ಜನ ಮರುಳೋ, ಜಾತ್ರೆ ಮರುಳೋ: ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮುಂಜಾನೆ ವೇಳೆಯೂ ಸರದಿ ಸಾಲು

Bengaluru: ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಲ್ಲಿ ಇಂಟರ್‌ ಚೇಂಜ್‌ (huge queue Kempegowda metro station) ವ್ಯವಸ್ಥೆ ಇದ್ದು, ನಮ್ಮ ಮೆಟ್ರೋ (Metro) ನೇರಳೆ

ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿದಿನ ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಈ ನಿಲ್ದಾಣದ

ಮೂಲಕ ಪ್ರಯಾಣ ಮಾಡುತ್ತಿದ್ದು, ಪ್ರಯಾಣಿಕರ ಸಂಖ್ಯೆ (huge queue Kempegowda metro station) ಗಣನೀಯವಾಗಿ ಏರಿಕೆಯಾಗಿದೆ.

ಜನನಿಬಿಡ ನಿಲ್ದಾಣಗಳ ಪೈಕಿ ಈ ನಿಲ್ದಾಣ ಮೊದಲ ಸ್ಥಾನದಲ್ಲಿದ್ದು, ಇಂದಿರಾನಗರ (29 ಸಾವಿರ) ಹಾಗೂ ಬೈಯಪ್ಪನಹಳ್ಳಿ (Baiyappanahalli) (23 ಸಾವಿರ) ನಿಲ್ದಾಣಗಳಿವೆ. ಕಳೆದ ಒಂದು ವಾರದಿಂದ

ಹಬ್ಬದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಅಧಿಕವಾಗಿದ್ದು, ಹೊರಗಡೆಯಿಂದ ಬಂದ ಪ್ರಯಾಣಿಕರು ನಗರದ ಬೇರೆ ಬೇರೆ ಪ್ರದೇಶಕ್ಕೆ ತೆರಳಲು ಬೆಳಗ್ಗೆ 5.30 ರಿಂದಲೇ

ಟಿಕೆಟ್‌ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೆಲವು ಬಾರಿ ಈ ಸಾಲುಗಳು ಕೆಎಸ್‌ಆರ್‌ಸಿಟಿಸಿ (KSRTC) ಡಿಪೋವರೆಗೆ ವಿಸ್ತರಿಸಿರುತ್ತದೆ.

ಉದ್ದದ ಸರದಿ ಸಾಲು, ತಪಾಸಣೆ ವಿಳಂಬದ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದು, ನಾನಾ ಕಡೆಗೆ ಸಾಗಲು ಮೆಟ್ರೋ ಅತ್ಯಂತ ಉಪಯುಕ್ತವಾಗಿದೆ. ಆದರೆ, ನೇರಳೆ ಮಾರ್ಗದ ವಿಸ್ತರಣೆ ಜತೆಗೆ

ದಸರಾ ಹಬ್ಬ ಮುಗಿಸಿ ಹೆಚ್ಚಿನ ಜನರು ನಗರಕ್ಕೆ ಹಿಂದಿರುಗುತ್ತಿದ್ದಾರೆ. ಇದರಿಂದಾಗಿ ಮೆಜೆಸ್ಟಿಕ್‌ (Majestic) ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ.

ಟೋಕನ್‌ (Token) ಪಡೆದು ಪ್ರಯಾಣಿಸುವರ ಸಂಖ್ಯೆ ತೀರಾ ಕಡಿಮೆಯಿದ್ದರೂ ಒಂದೇ ಸ್ಕ್ಯಾ‌ನಿಂಗ್‌ ಯಂತ್ರ ಹಾಗೂ ಪುರುಷ ಮತ್ತು ಮಹಿಳಾ ಪ್ರಯಾಣಿಕರನ್ನು ತಪಾಸಣೆ ಮಾಡಲು ತಲಾ ಒಬ್ಬರೇ

ಸಿಬ್ಬಂದಿ ಇರುವುದರಿಂದ ತಪಾಸಣೆ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಸ್ಕ್ಯಾ‌ನಿಂಗ್‌ (Scanning) ಯಂತ್ರ, ತಪಾಸಣೆ ಸಿಬ್ಬಂದಿ ಸಂಖ್ಯೆ ಹೆಚ್ಚಳ ಮಾಡಬೇಕು

ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮೊಬೈಲ್‌ ಕ್ಯೂಆರ್‌ ಕೋಡ್‌ (QR Code) ಮೂಲಕ ಹೆಚ್ಚಿನ ಪ್ರಯಾಣಿಕರು, ಸ್ಕ್ಯಾ‌ನ್‌ ಮಾಡಿ ಪ್ರಯಾಣಿಸುತ್ತಾರೆ. ಇನ್ನು ಕೆಲವರು ಬಿಎಂಆರ್‌ಸಿಎಲ್‌ ಕಾರ್ಡ್‌(BMRL Card) , ಮೊಬಿಲಿಟಿ ಕಾರ್ಡ್‌

ಬಳಕೆ ಮಾಡುತ್ತಿದ್ದಾರೆ.

ಅತಿಹೆಚ್ಚು ಜನಸಂದಣಿ ಇರುವ ನಿಲ್ದಾಣಗಳು
ಮೆಜೆಸ್ಟಿಕ್‌ (Majestic) – 42 ಸಾವಿರ
ಇಂದಿರಾನಗರ (Indiranagar) – 30 ಸಾವಿರ
ಬೈಯ್ಯಪನಹಳ್ಳಿ- 23 ಸಾವಿರ
ಎಂ.ಜಿ. ರಸ್ತೆ (M.G.Road) – 23 ಸಾವಿರ
ವಿಜಯನಗರ (Vijayanagar) – 21.5 ಸಾವಿರ

ಇದನ್ನು ಓದಿ: ಮನೆಮದ್ದು: ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ಇದರ ಮಾಹಿತಿ

Exit mobile version