ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ.

How to Increase Hemoglobin: ಆರೋಗ್ಯದಲ್ಲಿ ಹಲವಾರು ರೀತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಹಿಮೋಗ್ಲೋಬಿನ್ ಅಂಶದ ಕೊರತೆ ಉಂಟಾಗಿದೀಯಾ? ಹಾಗಾದ್ರೆ ಈ ಸಮಸ್ಯೆಗಳಿಂದ

ದೂರವಿರಲು ಕಬ್ಬಿಣಾಂಶ ಭರಿತ ಆಹಾರಗಳನ್ನು ಸೇವನೆ ಮಾಡಬೇಕು.

ವಿಟಮಿನ್ ಸಿ ಹೆಚ್ಚಿರುವ ಆಹಾರಗಳ ಸೇವನೆ ಮಾಡಬೇಕು
ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು, ಮೂಸಂಬಿ, ನಿಂಬೆ, ಸ್ಟ್ರಾಬೆರಿ, ದ್ರಾಕ್ಷಿ, ಸೀಬೆಹಣ್ಣು, ಎಲೆಕೋಸು, ಟೊಮೆಟೊ ಹಣ್ಣುಗಳು, ಪಪ್ಪಾಯ, ಬ್ರೊಕೊಲಿ, ಇತ್ಯಾದಿ ಹಣ್ಣು ತರಕಾರಗಳನ್ನು

ತಮ್ಮ ದೈನಂ ದಿನ ಆಹಾರದಲ್ಲಿ (How to Increase Hemoglobin) ಸೇರಿಸಿಕೊಳ್ಳಬೇಕು.

ದಾಳಿಂಬೆ ಹಣ್ಣಿನ ಬೀಜಗಳು
ಹಲವಾರು ಬಗೆಯ ಪೋಷಕಾಂಶಗಳು, ವಿಟಮಿನ್ಸ್‌ಗಳು, ಖನಿಜಾಂಶಗಳು, ಫೋಲಿಕ್ ಆಮ್ಲಗಳು, ಕ್ಯಾಲ್ಸಿಯಂ, ನಾರಿನಾಂಶ ಹಾಗೂ ಪ್ರೋಟೀನ್ ಅನ್ನು ದಾಳಿಂಬೆ ಹಣ್ಣಿನ ಬೀಜಗಳು ಒಳಗೊಂಡಿರುತ್ತವೆ

ಇದರ ಪೌಷ್ಟಿಕಾಂಶದ ಮೌಲ್ಯವು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದು.

ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳು
ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು, ಕಬ್ಬಿಣದ ಅಂಶ ಹೆಚ್ಚಿ ರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಉದಾಹರಣೆಗೆ ಪಾಲಕ್ ಸೊಪ್ಪು ಹಾಗೂ ಇದರಿಂದ ಮಾಡಿದ ಜ್ಯೂಸ್,

ಹೆಸರು ಬೇಳೆ, ತೊಗರಿಬೇಳೆ, ಬೀನ್ಸ್, ಮೆಂತೆ ಸೊಪ್ಪು ಇತ್ಯಾದಿ.

ಒಣ ದ್ರಾಕ್ಷಿಗಳು:
ಒಣ ದ್ರಾಕ್ಷಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶ ಕಂಡು ಬರುತ್ತದೆ. ಹೀಗಾಗಿ ಪ್ರತಿದಿನ ಮೂರು -ನಾಲ್ಕು ಒಣದ್ರಾಕ್ಷಿ ಹಣ್ಣುಗಳನ್ನು ನೆನೆಸಿಟ್ಟು ಸೇವನೆ ಮಾಡಬೇಕು.

ಖರ್ಜೂರ ಹಣ್ಣುಗಳು
ಖರ್ಜೂರಗಳಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶ, ವಿಟಮಿನ್ ಸಿ ಅಂಶ, ಫೋಲೆಟ್, ಹಾಗೂ ಇನ್ನಿತರ ದೇಹಕ್ಕೆ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಿಗುವ ಕಾರಣ, ರಕ್ತದಲ್ಲಿ ಹಿಮೋಗ್ಲೋಬಿನ್

ಮಟ್ಟ ಹೆಚ್ಚಿಸಲು ನೆರವಾಗುತ್ತವೆ.

ಬೆಲ್ಲ ಸೇವನೆ:
ದೈನಂದಿನ ಟೀ-ಕಾಫಿಗೆ ಸಕ್ಕರೆಗೆ ಪರ್ಯಾಯವಾಗಿ, ಬೆಲ್ಲವನ್ನು ಬಳಸಿ. ಯಾಕೆಂದ್ರೆ ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದ್ದು, ಇದನ್ನು ಮಿತವಾಗಿ ಸೇವನೆ ಮಾಡಿದರೆ, ಹಿಮೋಗ್ಲೋಬಿನ್ ಮಟ್ಟ

ವೃದ್ಧಿಯಾಗುವುದು.

ಇದನ್ನು ಓದಿ: ಭಾರತೀಯ ನೌಕಾಪಡೆ ಅಧಿಕಾರಿಗಳ ಮರಣದಂಡನೆಗೆ ವಿರೋಧ: ಭಾರತದ ಮನವಿ ಸ್ವೀಕರಿಸಿದ ಕತಾರ್‌

Exit mobile version