ಬೆಂಗಳೂರು : ರಾಜ್ಯದಲ್ಲಿ ಹಾಲು, ಗ್ಯಾಸ್ ಮತ್ತು ವಿದ್ಯುತ್ ಬೆಲೆಯನ್ನು ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ (Hotel food rates Increase) ಇದೀಗ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಕಾಫಿ, ಟೀ,
ತಿಂಡಿ ಮತ್ತು ಊಟದ ಬೆಲೆಗಳು ಏರಿಕೆಯಾಗಲಿವೆ ಎಂದು ಬೆಂಗಳೂರು ಹೋಲೆಟ್ಗಳ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ (P.C Rao) ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ (Media) ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಒಂದೆಡೆ ವಿದ್ಯುತ್ ಬೆಲೆ ಏರಿಕೆಯಾಗಿದೆ, ಇನ್ನೊಂದೆಡೆ ಹಾಲಿನ ದರ ಏರಿಕೆ ಕುರಿತು ಕರ್ನಾಟಕ ಹಾಲು ಮಹಾಮಂಡಳ
(ಕೆಎಂಎಫ್) (KMF) ಅಧ್ಯಕ್ಷ ಭೀಮಾನಾಯ್ಕ (Bheema Naik) ನಿರ್ಧಾರ ಕೈಗೊಂಡಿದ್ದಾರೆ. ಜತೆಗೆ ಹೋಟೆಲ್ ಗಳಲ್ಲಿ ಬಳಸುವ ಗ್ಯಾಸ್, ತರಕಾರಿ, ಬೀನ್ಸ್ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ.
ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ
ಬೆಲೆ ಏರಿಕೆಯ ಹೊಡೆತ ನಮ್ಮ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಹೋಟೆಲ್ಗಳಲ್ಲಿ ಕಾಫಿ, ತಿಂಡಿ, ಊಟದ ಬೆಲೆಯನ್ನೂ ಹೆಚ್ಚಿಸುವುದು ಅನಿವಾರ್ಯವಾಗಿದೆ.
ಹಾಗಾಗಿ ಹೋಟೆಲ್ ಮಾಲೀಕರ ಸಂಘವು(Hotel Owners Association) ದರಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದೆ ಎಂದು ಅವರು ಬಹಿರಂಗಪಡಿಸಿದರು.
ಸಾರ್ವಜನಿಕರನ ಜೇಬಿಗೆ ಕತ್ತರಿ ಗ್ಯಾರಂಟಿ:
ಮನೆಯಲ್ಲಿ ಅಡುಗೆ ಮಾಡದೇ ಹಾಗೂ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ, ಊಟ ಸೇವಿಸುವ ಎಲ್ಲ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ರಾಜ್ಯಾದ್ಯಂತ ಹೋಟೆಲ್ಗಳು
ಸಜ್ಜಾಗಿವೆ.ಈಗಾಗಲೇ ಗ್ಯಾಸ್, ವಿದ್ಯುತ್ ದರ ಹೆಚ್ಚಳವಾಗಿದ್ದು ಮುಖ್ಯವಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸುಳಿವನ್ನು ನೀಡಿದೆ. ಹೋಟೆಲ್ಗಳ ಮಾಲೀಕರ
ಸಂಘದಿಂದ ಈ ಹಿನ್ನೆಲೆಯಲ್ಲಿ ದರ ಹೆಚ್ಚಳದ ಚರ್ಚೆ ಮಾಡಲಾಗುತ್ತಿದ್ದು,ಹೋಟೆಲ್ ಮಾಲೀಕರು ಬಹುತೇಕ ಬೆಲೆ ಹೆಚ್ಚಳವಾಗಲಿದೆ (Hotel food rates Increase) ಎಂದು ತಿಳಿಸಿದ್ದಾರೆ.

ಬೇಕರಿ ತಿಂಡಿಗಳ ಬೆಲೆ ಏರಿಕೆಯೂ ಖಚಿತ:
ಇನ್ನು ಹಾಲಿನ ದರ ಹೆಚ್ಚಳವಾದಲ್ಲಿ ಹಾಲಿನಿಂದ ಉತ್ಪಾದನೆ ಮಾಡುವಂತಹ ಎಲ್ಲಾ ಬಗೆಯ ಬೇಕರಿ ಉತ್ಪಾದನೆಗಳ ಮೇಲೆಯೂ ಕೂಡ ಹೊಡೆತ ಬೀಳಲಿದೆ. ಆದ್ದರಿಂದ ರಾಜ್ಯಾದ್ಯಂತ ಬೇಕರಿಯ ಉತ್ಪನ್ನಗಳಾದ ಎಲ್ಲ ಸಿಹಿ
ಪದಾರ್ಥಗಳು ದೂದ್ ಪೇಡ, ಕೇಕ್, ಕೋವಾ ಪೇಡಾ ಸೇರಿ ಹೋಟೆಲ್ಗಳ ಬೆನ್ನಲ್ಲೇ ಎಲ್ಲದರ ಬೆಲೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಇನ್ನು ಎಲ್ಲ ಮಾದರಿಯ ಕೇಕ್ ಹಾಗೂ ಬ್ರೆಡ್ ಮತ್ತು ಬನ್ಗಳ
ಬೆಲೆಯಲ್ಲೂ ಗ್ಯಾಸ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಳವಾಗುವ ಸಧ್ಯತೆ ಕಂಡುಬರುತ್ತಿದೆ. ಒಟ್ಟಾರೆ, ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವಾಗಿದೆ.
ರಶ್ಮಿತಾ ಅನೀಶ್