Beauty Tips : ನೈಸರ್ಗಿಕ ವಸ್ತುಗಳನ್ನು ಬಳಸಿ, ಕೈಗೆಟಕುವ ಬಜೆಟ್ ನಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿದೆ ಸರಳ ಉಪಾಯ

Beauty Tips : ಮಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ(Social Media) ಇತ್ತೀಚೆಗೆ ಸೌಂದರ್ಯ ವರ್ಧಕ ಉತ್ಪನ್ನಗಳ ಕುರಿತ ಜಾಹೀರಾತುಗಳು(Ad) ಹೆಚ್ಚಾಗುತ್ತಿವೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ, ಇಂತಹ ಸೌಂದರ್ಯ ವರ್ಧಕಗಳ(Beauty Products) ಮೊರೆ ಹೋಗುವ ನಮಗೆ, ಪ್ರಕೃತಿಯೇ ನೀಡಿರುವ ನೈಸರ್ಗಿಕ ಸೌಂದರ್ಯ ವರ್ಧಕಗಳ ಬಗ್ಗೆ ಅರಿವಿಲ್ಲ.

Beauty Tips

ಹಾಗಾಗಿ, ಜಾಹೀರಾತುಗಳನ್ನು ನೋಡಿ ಸೌಂದರ್ಯ ವರ್ಧಕಗಳನ್ನು ಖರೀದಿಸುವುದಕ್ಕಿಂತ ನಮ್ಮ ಮನೆಯಲ್ಲೇ ಇರುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಕೈಗೆಟಕುವ ಬಜೆಟ್ ನಲ್ಲಿ ಸೌಂದರ್ಯವನ್ನು ಹೆಚ್ಚಿಕೊಳ್ಳುವ ಕೆಲ ಸಲಹೆಗಳು ಇಲ್ಲಿವೆ. ಸುಂದರ ಚರ್ಮ ನಿಮ್ಮ ದೇಹದ ಒಳಗಿನಿಂದಲೇ ವೃದ್ಧಿಯಾಗುತ್ತದೆ.

ಇದನ್ನೂ ಓದಿ : https://vijayatimes.com/state-bjp-counter-attack-dk-shivkumar/

ನೀವು ಆರೋಗ್ಯವಾಗಿಲ್ಲದಿದ್ದರೆ ಸೌಂದರ್ಯ, ಹೊಳೆಯುವ ಚರ್ಮವನ್ನು ಪಡೆಯಲು ಸಾಧ್ಯವಿಲ್ಲ. ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹ ಒಳಗಿನಿಂದಲೇ ಸುಂದರವಾಗುತ್ತದೆ. ಹಾಗಾಗಿ ಪೌಷ್ಟಿಕಾಂಶಯುಕ್ತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಉಪಯುಕ್ತ.

A beautiful young woman looking at her face in the mirror

ಪ್ರತಿದಿನ ಆರು ಅಥವಾ ಎಂಟು ಗ್ಲಾಸ್ ನೀರು ಕುಡಿದರೆ ಒಳ್ಳೆಯದ್ದು. ಉಪಯುಕ್ತ ಉತ್ಪನ್ನಗಳನ್ನು ಖರೀದಿಸಿ ಬಳಸುವುದು ಪ್ರಯೋಜನಕಾರಿಯಾಗಿರುತ್ತದೆ. ಕಡಿಮೆ ಬಜೆಟ್ ನ ಕಾಸ್ಮೆಟಿಕ್ ಉತ್ಪನ್ನಗಳು ನಮ್ಮ ಸೌಂದರ್ಯವನ್ನು ವೃದ್ಧಿಸಲು ಸಹಾಯಕವಾಗುತ್ತದೆ.

https://youtu.be/y7kd6l3P6TE


ಮನೆಯಲ್ಲೇ ಕೆಲ ಉಪಯುಕ್ತ ಬಳ್ಳಿಗಳನ್ನು ಬೆಳೆಸುವುದು ಒಳ್ಳೆಯದು. ಉದಾಹರಣೆಗೆ ಅಲೋವೆರಾ, ಇದು ನಿಮ್ಮ ಚರ್ಮ ಮತ್ತು ದೇಹಕ್ಕೆ ಪರಿಪೂರ್ಣವಾದ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಪ್ರತಿದಿನ ಆಲೋವೆರಾ ಜ್ಯೂಸ್(Aloevera Juice) ಕುಡಿಯಿರಿ ಜೊತೆಗೆ ಅಲೋವೆರಾ ರಸದಿಂದ ಮುಖಕ್ಕೆ ಹಾಗೂ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದು ಸೂಕ್ತ.

Home Remedies


ನಿಮಗೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಮಯದ ಅಭಾವವಿದ್ದರೆ ನೀವು ಸ್ನಾನ ಮಾಡುವ ನೀರಿಗೆ ಕೆಲ ಹೂವುಗಳು ಹಾಗೂ ಮೂಲಿಕೆಗಳನ್ನು ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ.

Exit mobile version