ದಿನಕ್ಕೆ 3 ಬಾರಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳಿತು : ವರದಿ

Tea

ನೀವು ಚಹಾ(Tea) ಪ್ರಿಯರಾಗಿದ್ದು, ದಿನವಿಡೀ ಚಹಾ ಕುಡಿಯುವ ಅಭ್ಯಾಸವಿದ್ದರೆ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಏಕೆಂದರೆ ಅತಿಯಾಗಿ ಚಹಾ ಕುಡಿಯುವುದು ನಿಮ್ಮ ಆರೋಗ್ಯವನ್ನು(Health) ಹಾಳು ಮಾಡುತ್ತದೆ.

ಅನೇಕ ಜನರಿಗೆ ಚಹಾವಿಲ್ಲದೆ (Tea) ದಿನ ಆರಂಭವಾಗುವುದಿಲ್ಲ, ಅಂತಹವರಿಗೆ ಚಹಾ ಸಿಗದಿದ್ದರೆ ತಲೆನೋವು ಹೆಚ್ಚಾಗುತ್ತದೆ.

ಹಾಗಾದ್ರೆ, ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯುವುದು ಆರೋಗ್ಯಕರ (health)ಎಂದು ನೋಡುವುದಾದರೆ, ಒಂದು ದಿನದಲ್ಲಿ 3-4 ಕಪ್ ಚಹಾವನ್ನು ಕುಡಿಯುವುದರಿಂದ ಯಾವುದೇ ತೊಂದರೆಯಿಲ್ಲ.

ಆದರೆ ಇದಕ್ಕಿಂತ ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ ನೀವು ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾಗಿ ಚಹಾವನ್ನು ಕುಡಿಯುವುದರಿಂದ ನಿಮ್ಮ ಎದೆಯುರಿ ಹೆಚ್ಚಾಗಬಹುದು. ಇದಲ್ಲದೇ ಅತಿಯಾಗಿ ಟೀ ಕುಡಿಯುವುದರಿಂದ ತಲೆತಿರುಗುವಿಕೆಯೂ ಉಂಟಾಗುತ್ತದೆ.

ಹೆಚ್ಚು ಚಹಾ ಸೇವನೆಯು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಸಾಧ್ಯವಾದರೆ, ದಿನವಿಡೀ ಸೀಮಿತ ಪ್ರಮಾಣದಲ್ಲಿ ಚಹಾವನ್ನು ಸೇವಿಸಿ, ಟೀ ಕುಡಿಯಲೇಬೇಕು ಅನಿಸಿದಾಗ ಮಾತ್ರ ಟೀ ಕುಡಿಯಬೇಕು.


ಅತಿಯಾದ ಟೀ ಸೇವನೆಯು ( Tea drink) ಹೊಟ್ಟೆಯ ಸಮಸ್ಯೆಯನ್ನು ಕೂಡ ಹೆಚ್ಚಿಸುತ್ತದೆ. ಹಾಗೇ, ನೀವು ಯಾವುದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆಯ ಮೇರೆಗೆ ಚಹಾ ಸೇವನೆ ಸೂಕ್ತ. ಅದೇ ರೀತಿ, ಹೆಚ್ಚು ಕಾಲ ಟೀ ಸೇವೆಯಿಂದ ಮೂಳೆಗಳು ದುರ್ಬಲವಾಗುತ್ತವೆ.

https://vijayatimes.com/jds-party-janatha-mithra/

ಚಹಾದಲ್ಲಿ ಕಂಡುಬರುವ ಟ್ಯಾನಿನ್‌ಗಳು, ಫೋಲಿಕ್ ಆಮ್ಲದ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತವೆ, ಇದು ಜನ್ಮ ದೋಷಗಳನ್ನು ಕಡಿಮೆ ಮಾಡುವ ವಿಟಮಿನ್ ಆಗಿದೆ. ಹಾಗಾಗಿ ಮೂಳೆಗಳಲ್ಲಿ ದೌರ್ಬಲ್ಯದ ತೊಂದರೆ ಕೂಡ ಕ್ರಮೇಣ ಹೆಚ್ಚಾಗತೊಡಗುತ್ತದೆ.
Exit mobile version