ಸ್ಮಾರ್ಟ್‌ಫೋನ್ ಸ್ಕ್ರೀನ್ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಸ್ಮಾರ್ಟ್‌ಫೋನ್‌ಗಳು (Smartphone) ಈಗ ಎಲ್ಲರ ಜೀವನದ ಮುಖ್ಯ ಅಂಗವಾಗಿದ್ದು, ಸಾಕಷ್ಟು ಕೆಲಸಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಬೇಗ ಸಹಾಯಕಾರಿಯಾಗಿದೆ. ನಿರಂತರ ಬಳಕೆಯಿಂದ ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ನಲ್ಲಿ (Screen) ಕೊಳಕು, ಧೂಳುಗಳು ಕಾಣಿಸಿಕೊಳ್ಳುತ್ತವೆ. ಬರೀ ಅಷ್ಟೇ ಅಲ್ಲ, ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳೂ ಸ್ಕ್ರೀನ್‌ ಮೇಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಗಳನ್ನು ಸ್ವಚ್ಛವಾಗಿಟ್ಟುಕೊಟ್ಟುಕೊಳ್ಳುವುದೂ ಬಹಳ ಅಗತ್ಯ.

ಸಂವಹನ, ಮನರಂಜನೆಯಿಂದ ಹಿಡಿದು, ದಾರಿ ಹುಡುಕಲು, ಮಾಹಿತಿ ಕಂಡುಕೊಳ್ಳಲು, ಹಣ ಪಾವತಿ ಮಾಡಲು ಹೀಗೆ ಸಾಕಷ್ಟು ಕಾರಣಗಳಿಂದ ಸ್ಮಾರ್ಟ್‌ಫೋನ್‌ಗಳು ಈಗ ನಮ್ಮ ಒಡನಾಡಿಗಳಾಗಿವೆ. ಹೀಗೆ ಸ್ವಚ್ಛ ಸ್ಮಾರ್ಟ್‌ಫೋನ್ ಸ್ಕ್ರೀನ್ ಬರೀ ಡಿಸ್‌ಪ್ಲೇಯನ್ನು (Display) ಹೊಳೆಯುವಂತೆ ಮಾಡುವುದಿಲ್ಲ ಇದು ನಮ್ಮ ನೈರ್ಮಲ್ಯಕ್ಕೂ ಅಗತ್ಯವಾಗಿದ್ದು, ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್ ಸ್ವಚ್ಛಗೊಳಿಸುವಾಗಲೂ ಕೆಲವೊಂದು ಸಂಗತಿಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಮೈಕ್ರೋಫೈಬರ್ ಬಟ್ಟೆ
ಸ್ಮಾರ್ಟ್‌ಸ್ಕ್ರೀನ್ ಸ್ವಚ್ಛಗೊಳಿಸಲು ಈ ಬಟ್ಟೆಗಳು ಸೂಕ್ತ. ಮೈಕ್ರೋಫೈಬರ್‌ನ (Microfiber) ಸೌಮ್ಯವಾದ ಫೈಬರ್‌ಗಳು ಪರದೆಯನ್ನು ಸ್ಕ್ರಾಚ್ ಮಾಡದೆಯೇ ಧೂಳು ಮತ್ತು ಬೆರಳಚ್ಚುಗಳನ್ನು ಪರಿಣಾಮಕಾರಿಯಾಗಿ ತೆಗೆಯುತ್ತವೆ.

