ಮದರಸಾದಲ್ಲಿ ಓದಿದ್ರೆ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ : ಹಿಮಂತ್ ಬಿಸ್ವಾ ಶರ್ಮಾ!

Himanth

ಇಂದಿನ ಮಕ್ಕಳಿಗೆ ನಾವು ಆಧುನಿಕ ಶಿಕ್ಷಣವನ್ನು ನೀಡಬೇಕು. ಇದರಿಂದ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ.

ಆಧುನಿಕ ಶಿಕ್ಷಣ ಪಡೆದ ಮಕ್ಕಳಿಗೆ ಅನೇಕ ಆಯ್ಕೆಗಳು ಇರುತ್ತವೆ. ಆದರೆ ಧಾರ್ಮಿಕ ಶಿಕ್ಷಣವನ್ನು ಮನೆಯಲ್ಲಿಯೇ ನೀಡಬೇಕು ಎಂದು ಅಸ್ಸಾಂ(Assam) ಮುಖ್ಯಮಂತ್ರಿ(Chiefminister) ಹಿಮಂತ್ ಬಿಸ್ವಾ(Himanth Biswa) ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಮದರಸಾದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದನ್ನು ವಿರೋಧಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮದರಸಾದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅವರು ಇಂದಿನ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ.

ಮದರಸಾದಲ್ಲಿ ಓದಿದರೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಧಾರ್ಮಿಕ ಶಿಕ್ಷಣ ಮಕ್ಕಳ ಮನಸ್ಸನ್ನು ಸಂಕುಚಿತಗೊಳಿಸುತ್ತದೆ. ಹೀಗಾಗಿ ಮಕ್ಕಳನ್ನು ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳಿಗೆ ಸೇರಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು. ಇನ್ನು ಮದರಸಾದಲ್ಲಿ ಓದಿದ ಮಗುವಿಗೆ ಭವಿಷ್ಯದಲ್ಲಿ ಏನನ್ನಾದರೂ ಮಾಡುವ ಆಯ್ಕೆ ಇರುವುದಿಲ್ಲ. ಮಗುವಿನ ಮನಸ್ಸಿನಲ್ಲಿ ಮದರಸಾ ಎಂಬ ಪದ ಇರುವವರೆಗೂ ಆ ಮಗು ಎಂದಿಗೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ.

ಇನ್ನು ಯಾವುದೇ ಧಾರ್ಮಿಕ ಸಂಸ್ಥೆಯನ್ನು ಪ್ರವೇಶಿಸುವ ವ್ಯಕ್ತಿಯೂ ತನ್ನದೇ ಆದ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಸಾಮಥ್ರ್ಯವನ್ನು ಹೊಂದಿರಬೇಕು ಎಂದರು. ಇನ್ನು ಪ್ರತಿ ಮಗುವೂ ಗಣಿತ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಆಧುನಿಕ ಶಿಕ್ಷಣವನ್ನು ಪಡೆಯಬೇಕು. ಆಧುನಿಕ ಜಗತ್ತಿನಲ್ಲಿ ತನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಈ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಬೇಕು.

ಈ ರೀತಿಯ ಸಾಮಥ್ರ್ಯವನ್ನು ಆಧುನಿಕ ಶಿಕ್ಷಣ ನೀಡುತ್ತದೆ ಹೊರತು ಧಾರ್ಮಿಕ ಶಿಕ್ಷಣವಲ್ಲ. ಧಾರ್ಮಿಕ ಶಿಕ್ಷಣ ಮನೆಗೆ ಮಾತ್ರ ಸಿಮೀತವಾಗಿರಬೇಕು ಎಂದು ಹೇಳಿದರು.

Exit mobile version