ಮೋದಿ ಪ್ರಧಾನಿಯಾದ ಬಳಿಕ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಈ ಕಾರಣದಿಂದಾಗಿ `ಇ’ ಕಾರಣಕ್ಕೆ ಸರ್ಕಾರದ ಹಲವು ಸೇವೆಗಳು ಡಿಜಿಟಲೀಕರಣಗೊಂಡಿವೆ. ಸದ್ಯ ಇದೀಗ ದೇಶದ ನಾಗರೀಕರಿಗೆ ಹೊಸ ಡಿಜಿಟಲ್ ಐಡಿ ಕಾರ್ಡ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಕಾರ್ಡ್ನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಸೇರಿದಂತೆ ಸರ್ಕಾರದ ಹಲವು ಕಾರ್ಡ್ಗಳನ್ನು ಲಿಂಕ್ ಮಾಡಬಹುದು ಎನ್ನಲಾಗಿದೆ. ಇದರಿಂದ ಎಲ್ಲಾ ಸೇವೆಗಳು ಒನ್ ಡಿಜಿಟಲ್ ಐಡಿ ಕಾರ್ಡ್ ನಲ್ಲಿ ಬಳಸಬಹುದಾಗಿದೆ.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಒನ್ ಡಿಜಿಟಲ್ ಐಡಿ ಕಾರ್ಡ್ ಪರಿಚಯಿಸುವ ಪ್ಲಾನ್ ರೂಪಿಸಿದೆ. ಹೊಸ ಮಾದರಿಯ “ಫೆಡರೇಟೆಡ್ ಡಿಜಿಟಲ್ ಐಡೆಂಟಿಟೀಸ್” ಬಗ್ಗೆ ಪ್ರಸ್ತಾವನೆ ಮಾಡಿದೆ. ಈ ಕಾರ್ಡ್ನಲ್ಲಿ ದೇಶದ ನಾಗರಿಕರ ಎಲ್ಲಾ ಡಿಜಿಟಲ್ ಐಡಿಗಳನ್ನು ಒಂದೇ ಕಾರ್ಡ್ನಲ್ಲಿ ಪರಸ್ಪರ ಲಿಂಕ್ ಮಾಡಬಹುದು ಎನ್ನಲಾಗಿದೆ. ಇದಕ್ಕಾಗಿ ಮಲ್ಟಿ ಡಿಜಿಟಲ್ ಐಡಿಗಳನ್ನು ಒಂದಕ್ಕೆ ಲಿಂಕ್ ಮಾಡುವ ಯೋಜನೆಯನ್ನು ಸರ್ಕಾರ ಪ್ರಸ್ತಾಪಿಸಿದೆ.

ಒನ್ ಡಿಜಿಟಲ್ ಐಡಿ ಕಾರ್ಡ್ ಮೂಲಕ ನೀವು ಅನೇಕ ಉದ್ದೇಶಗಳಿಗೆ ಬಳಸುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಆಧಾರ್, ಪ್ಯಾನ್, ಪಾಸ್ಪೋರ್ಟ್ ಅನ್ನು ಲಿಂಕ್ ಮಾಡಬಹುದು. ಇದರಿಂದ ನೀವು ಯಾವುದನ್ನು ಬಳಸಬೇಕೆಂದು ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸಲಿದೆ. ಇನ್ನು ಫೆಡರಲ್ ಡಿಜಿಟಲ್ ಐಡೆಂಟಿಟಿಯು ಕೇಂದ್ರ ಮತ್ತು ರಾಜ್ಯ-ಸಂಬಂಧಿತ ID ಡೇಟಾವನ್ನು ಸಂಗ್ರಹಿಸಲು ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಇದನ್ನು KYC ಅಥವಾ eKYC ಪ್ರಕ್ರಿಯೆಗಳಿಗೆ ಬಳಸಬಹುದಾಗಿದೆ. ಪ್ರಸ್ತಾವಿತ ಯೋಜನೆಯನ್ನು ಇಂಡಿಯಾ ಎಂಟರ್ಪ್ರೈಸ್ ಆರ್ಕಿಟೆಕ್ಚರ್ 2.0 ಅಡಿಯಲ್ಲಿ ಸ್ಥಳಾಂತರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಒನ್ ಡಿಜಿಟಲ್ ಐಡಿ ಕಾರ್ಡ್ ನಿಮಗೆ ಡಿಜಿಟಲ್ ಭದ್ರತೆಯನ್ನು ನೀಡಲಿದೆ. ಆನ್ಲೈನ್ ವಂಚನೆಗಳನ್ನು ತಪ್ಪಿಸುವುದಕ್ಕೆ ಸಹಕಾರಿಯಾಗಲಿದೆ. ಅದರಲ್ಲೂ ಆನ್ಲೈನ್ ಸ್ಕ್ಯಾಮ್ಗಳು KYC ಮತ್ತು OTP ಗೆ ಸಂಬಂಧಿಸಿವೆ. ಇದರಿಂದ ಸಿಂಗಲ್ ಡಿಜಿಟಲ್ ಐಡಿ ಕಾರ್ಡ್ ನಿಮಗೆ ಉಪಯುಕ್ತವಾಗಲಿದೆ. ಅನೇಕ ಕಾರ್ಡ್ಗಳನ್ನು ಆನ್ಲೈನ್ನಲ್ಲಿ ನಮೂದಿಸುವ ಬದಲು ಸಿಂಗಲ್ ಡಿಜಿಟಲ್ ಕಾರ್ಡ್ ಅನ್ನು ನಮೂದಿಸುವ ಮೂಲಕ ನೀವು ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಡಿಜಿಟಲ್ ಐಡಿ ಕಾರ್ಡ್ ನಿಮ್ಮ ಕೈಸೇರಲಿದೆ.