ಡಿಸ್ಟಿಲ್ಡ್ ವಾಟರ್
ನೀರಿನ ಬದಲು ಡಿಸ್ಟಿಲ್ಡ್ ವಾಟರ್‌ (Distilled Water) ಅನ್ನು ಬಳಸಬಹುದು. ನೀರಿನ ಬಳಕೆ ಖನಿಜಗಳ ಸಂಗ್ರಹಕ್ಕೆ ಕಾರಣವಾಗಬಹುದು, ಇದರಿಂದ ಗೆರೆಗಳು ಬೀಳಬಹುದು. ಡಿಸ್ಟಿಲ್ಡ್ ವಾಟರ್ ಸ್ಕ್ರೀನ್ ಮೇಲೆ ಶೇಷವನ್ನು ಬಿಡಬಹುದಾದ ಯಾವುದೇ ಖನಿಜಗಳು ಅಥವಾ ಕಲ್ಮಶಗಳನ್ನು ಹೊಂದಿರುವುದಿಲ್ಲ. ನಲ್ಲಿ ನೀರು ಅಥವಾ ಇತರ ರೀತಿಯ ದ್ರವ ಬಳಸುವುದಕ್ಕಿಂತ ಇದು ಉತ್ತಮ.

ಕಠಿಣ ರಾಸಾಯನಿಕಗಳನ್ನು ತಪ್ಪಿಸಿ:
ವಿಂಡೋ ಕ್ಲೀನರ್‌ (Window Cleaner), ಬ್ಲೀಚ್ ಮತ್ತು ಇತರ ಕಠಿಣ ರಾಸಾಯನಿಕಗಳನ್ನು ಬಳಸಬೇಡಿ. ಇವು ಸ್ಕ್ರೀನ್‌ಗೆ ಹಾನಿ ತರಬಹುದು. ಜೊತೆಗೆ ವಾರಂಟಿಯನ್ನೂ ಅಳಿಸಬಹುದು. ಆಕಸ್ಮಿಕ ಸ್ಪರ್ಶ ಅಥವಾ ನೀರಿನ ಹಾನಿಯನ್ನು ತಪ್ಪಿಸಲು ಸ್ವಚ್ಛಗೊಳಿಸುವಾಗ ಯಾವಾಗಲೂ ಫೋನ್ ಅನ್ನು ಆಫ್ ಮಾಡಿ ಮತ್ತು ಸ್ವಚ್ಛಗೊಳಿಸುವ ಮೊದಲು ಅದನ್ನು ಅನ್‌ಪ್ಲಗ್ (Unplug) ಮಾಡಿ

ಧೂಳು ಮತ್ತು ಕೊಳೆಗಳನ್ನು ತೆಗೆದುಹಾಕಲು ಒಣ ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸುವುದನ್ನು ಆರಂಭಿಸಿ. ಮೃದುವಾದ ವೃತ್ತಾಕಾರವಾಗಿ ಒರೆಸಲು ಆರಂಭಿಸಿ ಹಾಗೂ ತುಂಬಾ ಗಟ್ಟಿಯಾಗಿ ಒತ್ತುವುದನ್ನು ತಪ್ಪಿಸಿ. ಪೇಪರ್ ಟವೆಲ್‌ಗಳು (Paper Towel) ಮತ್ತು ಟಿಶ್ಯೂಗಳನ್ನು ಸಾಧ್ಯವಾದಷ್ಟು ಬಳಸಬೇಡಿ. ಯಾಕೆಂದರೆ, ಇವುಗಳು ಒರಟಾಗಿರುತ್ತವೆ ಮತ್ತು ನಿಮ್ಮ ಸ್ಕ್ರೀನ್ ಅನ್ನು ಸ್ಕ್ರಾಚ್ ಮಾಡಬಹುದು.

ಫೋನ್ ಪರದೆ ಮೇಲೆ ನೇರವಾಗಿ ದ್ರವಗಳನ್ನು ಸಿಂಪಡಿಸಬೇಡಿ ಅಥವಾ ಸುರಿಯಬೇಡಿ. ಇದು ಸಾಧನಕ್ಕೆ ನುಗ್ಗಿ ಹಾನಿಯನ್ನುಂಟುಮಾಡಬಹುದು. ಕೇಸ್ ಅನ್ನು ಮತ್ತೆ ಹಾಕುವ ಮೊದಲು ಸ್ಕ್ರೀನ್ ಅನ್ನು ಸಂಪೂರ್ಣವಾಗಿ ಒಣಗಲು ಬಿಡಿ

ಭವ್ಯಶ್ರೀ ಆರ್ ಜೆ

Exit mobile version