ಅನಂತ ಪದ್ಮನಾಭ ದೇವಾಲಯದ ಆ ರಹಸ್ಯ ಕೋಣೆಯನ್ನು ತೆರೆಯಲು ಯಾಕೆ ಸಾಧ್ಯವಿಲ್ಲ ಗೊತ್ತಾ? ಇಲ್ಲಿದೆ ಮಾಹಿತಿ

anantha padmanabha swamy

Thiruvanthapuram : ತಿರುವನಂತಪುರಂನಲ್ಲಿರುವ ವೈಷ್ಣವರ ಆರಾಧ್ಯ ದೈವ ಅನಂತ ಪದ್ಮನಾಭನ (Anantha Padmanabha) ದೇಗುಲ ನಿರ್ಮಿಸಿದ್ದು ತಿರುವಾಂಕೂರು ರಾಜವಂಶಸ್ಥರು.

ತಿರುವಾಂಕೂರು ಸಂಸ್ಥಾನದ ಸ್ಥಾಪಕ ರಾಜ ಮಾರ್ತಾಂಡ ವರ್ಮ ಈ ದೇಗುಲ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ.

ತಿರುವಾಂಕೂರು ರಾಜವಂಶಸ್ಥರನ್ನು ಪದ್ಮನಾಭ ದಾಸರು ಎಂದೇ ಕರೆಯುವ ಪ್ರತೀತಿ. ಈ ದೇಗುಲಕ್ಕೆ 8ನೇ ಶತಮಾನದಿಂದಲೂ ಇತಿಹಾಸ (History) ಇದೆ,

ಇದರ 100 ಅಡಿ ಎತ್ತರದ ಬೃಹತ್‌ ಗೋಪುರ ಸ್ಥಾಪನೆಯಾದದ್ದು, 1566ನೇ ಇಸವಿಯಲ್ಲಿ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇಗುಲದ ಪ್ರಮುಖ ಆಕರ್ಷಣೆ ಪನ್ನಗ ಶಯನ ಅನಂತ ಪದ್ಮನಾಭ.

ಏಕ ಶಿಲೆಯಲ್ಲಿರುವ ಈ ಅನಂತ ಶಯನನ್ನು ಮೂರು ಬಾಗಿಲುಗಳಿಂದ ದರ್ಶನ ಪಡೆಯಬೇಕು. ತಮಿಳುನಾಡಿನ(Tamilnadu) ಅನಂತಪದ್ಮನಾಭ ಸ್ವಾಮಿಯ ಬಗ್ಗೆ ಅನೇಕ ಕಥೆಗಳಿವೆ, ಇದು ತಮಿಳುನಾಡಿನ ಪುರಾತನ ದೇವಾಲಯವಾಗಿದೆ.

ಈ ದೇವಾಲಯದಲ್ಲಿ ನಿಗೂಡವಾದ ದೊಡ್ಡ ಬಾಗಿಲು ಇದೆ, ಈ ಬಾಗಿಲನ್ನು ಸಿದ್ಧ ಸಾಧು ಮಾತ್ರ ಗರುಡ ಮಂತ್ರದ ಮೂಲಕ ಅದನ್ನು ತೆರೆಯಬಲ್ಲನೆಂಬ ನಂಬಿಕೆ ಇದೆ.

ಇದನ್ನೂ ಓದಿ : https://vijayatimes.com/9-year-old-girl-dressed-up-as-durga/

ಈ ಬಾಗಿಲಿನ ಹಿಂದಿನ ಸತ್ಯ ಏನು ಎಂದು ಯಾರಿಗೂ ತಿಳಿದಿಲ್ಲ. ಕೆಲ ವರ್ಷಗಳ ಹಿಂದಷ್ಟೇ ಸಂಪದ್ಭರಿತ ದೇವಸ್ಥಾನವೆಂದೇ ಪ್ರಸಿದ್ಧವಾದ ಅನಂತ ಪದ್ಮನಾಭ ದೇವಸ್ಥಾನದಲ್ಲಿ 6ನೇ ಸಂಖ್ಯೆಯ ಬಾಗಿಲನ್ನು ತೆಗೆಯಲಾಗಿತ್ತು.

ಅದರಲ್ಲಿ ಚಿನ್ನದ ಸರಪಳಿ, (History Of Anantha Padmanabha Swamy Temple) ವಿಭಿನ್ನ ರೀತಿಯ ವಜ್ರಗಳು, 1,32,000 ಕೋಟಿ ಮೌಲ್ಯದ ವಿಷ್ಣುವಿನ ಮೂರ್ತಿ ಕೂಡ ಸಿಕ್ಕಿತ್ತು.

ಈ ಕಾರಣಕ್ಕೆ 7ನೇ ಸಂಖ್ಯೆಯ ಬಾಗಿಲನ್ನೂ ಕೂಡ ತೆಗೆಯಬೇಕೆಂದು ನಿರ್ಧರಿಸಲಾಯಿತು. ಆದರೆ ಈ ಬಗೆಗಿನ ಇತಿಹಾಸ ತಿಳಿದ ತಜ್ಞರು, ಆ ಕೆಲಸಕ್ಕೆ ಮುಂದಾಗಲಿಲ್ಲ.

