Bengaluru: ಬೆಂಗಳೂರಿನ ಚಿನ್ನಸ್ವಾಮಿ (Highalert in Chinnaswamy stadium) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ ಮೊದಲನೇಯದಾಗಿದ್ದು, ಈ ಪಂದ್ಯದಲ್ಲಿ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಬೆಂಗಳೂರು ಪೊಲೀಸರು ಸ್ಟೇಡಿಯಂ (Stadium) ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಈಗಾಗಲೇ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ (Pakistan) , ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಕಣಕ್ಕಿಳಿಯುತ್ತಿದ್ದು, ಉಭಯ
ತಂಡಗಳ ಈ ಕದನ ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ.
ಹಾಗಾಗಿ ಪಂದ್ಯಕ್ಕೆ ಸಕಲ ಸಿದ್ದತೆಗಳನ್ನು ಕೆಎಸ್ಸಿಎ (KSCA) ಮಾಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಬೆಂಗಳೂರು ಪೊಲೀಸರು
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ (High Alert) ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ವಿಶ್ವಕಪ್ನ ಮೊದಲ ಪಂದ್ಯ ನಡೆಯುತ್ತಿರುವುದರಿಂದಾಗಿ ಇಡೀ ಕ್ರೀಡಾಂಗಣ ಭರ್ತಿಯಾಗುವ
ಸಾಧ್ಯತೆ ಇದೆ.
ಮೊದಲ ಪಂದ್ಯದ ಟಿಕೆಟ್ಗಳು ಸೋಲ್ಡ್ ಔಟ್ (Soldout) ಆಗಿದ್ದು, ಈ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು,
ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಲು ಕೆಲವು ಸಂಘಟನೆಗಳು
ತಯಾರಿ ನಡೆಸಿವೆ ಎಂದು (Highalert in Chinnaswamy stadium) ವರದಿಯಾಗಿದೆ.
ಪಂದ್ಯ ನಡೆಯುವ ವೇಳೆ ವಾಸ್ತವವಾಗಿ ಪ್ಯಾಲೆಸ್ಟೈನ್ಗೆ ಬೆಂಬಲ ನೀಡುವ ಪೊಸ್ಟರ್ (Poster) ಹಾಗೂ ಫ್ಲಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗಲು ಹಲವು ಸಂಘಟನೆಗಳನ್ನು ತಯಾರಿ ನಡೆಸಿವೆ
ಎಂಬ ಮಾಹಿತಿ ಬೆಂಗಳೂರು ಪೊಲೀಸರಿಗೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಮತ್ತಷ್ಟು ಅಲರ್ಟ್ ಆಗಿರುವ ಪೊಲೀಸರು ಪಂದ್ಯ ವಿಕ್ಷಣೆಗೆ ಬರುವವರ ಮೇಲೆ ಹದ್ದಿನಕಣ್ಣಿಡಲು ತೀರ್ಮಾನಿಸಿದ್ದಾರೆ.
ವಿಶ್ವಕಪ್ಗೆ ಆಡಲಿರುವ ಉಭಯ ತಂಡಗಳು
ಪಾಕಿಸ್ತಾನ ತಂಡ:
ಬಾಬರ್ ಆಝಂ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ,
ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಫ್ರಿದಿ ವಾಸಿಂ.
ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್,
ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಜಂಪಾ, ಮಿಚೆಲ್ ಸ್ಟಾರ್ಕ್.
ಇದನ್ನು ಓದಿ: ಕೋರಮಂಗಲ ಅಗ್ನಿ ದುರಂತ: ಫೋರಂಮಾಲ್ ಮುಂಭಾಗದ ಮಡ್ಪೈಪ್ ಕೆಫೆಯಲ್ಲಿ ಭಾರೀ ಸ್ಪೋಟ, ಸುಟ್ಟು ಕರಕಲಾದ ಮಹಡಿಗಳು
- ಭವ್ಯಶ್ರೀ ಆರ್.ಜೆ