ಹೆಚ್.ಡಿ ದೇವೇಗೌಡ ಹಾಗೂ ಇಸ್ರೋ ಸೋಮನಾಥ್ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ಪ್ರಧಾನ: ರಾಜ್ಯಪಾಲರು

Bengaluru: ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು (Honorary Doctorates – HDD-S Somanath) ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ

(H D Devegowda) ಮತ್ತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಪ್ರದಾನ ಮಾಡಲಾಯಿತು. ಮಂಗಳವಾರ ನಡೆದ 58ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು

ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawarchand Gehlot) ಅವರು ಪದವಿ ಪ್ರದಾನ ಮಾಡಿದರು.

28,871 ವಿದ್ಯಾರ್ಥಿಗಳಿಗೆ ಪದವಿ , 93 ವಿದ್ಯಾರ್ಥಿಗಳಿಗೆ 299 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಈ ಸಮಾರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು

ಜೀವನದಲ್ಲಿ ವಿದ್ಯೆ ಮತ್ತು ಸಂಸ್ಕಾರ ಬೇರುಗಳಿದ್ದಂತೆ. ವಿದ್ಯೆ ಕೇವಲ ಪ್ರಮಾಣಪತ್ರಕ್ಕಷ್ಟೇ ಸೀಮಿತವಾಗಬಾರದು. ಸಂಸ್ಕಾರವನ್ನೂ ಕಲಿಸಬೇಕು. ವಿದ್ಯೆಯು ಹಣ ಗಳಿಸುವ ಸಾಧನವಾಗದೆ

ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು (Honorary Doctorates – HDD-S Somanath) ಸಾಧ್ಯ ಎಂದು ತಿಳಿಸಿದ್ದಾರೆ.

ಇಸ್ರೋ ಸಾಧನೆಗೆ ಗೌರವ
ಇಸ್ರೊ ಮುಖ್ಯಸ್ಥ ಎಸ್‌ ಸೋಮನಾಥ್‌ (S Somanath) ಅವರು ಗೌರವ ಡಾಕ್ಟರೇಟ್‌ ಪದವಿ ಸ್ವೀಕರಿಸಿ ಮಾತನಾಡಿದ ಬಳಿಕ ”ಬಾಹ್ಯಾಕಾಶ ತಂತ್ರಜ್ಞಾನದ ಪ್ರಯೋಜನವನ್ನು ಜನಸಾಮಾನ್ಯರಿಗೆ

ತಲುಪಿಸಬೇಕು ಎಂಬುದು ನಮ್ಮ ಉದ್ದೇಶ. ಚಂದ್ರಯಾನ-3ರ (Chandrayaan-3) ಯಶಸ್ಸು ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದು, ಈ ಗೌರವ ಡಾಕ್ಟರೇಟ್‌

ನನ್ನ ವೈಯಕ್ತಿಕ ಸಾಧನೆಗಿಂತಲೂ ಇಸ್ರೊದ (ISRO) ಸಾಧನೆಗೆ ಸಂದ ಗೌರವವೆಂದು ನಾನು ಭಾವಿಸುತ್ತೇನೆ,” ಎಂದರು.

ಇಲ್ಲಿ ಅನೇಕ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ”ಕರ್ನಾಟಕವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ

ಮುಂಚೂಣಿಯಲ್ಲಿದೆ. ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದು. ಭಾರತದ ಆಧುನಿಕತೆ, ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಸಂಪರ್ಕ ಹೊಂದಿದೆ.

ಮಾನವಿಕ, ಸಮಾಜ ವಿಜ್ಞಾನ, ಕಾನೂನು, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಮತ್ತು ಮಹತ್ವದ ಕೊಡುಗೆಗಳನ್ನು ನೀಡುವ ಮೂಲಕ ಇದು ತನ್ನ ಧ್ಯೇಯವಾಕ್ಯ

-‘ಜ್ಞಾನ ವಿಜ್ಞಾನ ಸಾಹಿತ್ಯಂ’ ಅನ್ನು ಈ ವಿಶ್ವವಿದ್ಯಾನಿಲಯವು ಅರ್ಥಪೂರ್ಣಗೊಳಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯವು ದೇಶದ ಮತ್ತು ರಾಜ್ಯದ ಪ್ರಮುಖ ವಿಶ್ವವಿದ್ಯಾಲಯವಾಗಿದೆ ಎಂದರು.

ದೇವೇಗೌಡರ ಕೊಡುಗೆ ಅಪಾರ
ರಾಜ್ಯಕ್ಕೆ ಸಾಕಷ್ಟು ಕೊಡುಗೆಯನ್ನು ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರು ನೀಡಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್‌ ನೀಡುವುದಕ್ಕೆ ಇಷ್ಟು ವರ್ಷ ಬೇಕಿತ್ತಾ? ಎಂಬುದೇ ಗಮನಾರ್ಹ ಸಂಗತಿ.

ಬೆಂ.ವಿವಿ ಇವರನ್ನು ಗುರುತಿಸಿ ಗೌರವಿಸಿದೆ. ಚಿನ್ನದ ಪದಕ ಮತ್ತು ಪದವಿ ಪ್ರಮಾಣ ಪತ್ರ ಪಡೆದಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್

(Dr. M.C Sudhakar) ಮಾತನಾಡಿದರು.

ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ 28,871 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, 193 ವಿದ್ಯಾರ್ಥಿಗಳಿಗೆ 299 ಚಿನ್ನದ ಪದಕ ನೀಡಿ ಗೌರವಿಸಿತು. ಬೆಂವಿವಿ ಕುಲಪತಿ ಡಾ ಎಂಎಸ್‌

ಜಯಕರ (M S Jayakara), ವಿವಿ ಕುಲಸಚಿವ ಶೇಕ್‌ ಲತೀಫ್‌, ಮೌಲ್ಯಮಾಪನ ಕುಲಸಚಿವ ಪ್ರೊ ಸಿ ಶ್ರೀನಿವಾಸ್‌ (C Srinivas) ಇತರರು ಇದ್ದರು.

ಇದನ್ನು ಓದಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್​ ಪಂದ್ಯ: ಸ್ಟೇಡಿಯಂ ಸುತ್ತಮುತ್ತ ಹೈ ಅಲರ್ಟ್

Exit mobile version