ ಮುಸ್ಲಿಂ ವಿದ್ಯಾರ್ಥಿನಿಯರ ಮೊಂಡುತನ ಮುಂದುವರೆದಿದೆ. ಶಿವಮೊಗ್ಗದ(Shivmoga) ಡಿವಿಎಸ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಶಾಹಿನ್ ಪರೀಕ್ಷೆ ಬರೆಯಲು ಹಿಜಾಬ್ ಧರಿಸಿ ಹೋಗಿದ್ದಳು. ಆದರೆ ನ್ಯಾಯಾಲಯದ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯುವಂತೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿ ಶಾಹಿನ್ ಮನವೊಲಿಸಲು ಪ್ರಯತ್ನಿಸಿದರು, ವಿದ್ಯಾರ್ಥಿನಿ ಪರೀಕ್ಷೆ ಬರೆಯದೆ ಮನೆಗೆ ತೆರಳಿದ್ದಾಳೆ ಎನ್ನಲಾಗಿದೆ. ಹಿಜಾಬ್ ಕಾರಣದಿಂದ ಪರೀಕ್ಷೆ ಬರೆಯದೆ ಹೋದ ಶಾಹಿನ್ ಮನೆಗೆ ಹೋಗಿ ವಿಡಿಯೋ ಮಾಡಿ ಕಾಲೇಜು ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾಳೆ. ನನ್ನ ಎಲ್ಲಾ ಸ್ನೇಹಿತರು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಹಿಜಾಬ್ ಧರಿಸಿರುವ ಕಾರಣ ನನಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಗಿದೆ.

ರಾಜಕೀಯ ಕಾರಣಕ್ಕಾಗಿ ನಮಗೆ ಹೀಗೆ ಮಾಡಲಾಗುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಕನಸು ಮತ್ತು ಭವಿಷ್ಯವನ್ನು ಹತ್ತಿಕ್ಕಲಾಗುತ್ತಿದೆ. ಆದರೆ ನಾವು ನಮ್ಮ ಹಕ್ಕನ್ನು ಪಡೆದುಕೊಂಡು ಮತ್ತೆ ಮರಳಿ ಬರುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾಳೆ. ಇನ್ನು ವಿದ್ಯಾರ್ಥಿನಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version