ಹೊಸ ವರ್ಷಾಚರಣೆಗೆ ಇಲ್ಲ ಅನುಮತಿ!

ಬೆಂಗಳೂರು, ಡಿ. 11: ಮಹಾಮಾರಿ ಕೊರೊನದಿಂದ ಇಡೀ ಪ್ರಪಂಚ ತಲ್ಲಣಗೊಂಡಿದೆ ಇದರಿಂದ ಹಲವು ಸಂಕಷ್ಟಗಳಿಗೆ ಜನಜೀವನ ಸಿಲುಕಿದೆ. ಹಾಗೂ ದೇಶದ ಆರ್ಥಿಕತೆ ಕುಸಿದಿದೆ. ಇದರ ನಡುವೆ ಹೊಸ ವರ್ಷಾಚರಣೆಯ ದಿನವು ಸಹ ಸಮೀಪದಲ್ಲಿದೆ. ಮತ್ತು ಇದರ ಸಂಭ್ರಮಾಚರಣೆಯ ಬಗ್ಗೆ ಹಲವು ಗೊಂದಲಗಳು ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಏಕೆಂದರೆ ಕೊರೊನ ಮಹಾಮಾರಿಯ ಎರಡನೇ ಅಲೆ ಬರುವ ಕಾರಣದಿಂದ   ರಾಜ್ಯ ಸರ್ಕಾರ ಎಲ್ಲ ಮನರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಿದೆ.

ಎರಡು-ಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಲಿದ್ದು, ಇದೇ ತಿಂಗಳ 20ರಿಂದ ಜ.2ರವರೆಗೆ ಸಂಭ್ರಮಾಚರಣೆ, ಹೆಚ್ಚು ಜನರು ಸೇರುವುದು, ಔತಣಕೂಟಗಳು, ಸೇರಿದಂತೆ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನ ನಡೆಸುವಂತಿಲ್ಲ.

ರಾಜಧಾನಿ ಬೆಂಗಳೂರಿನ ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ, ಅದೇ ರೀತಿ ರಾಜ್ಯದ ಇತರೆ ಭಾಗಗಳಲ್ಲೂ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಮತ್ತಿತರ ಕಡೆಯೂ ವರ್ಷಾಚರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂಥವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಸಲಾಗುತ್ತದೆ.

ಕಂದಾಯ ಸಚಿವ ಆರ್.ಅಶೋಕ್ ರವರು  ಈ ಮಾಹಿತಿಯನ್ನು ನೀಡಿದ್ದು, ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಜನತೆ ಹೊಸ ವರ್ಷಾಚರಣೆಯನ್ನು ಹೊರಗೆ  ಬಂದು ಆಚರಿಸುವ ಬದಲು ನಿಮ್ಮ ನಿಮ್ಮ ಮನೆಗಳಲ್ಲೇ ಕುಟುಂಬದ ಸದಸ್ಯರ ಜೊತೆ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.

ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ಮತ್ತಿತರ ಕಡೆ ಹೊಸ ವರ್ಷಕ್ಕಾಗಿ ಯಾವುದೇ ರೀತಿಯ ಸಿದ್ದತೆಗಳನ್ನು ನಡೆಸಬಾರದು. ಈಗಿರುವ ಯತಾಸ್ಥಿತಿಯೇ ಮುಂದುವರೆಯಬೇಕು. ಈ ಸಂಬಂಧ ಬಿಬಿಎಂಪಿ ಆಯುಕ್ತರು ನೋಟಿಸ್ ಜಾರಿ ಮಾಡಲಿದ್ದಾರೆ. ನಿಯಮ ಉಲ್ಲಂಘಿಸಿದರೆ ಶಿಕ್ಷೆ ಖಚಿತ ಎಂದು ಎಚ್ಚರಿಕೆ ನೀಡಿದರು. ಆದ ಕಾರಣ ಯಾವುದಕ್ಕು ಈ ಸಲ ಹೊರಗಡೆ ಹೋಗುವ ಮುನ್ನ ಯೋಚಿಸಿ. ಯಾಕೆಂದರೆ ಈಗಾಗಲೇ ಮಾಸ್ಕ್ ನಿಯಮ ಜಾರಿಯಾಗಿದ್ದು ಅದು ಸಹ ಕಠಿಣವಾಗಿ ದಂಡ ವಸೂಲಿ ಮಾಡಲಾಗುತ್ತಿದೆ. ಇದರ ಪರಿಣಾಮ ಹೊಸ ವರ್ಷಾಚರಣೆಯ ಮೇಲೆಯು ಬೀಳುವ ರೀತಿಯಲ್ಲಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಹಲವು ಬಗೆಯ ನಿಯಮಗಳು ಜಾರಿಯಾಗಲಿವೆ.

Exit mobile version