Visit Channel

ಹೊಸ ಫೀಚರ್ ಲಾಂಚ್ ಮಾಡಿರುವ ವಾಟ್ಸಾಪ್

f26304b08b1cfb010394bfd24cc2bb7aa7281aa9

ವಾಟ್ಸಾಪ್​ ಬಳಕೆದಾರರಿಗೆ ಹೊಸ ಹೊಸ ಸೌಕರ್ಯಗಳು  ಬರುತ್ತಲೇ ಇವೆ.  ವಾಟ್ಸಾಪ್ ಪೇಮೆಂಟ್,​  ವಾಟ್ಸಾಪ್ ಶಾಶ್ವತ ಮ್ಯೂಟ್​, ಮೆಸೇಜ್​ ತನ್ನಿಂದ ತಾನೇ ಅಳಿಸಿ ಹಾಕುವ ಪ್ರಕ್ರಿಯೆ ಹೀಗೆ ಅನೇಕ ಸೇವೆಗಳನ್ನ ನೀಡಿದೆ. ಹಾಗಾದರೆ ಕೇವಲ 2 ತಿಂಗಳಲ್ಲಿ ವಾಟ್ಸಾಪ್​ ಯಾವ್ಯಾವ ಸೌಲಭ್ಯಗಳ ನೀಡಿದೆ ಅನ್ನೋದರ ಸಾರಾಂಶಗಳ ವಿವರ ಇಲ್ಲಿದೆ ನೋಡಿ.

1) ಡಿಸಪಿಯರಿಂಗ್​ ಮೆಸೇಜ್​. ಅಂದರೆ ಈ ಬಟನ್​​ನ್ನ ಕ್ಲಿಕ್​ ಮಾಡೋದ್ರಿಂದ ನೀವು ಆಯ್ಕೆ ಮಾಡಿದ ಕಾಂಟ್ಯಾಕ್ಟ್​​ನ ಮೆಸೇಜ್​ಗಳು ಒಂದು ವಾರದಲ್ಲಿ ಡಿಲೀಟ್​ ಆಗಲಿದೆ. ಈ ಡಿಸಪಿಯರಿಂಗ್​ ಮೆಸೇಜ್​ ಆಯ್ಕೆಯನ್ನ ನೀವು ಗ್ರೂಪ್​ ಚಾಟ್​​ಗಳಿಗೂ ಬಳಕೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಮೊಬೈಲ್​​ನಲ್ಲಿ ಮೆಮೋರಿ ತುಂಬೋದನ್ನ ನೀವು ತಪ್ಪಿಸಬಹುದಾಗಿದೆ. ನಿಮಗೆ ಬೇಡ ಎನಿಸಿದ್ರೆ ನೀವು ಈ ಆಯ್ಕೆಯನ್ನ ಆಫ್​ ಕೂಡ ಮಾಡಬಹುದಾಗಿದೆ.

2) ವಾಟ್ಸಾಪ್​ ಪೇಮೆಂಟ್​ ಆಯ್ಕೆ ಕೂಡ ಬಳಕೆದಾರರಿಗೆ ಸಿಕ್ಕಾಪಟ್ಟೆ ಅನುಕೂಲಕರವಾಗಲಿದೆ. 2018ರಿಂದ ಎನ್​ಪಿಸಿಐ ಒಪ್ಪಿಗೆಗಾಗಿ ಕಾದ ವಾಟ್ಸಾಪ್​ ಇದೀಗ ಭಾರತದಲ್ಲಿ ಯಶಸ್ವಿಯಾಗಿ ಲಾಂಚ್​ ಆಗಿದೆ.

 3) ವಾಟ್ಸಾಪ್​ ಪೇ ನ. 6 ರಂದು  ಲೋಕಾರ್ಪಣೆಗೊಂಡಿದೆ. ಗೂಗಲ್​ ಪೇನಂತೆ ಈ ವಾಟ್ಸಾಪ್​ ಪೇ ಕಾರ್ಯ ನಿರ್ವಹಿಸುತ್ತಿದೆ. ಕಳೆದ 2 ತಿಂಗಳಲ್ಲಿ ವಾಟ್ಸಾಪ್​ ತಂದ ಮತ್ತೊಂದು ಉತ್ತಮ ಆಯ್ಕೆ ಅಂದರೆ

4) ಶಾಶ್ವತ ಮ್ಯೂಟ್​ ಆಯ್ಕೆ. ಈ ಮೊದಲು ಅಬ್ಬಬ್ಬಾ ಅಂದರೆ ಕೇವಲ 1 ವರ್ಷಗಳ ಕಾಲ ಮಾತ್ರ ಗ್ರೂಪ್​ ಚಾಟ್​ ಇಲ್ಲವೇ ವೈಯಕ್ತಿಕ ಚಾಟ್​ಗಳನ್ನ ಮ್ಯೂಟ್​ ಮಾಡಲು ಅವಕಾಶವಿತ್ತು. ಆದರೆ ಈಗ ಶಾಶ್ವತವಾಗಿ ಯಾರನ್ನ ಬೇಕಿದ್ದರೂ ಮ್ಯೂಟ್​ ಮಾಡಬಹುದಾಗಿದೆ. ಈ ಮೂಲಕ ಕಿರಿಕಿರಿ ಎನ್ನಿಸುವ ಗ್ರೂಪ್​​ಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.