ಗುಲಾಬಿ ಬಣ್ಣದ ನೀರಿನಿಂದ ಮನಸೆಳೆಯುವ ಪ್ರಾಕೃತಿಕ ಅಚ್ಚರಿ ; ಆಸ್ಟ್ರೇಲಿಯಾದ ಹಿಲ್ಲಿಯರ್‌ ಸರೋವರ!

Australia : ಈ ಜಗತ್ತೇ ಒಂದು ವಿಸ್ಮಯಗಳ ಆಗರ. ಪ್ರಪಂಚದಲ್ಲಿ ಹಲವಾರು ನಿಗೂಢಗಳು, ವಿಚಿತ್ರಗಳು, ವೈಪರೀತ್ಯಗಳು ಆಗಾಗ ಎದುರಾಗಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

ಅಂತಹ ಒಂದು ಪ್ರಾಕೃತಿಕ ವೈಶಿಷ್ಟ್ಯವೇ ಗುಲಾಬಿ ಸರೋವರ(Lac Rose).

ಈ ಗುಲಾಬಿ ಸರೋವರ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವೆನಿಸಿದ್ದು, ನೈಸರ್ಗಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಗುಲಾಬಿ ಬಣ್ಣದ ನೀರಿನಿಂದ ಮೋಡಿ ಮಾಡುವ ಆಸ್ಟ್ರೇಲಿಯಾದ (Lake Australia) ಈ ಸರೋವರದ ಹೆಸರು ಹಿಲ್ಲಿಯರ್‌ ಸರೋವರ.

ಸಾಗಿದಷ್ಟು ದೂರ, ದೃಷ್ಟಿ ಅಲುಗಾಡಿಸಲೇಬಾರದು ಎನ್ನುವ ಮನಮೋಹಕ ಗುಲಾಬಿ ಸರೋವರವಿದು. ಇದು ಆಸ್ಟ್ರೇಲಿಯಾ ದೇಶದ ಸುವರ್ಣ ಹಿನ್ನಾಡು ಪ್ರದೇಶದಲ್ಲಿ ಎಸ್ಪೆರನ್ಸ್‌ಗೆ ಸಮೀಪವಿದೆ.

ಈ ಸರೋವರದ ಗುಲಾಬಿ ಬಣ್ಣಕ್ಕೆ ಕಾರಣವೂ ಇದೆ. ಕೆಲವು ವಿಜ್ಞಾನಿಗಳ ಊಹೆಯಂತೆ, ಸರೋವರದ ಕೆಳಗಿನ ಉಪ್ಪಿನ ಗಟ್ಟಿ ಪದರದಲ್ಲಿ, ಬ್ಯಾಕ್ಟೀರಿಯಾಗಳು ಸೃಷ್ಟಿಸಿದ ರಂಗು ಇದಕ್ಕೆ ಕಾರಣವಂತೆ.

ಇನ್ನೂ ಕೆಲವು ವಿಜ್ಞಾನಿಗಳು (Scientists) ಹೇಳುವಂತೆ, ಸಾಗರದ ಉಪ್ಪಿನ ಕ್ಷೇತ್ರಗಳಲ್ಲಿ ಕಂಡುಬರುವ ಡುನಾಲೈಲ್ಲ ಸಲೀನಾ ಎಂಬ ಕಡಲ ಪಾಚಿ ಹಸಿರು ಸೂಕ್ಷ್ಮಾಣು ಜೀವಿಯಿಂದ ಗುಲಾಬಿ ಬಣ್ಣಕ್ಕೆ ಬಂದಿದೆ.

ಅಲಂಕರಣ ಹಾಗೂ ಪೂರಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಇದಕ್ಕೆ ಉತ್ಕರ್ಷಣ ನಿರೋಧಕ ಶಕ್ತಿಯಿದ್ದು,

ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಇದರಲ್ಲಿಯ ಬೀಟಾ ಕ್ಯಾರೋಟನ್‌ ವರ್ಗಕ್ಕೆ ಸೇರಿದ ಕೆಂಪು ವರ್ಣ ದ್ರವದಿಂದ ಈ ಬಣ್ಣ ಬಂದಿದೆ.

ಬೆಚ್ಚನೆಯ ಹವಾಮಾನ, ಸೂರ್ಯನ ಬೆಳಕು, ಸ್ವಲ್ಪ ಮಳೆ ಹಾಗೂ ಅತಿ ಹೆಚ್ಚು ಉಪ್ಪಿನ ಮಟ್ಟ ಮುಂತಾದ ಕಾರಣಗಳು ಇದಕ್ಕಿವೆ.

ರಾಜಹಂಸಗಳು, ಕೊಕ್ಕರೆಗಳು ಈ ಪಾಚಿ ತಿಂದು, ಗುಲಾಬಿ ಬಣ್ಣ ಹೊಂದುತ್ತಿವೆ. ಕಾಲಾನಂತರದಲ್ಲಿ, ಬಣ್ಣ ಕಳೆದುಕೊಂಡು ಈ ಸರೋವರ ನೀಲಿಯಾಗಬಹುದು. 1889ರಲ್ಲಿ ಎಡ್ವರ್ಡ್‌ ಆ್ಯಂಡ್ರೂಸ್‌ ಎನ್ನುವ ವ್ಯಕ್ತಿ, ಈ ಸರೋವರದಿಂದ ಉಪ್ಪನ್ನು ಉತ್ಪಾದಿಸುವ ವಾಣಿಜ್ಯ ಪದಾರ್ಥಗಳನ್ನು ಪರಿಶೀಲಿಸಿದರು.

ಇದನ್ನೂ ಓದಿ : https://vijayatimes.com/state-bjp-slams-siddaramaiah-and-dks/

ಸುಮಾರು ಒಂದು ವರ್ಷ ಉಪ್ಪಿನ ಸಂಗ್ರಹದ ಕೆಲಸವನ್ನೂ ಮಾಡಿದರು. ಇಷ್ಟೆಲ್ಲಾ ವೈಶಿಷ್ಟ್ಯತೆಯನ್ನು ಹೊಂದಿರುವ ಈ ಸರೋವರದ ನೀರು ವಿಷರಹಿತವಾಗಿದ್ದು, ಭಯವಿಲ್ಲದೆ ಯಾರು ಬೇಕಾದರೂ ಇದರಲ್ಲಿ ಈಜಾಡಬಹುದು.

ಈ ಸ್ಥಳವನ್ನು ತಲುಪಲು ಹೆಚ್ಚು ಸಾರಿಗೆ ವ್ಯವಸ್ಥೆಗಳಿಲ್ಲವಾದರೂ, ಹೆಲಿಕಾಪ್ಟರ್ ಅಥವಾ ದೋಣಿ ಮೂಲಕ ಇಲ್ಲಿಗೆ ತಲುಪಬಹುದು.

Exit mobile version