ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

ಹಿಂದೂ ಧರ್ಮದ(Hindu Mythology) ಎರಡು ಪ್ರಮುಖ ಗ್ರಂಥಗಳು ರಾಮಾಯಣ(Ramayana) ಹಾಗೂ ಮಹಾಭಾರತ(Mahabharatha). ರಾಮಾಯಣ ಹಾಗೇ ಮಹಾಭಾರತ ನಿಜವಾಗಲೂ ನಡೆದಿದೆಯೇ ಅಥವಾ ಇವೆಲ್ಲ ಕೇವಲ ಕಥೆಗಳಷ್ಟೇನಾ ಎನ್ನುವ ಗೊಂದಲ ಇವತ್ತು ನಿನ್ನೆಯದಲ್ಲ.

ಹೀಗೊಂದು ಅನುಮಾನ ನಮ್ಮ ಮಹಾಕಾವ್ಯಗಳ ಬಗ್ಗೆ ಅನಾದಿಕಾಲದಿಂದಲೂ ಸಹ ಇದೆ. ರಾಮಾಯಣ ಹಾಗೇ ಮಹಾಭಾರತ ಹಲವಾರು ಕವಿಗಳ ಕಲ್ಪನೆಯಲ್ಲಿ ರಚಿತವಾದ ಕಥೆಗಳೆಂದು ಕೆಲವರು ಹೇಳುತ್ತಾರೆ. ರಾಮಾಯಣ ಎನ್ನುವುದು ಸತ್ಯವೋ ಅಥವಾ ಸುಳ್ಳು ಎನ್ನುವ ಅನುಮಾನದ ಬೆನ್ನಲ್ಲೇ ಅವುಗಳು ಖಂಡಿತವಾಗಿಯೂ ಸತ್ಯ ಎನ್ನುವ ವಿಷಯಕ್ಕೆ ಬೆಂಬಲ ನೀಡುವಂತೆ ಹಲವಾರು ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ದೊರಕಿವೆ.


ಹನುಮಂತನು ರಾಮನನ್ನು ಭಕ್ತಿಯಿಂದ ಜಪಿಸಿ ತನ್ನಲ್ಲಿರುವ ವಿಶಿಷ್ಟವಾದ ಶಕ್ತಿಯಿಂದ ಬೃಹದಾಕಾರವಾಗಿ ಬೆಳೆದು ಸಂಜೀವಿನಿ ಬೆಟ್ಟವನ್ನು ತಲುಪಿ ಪರ್ವತವನ್ನು ಒಂದೇ ಕೈಯಲ್ಲಿ ಎತ್ತಿಕೊಂಡು ಲಕ್ಷ್ಮಣ ಇರುವಲ್ಲಿ ಬರುತ್ತಾನೆ, ನಂತರ ಅದರಲ್ಲಿದ್ದ ಸಂಜೀವಿನಿಯಿಂದ ಲಕ್ಷ್ಮಣ ಚೇತರಿಸಿಕೊಳ್ಳುತ್ತಾನೆ ಎನ್ನುವ ಕಥೆ ನಿಮಗೆ ತಿಳಿದಿದೆ. ಈ ರೀತಿ ಹನುಮಂತ ಹೊತ್ತು ತಂದ ಪರ್ವತದ ಹೆಸರು ದ್ರೋಣಗಿರಿ ಪರ್ವತ, ಇದು ಈಗಲೂ ಕೂಡ ಶ್ರೀಲಂಕಾದಲ್ಲಿ ಇದೆ. ಈಗಲೂ ಲಂಕೆಯಲ್ಲಿರುವ ದ್ರೋಣಗಿರಿ ಪರ್ವತ ತನ್ನ ವಿಶಿಷ್ಟ ಔಷಧೀಯ ಗುಣ ಹಾಗೂ ಸಸ್ಯ ವರ್ಗದಿಂದ ವಿಶೇಷತೆ ಪಡೆದುಕೊಂಡಿದೆ.


