Bengaluru : ಪೊಲೀಸರು ಬಂಧಿಸಿರುವ ಭಯೋತ್ಪಾದಕರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಗೃಹ ಸಚಿವ (Home Minister statement) ಡಾ. ಜಿ. ಪರಮೇಶ್ವರ್

ಅವರು ನೀಡಿರುವ ಹೇಳಿಕೆಗೆ ಎಲ್ಲೆಡೆ ಭಾರೀ ಆಕ್ರೋಶ (Home Minister statement) ವ್ಯಕ್ತವಾಗಿದೆ.
ಬಂಧಿತರ ಬಳಿ ಪಿಸ್ತೂಲು, ಮದ್ದುಗುಂಡುಗಳು ಸಿಕ್ಕಿದ್ದರೂ ಕೂಡಾ ಅವರೆಲ್ಲಾ ಯಾರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಯಾವ ಕಾರಣಕ್ಕಾಗಿ ಇದೆಲ್ಲವನ್ನೂ ಸಂಗ್ರಹ ಮಾಡಿಕೊಂಡಿದ್ದರು ಎಂಬ ಮಾಹಿತಿ ಇನ್ನು
ಲಭ್ಯವಾಗಿಲ್ಲ. ಹೀಗಾಗಿ ಶಂಕಿತ ಬಂಧಿತರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ ನೀಡಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪರಮೇಶ್ವರ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಪರಮೇಶ್ವರ್ ಅವರೇ, ಬಂಧಿತರು ಇದ್ದ ಮನೆಯಲ್ಲಿ ಸಿಕ್ಕ ಮದ್ದು-ಗುಂಡು, ಗನ್- ಬಾಂಬ್ಗಳನ್ನು ಅವರೇನು ದೀಪಾವಳಿ ಆಚರಿಸಲು ಶೇಖರಿಸಿದ್ದರೇ…?
ಕಾಂಗ್ರೆಸ್‌ನ ಈ ತುಷ್ಟೀಕರಣ ರಾಜಕೀಯವನ್ನು ಸದನದಲ್ಲಿ ಪ್ರಶ್ನಿಸುತ್ತೇವೆ ಎಂಬ ಕಾರಣಕ್ಕೆ ನಮ್ಮ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಬಂಧಿತ ಐವರು ಉಗ್ರರ ವಿರುಧ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ

ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ..?. ಉಗ್ರರ ಜಾಲ ಭಾರೀ ಆಳವಾಗಿದೆ, ಇನ್ನೊಬ್ಬ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಾರಣ ತನಿಖೆಯ ಪ್ರಗತಿಗಾಗಿ ಪ್ರಕರಣವನ್ನು
ಎನ್ಐಎಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಉಗ್ರರಿಗೆ ಬಾಡಿಗೆ ಮನೆ ನೀಡಿದ ಮನೆಮಾಲೀಕರ ಮೇಲೂ ಎಫ್ಐಆರ್
ಮತಬ್ಯಾಂಕಿಗಾಗಿ ಕಾಂಗ್ರೆಸ್ ಇಂತಹ ಪ್ರಕರಣಗಳಲ್ಲಿ ಓಲೈಕೆಯ ರಾಜಕಾರಣ ಮಾಡಬಾರದು. ಬೆಂಗಳೂರಿಗೆ ಬಾಂಬಿಡಲು ಮುಂದಾದವರ ರಕ್ಷಣೆ ರಾಜ್ಯ ಸರಕಾರ (State Government) ಮಾಡದಿರಲಿ.
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ (D K Shivakumar) ಅವರ ‘ಬ್ರದರ್ಸ್’ ವಿಧ್ವಂಸಕ ಕೃತ್ಯ ಎಸೆಗಲು ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ. ಸಿದ್ದರಾಮಯ್ಯರವರ ತುಘಲಕ್ ಸರ್ಕಾರದ ಆಗಮನದಿಂದಾಗಿ
ಮತಾಂಧ ಜಿಹಾದಿಗಳು ಉಗ್ರರ ಸಖ್ಯ ಬೆಳೆಸಿ ಬಾಲ ಬಿಚ್ಚಿದ್ದಾರೆ. ರಾಜ್ಯ ಕಾಂಗ್ರೆಸ್ ಇನ್ನಾದರೂ ತುಷ್ಟೀಕರಣ ರಾಜಕೀಯ ಬಿಟ್ಟು, ದೇಶದ ಭದ್ರತೆ, ಸುರಕ್ಷತೆಗೆ ಒತ್ತು ನೀಡಲಿ ಎಂದು ಆಗ್ರಹಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಣಿ ಸ್ಪೋಟ ನಡೆಸಲು ಸಂಚು ನಡೆಸಿದ್ದ ಐವರು ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ, ಬೆಂಗಳೂರು ಪೊಲೀಸರು, ಸಿಸಿಬಿ ಮತ್ತು
ರಾಜ್ಯ ಗುಪ್ತಚರ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಎರಡು ದಿನಗಳ ಹಿಂದಷ್ಟೇ ಬಂಧಿಸಿವೆ.