ಗ್ಯಾಂಗ್‌ರೇಪ್‌ ಬೆಧೀಸಿದ ಪೋಲಿಸರಿಗೆ ಗೃಹ ಸಚಿವರ ಶ್ಲಾಘನೆ

ಬೆಂಗಳೂರು ಆ 27 : ಮೈಸೂರು ಗ್ಯಾಂಗ್‌ರೇಪ್‌ನ ಕಾರ್ಯಚಹರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿ ಯಶಸ್ವಿಯಾದ ಪೊಲೀಸರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಬೇಧಿಸುತ್ತಾರೆ ಎಂಬ ನಂಬಿಕೆ ಇತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ, ಇನ್ನೊಬ್ಬ ಆರೋಪಿಕೂಡ ತಲೆಮರೆಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂಬ ಸಂದೇಶವನ್ನು ಪೊಲೀಸರು ನೀಡಿದ್ದಾರೆ. ಸಂತ್ರಸ್ತೆ ಇನ್ನೂ ಆಘಾತದಲ್ಲಿದ್ದು, ಈ ಸಂಬಂಧ ಹೇಳಿಕೆ ನೀಡುವಂತೆ ಅವರ ಮನ ಒಲಿಸಲಾಗುವುದು ಎಂದರು.

ಹಾಗೆಯೇ ಚಾಮುಂಡಿ ಬೆಟ್ಟದಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಸಂಜೆ 7 ಗಂಟೆಯ ಬಳಿಕ ಹೆಚ್ಚು ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹಾಗೆಯೇ ಇನ್ನು ಮುಂದೆ ಇಂತಹ ಪ್ರಕರಣಗಳು ರಾಜ್ಯದ ಯಾವ ಭಾಗದಲ್ಲೂ ನಡೆಯದಂತೆ ಕಠಿಣ ಕ್ರಮ ವಹಿಸಲಾಗುವುದು. ಇಂತಹ ಹೀನ ಕೃತ್ಯ ಎಸಗುವವರನ್ನು ಹೆಡೆಮುರಿ ಕಟ್ಟಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

Exit mobile version