ಈಗಿನ ತಮಿಳುನಾಡಿನ ರಾಮೇಶ್ವರದಿಂದ ಮನ್ನಾರ್ ದೀಪದವರೆಗೂ ಇರುವ ಸೇತುವೆ, ವಾನರರು ಕಟ್ಟಿದ ಸೇತುವೆ ಎನ್ನುವುದಕ್ಕೆ 7 ಜೀವಂತ ಸಾಕ್ಷಿಗಳು ದೊರಕಿವೆ. ಶ್ರೀರಾಮ ಸೇತುವೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ಕುರಿತು ನ್ಯಾಷನಲ್ ಜಿಯಾಗ್ರಫಿ ಚಾನೆಲ್ ನವರು ಕೂಡ ಪ್ರಮಾಣೀಕರಿಸಿದ್ದಾರೆ. ಹನುಮಂತನು ಶ್ರೀರಾಮನಿಗಾಗಿ ಕಾಯುತ್ತಿದ್ದ ಸ್ಥಳದ ಬಗ್ಗೆಯೂ ಮಾಹಿತಿ ಇದೆ. ರಾಮಾಯಣದಲ್ಲಿ ಈ ಸ್ಥಳದ ಬಗ್ಗೆ ಬರೆಯಲಾಗಿದೆ, ಇಂದು ಅಯೋಧ್ಯೆಯ ಸಮೀಪವಿರುವ ಈ ಸ್ಥಳದಲ್ಲಿ ಹನುಮಾನ್ ದೇವಾಲಯವೂ ಇದೆ.

ಹನುಮಂತನು ಸೀತೆಯನ್ನು ಹುಡುಕಲು ಸಮುದ್ರವನ್ನು ದಾಟಿದಾಗ, ಅವನು ಭವ್ಯವಾದ ರೂಪವನ್ನು ಪಡೆದನು. ಅದಕ್ಕಾಗಿಯೇ ಅವರು ಶ್ರೀಲಂಕಾವನ್ನು ತಲುಪಿದಾಗ ಅವನ ಹೆಜ್ಜೆಗುರುತುಗಳು ಅಲ್ಲಿ ಮೂಡಿದವು, ಅವು ಇಂದಿಗೂ ಅಲ್ಲಿವೆ ಎನ್ನುವುದು ವಿಸ್ಮಯವೇ ಸರಿ. ಸ್ವತಃ ಪುರಾತತ್ವ ಇಲಾಖೆಯೂ ಶ್ರೀರಾಮನ ಅಸ್ತಿತ್ವವನ್ನು ನಂಬುತ್ತದೆ. ಪುರಾತತ್ವ ಇಲಾಖೆಯ ಪ್ರಕಾರ, 1,750,000 ವರ್ಷಗಳ ಹಿಂದೆ ಸೇತುವೆ ನಿರ್ಮಾಣವಾಗಿದೆ. ರಾಮಸೇತು ಕೂಡ ಅದೇ ಅವಧಿಗೆ ಸೇರಿದೆ. ರಾಮಸೇತು ಎಂತಹ ಸೇತುವೆಯೆಂದರೆ, ಅದರ ಕಲ್ಲುಗಳು ನೀರಿನ ಮೇಲೆ ತೇಲುತ್ತಿದ್ದವು.

ಸುನಾಮಿಯ ನಂತರ ಆ ಕೆಲವು ಕಲ್ಲುಗಳು ಬೇರ್ಪಟ್ಟು ರಾಮೇಶ್ವರಂನಲ್ಲಿ ಬಿದ್ದವು. ಸಂಶೋಧಕರು ಆ ಕಲ್ಲುಗಳನ್ನು ಮತ್ತೆ ನೀರಿನಲ್ಲಿ ಎಸೆದಾಗ, ಅವು ಮುಳುಗದೇ ತೇಲುತ್ತಿದ್ದವು ಎನ್ನುವುದು ಅಚ್ಚರಿಯ ವಿಷಯ.

Exit mobile version