ಏಕೆಂದರೆ, ಹಲವು ವರ್ಷಗಳ ಹಿಂದೆ 7ನೇ ಸಂಖ್ಯೆಯ ಬಾಗಿಲನ್ನು ತೆಗೆಯುವ ಕೆಟ್ಟ ಕುತೂಹಲದ ಪ್ರಯತ್ನವನ್ನ ವ್ಯಕ್ತಿಯೋರ್ವ ಮಾಡಿದ್ದ. ಆಗ ಆತನಿಗೆ ಎರಡು ವಿಷಸರ್ಪಗಳು ಕಚ್ಚಿ ಸಾಯಿಸಿದ್ದವು.


7ನೇ ಸಂಖ್ಯೆಯ ಬಾಗಿಲ ಮೇಲೆ ಎರಡು ಸರ್ಪದ ಚಿತ್ರಗಳಿದೆ. ಇದೇ ಸರ್ಪಗಳು ಈ ರೂಮಿನಲ್ಲಿರುವ ಚಿನ್ನಾಭರಣವನ್ನು, ವಜ್ರ ವೈಢೂರ್ಯವನ್ನು ಕಾಪಾಡುತ್ತಿದೆ ಎಂಬ ನಂಬಿಕೆ ಇದೆ.

ಇದಕ್ಕೆ ಆಸೆ ಬಿಟ್ಟು ಹೋದವರಿಗೆ ಸಾವು ತಂದುಕೊಡುವುದು ಕೂಡ ಈ ಸರ್ಪಗಳೇ ಎಂದು ಹೇಳಲಾಗುತ್ತದೆ. ಈ ಕೋಣೆಗೆ, ನಾಗ ಬಂಧಂ ಅಥವಾ ನಾಗ ಪಾಶಂ ಸಹಾ ಇದೆ ಎಂದು ಹೇಳಲಾಗುತ್ತದೆ.

ಈ ಕೋಣೆಯಲ್ಲಿ ಹದಿನಾರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಮಾರ್ತಾಂಡವರ್ಮನ ಕಾಲದಲ್ಲಿ ನೆಲೆಸಿದ್ದ ಸಿದ್ಧ ಪುರುಷರು ಕೆಲವು ಮಂತ್ರಗಳನ್ನು ಬಂಧಿಸಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

ತಾಂತ್ರಿಕ ವಿದ್ಯೆಯಲ್ಲಿ ಪಾರಾಂಗತರಾದ ಸಾಧು ಅಥವಾ ಮಾಂತ್ರಿಕರು ಮಾತ್ರವೇ ಅರ್ಹರಾಗಿದ್ದು, ಬಾಗಿಲನ್ನು ತೆರೆಯುವ ಸಮಯದಲ್ಲಿ ಗರುಡ ಮಂತ್ರವನ್ನು ಪಠಿಸುತ್ತಾ ನಾಗ ಬಂಧಂ ಅಥವಾ ನಾಗಪಾಶವನ್ನು ತೆರೆಯಬೇಕಾಗುತ್ತದೆ.

ಇದನ್ನೂ ಓದಿ : https://youtu.be/q0WcMtWO6bo ಹಬ್ಬಕ್ಕೆ ದುಬಾರಿಯಾಗಿದೆ ಹೂವು, ಹಣ್ಣು .

ಪ್ರಸ್ತುತ ಈ ವಿದ್ಯೆಯಲ್ಲಿ ಪಾರಾಂಗತರಾದವರು ಯಾರೂ ಲಭ್ಯರಿಲ್ಲದ ಕಾರಣ ಈ ಕೋಣೆಯ ಬಾಗಿಲನ್ನು ಇನ್ನೂ ತೆರೆಯಲು ಸಾಧ್ಯವಾಗಿಲ್ಲ.

ಒಂದು ವೇಳೆ ಈ ಮಂತ್ರದ ನೆರವಿನ ಹೊರತಾಗಿ ಯಾರಾದರೂ ಈ ಕೋಣೆಯ ಬಾಗಿಲನ್ನು ತೆರೆಯಲು ಯತ್ನಿಸಿದರೆ ದೇವಾಲಯದ ಸ್ಥಳದಲ್ಲಿ ಮಾತ್ರವಲ್ಲ, ಇಡಿಯ ಭಾರತವನ್ನೇ ಅಹುತಿ ತೆಗೆದುಕೊಳ್ಳಬಹುದಾದಂತಹ ಅನಾಹುತ ಸಂಭವಿಸಬಹುದು.

ಕೆಲವು ಜನರ ಪ್ರಕಾರ, ಅರೇಬಿಯನ್ ಸಮುದ್ರದ ಶಬ್ದವು ಬಾಗಿಲಿನ ಹಿಂದಿನಿಂದ ಕೇಳಿಸುತ್ತದೆ, ಆದರೆ ಅನೇಕರು ಆ ಧ್ವನಿಯು ಅಲ್ಲಿರುವ ಹಾವುಗಳ ಧ್ವನಿ ಎಂದು ನಂಬುತ್ತಾರೆ.
Exit mobile version