ಉಯ್ಗರ್‌ ಮುಸ್ಲಿಮರ ಮೇಲೆ ದೌರ್ಜನ್ಯ ; ಚೀನಾ ವಿರುದ್ದ ಮತ ಚಲಾಯಿಸದ ಭಾರತದ ನಡೆಯ ಹಿಂದೆ ಹಲವು ಲೆಕ್ಕಾಚಾರ!

india

New Delhi : ಉಯ್ಗರ್‌ ಮುಸ್ಲಿಮರ ಮೇಲೆ ಚೀನಾ(China) ದೌರ್ಜನ್ಯ ನಡೆಸುತ್ತಿದೆ, ಅವರ ಧಾರ್ಮಿಕ ಹಕ್ಕುಗಳನ್ನು ಚೀನಾ ಹತ್ತಿಕ್ಕುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಚೀನಾ ವಿರುದ್ದ ಮಂಡನೆಯಾದ ನಿರ್ಣಯಕ್ಕೆ ಭಾರತ(India) ಗೈರು ಹಾಜರಾಗಿದೆ(human rights situation in Xinjiang region). ಭಾರತ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರಗಳಿವೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ನಲ್ಲಿ ಚೀನಾ ಉಯ್ಗರ್‌ ಮುಸ್ಲಿಮರನ್ನು ನಡೆಸಿಕೊಳ್ಳುವುದರ(human rights situation in Xinjiang region) ವಿರುದ್ಧದ ಮತದಾನಕ್ಕೆ ಗೈರುಹಾಜರಾದ ನಂತರ, ಪತ್ರಿಕಾಗೋಷ್ಠಿಯಲ್ಲಿ, ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ,”ಎಲ್ಲಾ ರೀತಿಯ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಭಾರತ ಬದ್ಧವಾಗಿದೆ.

ಆದರೆ ಒಂದು ದೇಶದ ಮೇಲಿನ ನಿರ್ದಿಷ್ಟ ನಿರ್ಣಯಗಳು ಎಂದಿಗೂ ಸಹಾಯಕವಾಗುವುದಿಲ್ಲ ಎಂಬ ದೀರ್ಘಾವಧಿಯ ನಿಲುವಿಗೆ ಭಾರತದ ಮತವು ಅನುಗುಣವಾಗಿದೆ.

ಅಂತಹವುಗಳನ್ನು ಎದುರಿಸಲು ಭಾರತವು ಸಂವಾದವನ್ನು ಬೆಂಬಲಿಸುತ್ತದೆ. ನಾವು ಚೀನಾದ ಪೀಪಲ್ಸ್ ರಿಪಬ್ಲಿಕ್ ಆಫ್ ಕ್ಸಿನ್ಜಿಯಾಂಗ್ ಉಯ್ಗರ್ ಸ್ವಾಯತ್ತ(Autonomus) ಪ್ರದೇಶದ ಮಾನವ ಹಕ್ಕುಗಳ ಕಾಳಜಿಗಳ ಮೌಲ್ಯಮಾಪನವನ್ನು ಗಮನಿಸಿದ್ದೇವೆ.

ಇದನ್ನೂ ಓದಿ : https://vijayatimes.com/we-wont-worship-hindu-gods/

ಕ್ಸಿನ್ಜಿಯಾಂಗ್ ಉಯ್ಗರ್ ಸ್ವಾಯತ್ತ ಪ್ರದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ವಸ್ತುನಿಷ್ಠವಾಗಿ, ಸರಿಯಾಗಿ ಪರಿಸ್ಥಿತಿಯನ್ನು ಖಾತರಿಪಡಿಸಬೇಕು ಎಂದಿದ್ದಾರೆ.

ಇನ್ನು ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಗರ್ ಮುಸ್ಲಿಮರ ಮಾನವ ಹಕ್ಕುಗಳ ದುರುಪಯೋಗಕ್ಕಾಗಿ ಚೀನಾ ವಿರುದ್ಧದ ಮತದಾನದಿಂದ ದೂರ ಉಳಿದ 11 ದೇಶಗಳಲ್ಲಿ ಭಾರತವೂ ಸೇರಿದೆ.

ಯುಎನ್ಎಚ್ಆರ್ಸಿಯಲ್ಲಿ ನಿರ್ಣಯದ ಪರವಾಗಿ 17 ಸದಸ್ಯರು ಮತ ಚಲಾಯಿಸಿದರೆ, ಚೀನಾ, ಪಾಕಿಸ್ತಾನ ಮತ್ತು ನೇಪಾಳ ಸೇರಿದಂತೆ 19 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು.

ಭಾರತ, ಬ್ರೆಜಿಲ್, ಮೆಕ್ಸಿಕೋ ಮತ್ತು ಉಕ್ರೇನ್ ಸೇರಿದಂತೆ ಹನ್ನೊಂದು ಸದಸ್ಯರು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ನಿರ್ಣಯವು ವಿಫಲವಾಯಿತು.

ಮತದಾನದಿಂದ ಗೈರಾಗುವ ಮೂಲಕ ಭಾರತ ಪರೋಕ್ಷವಾಗಿ ವಿಶ್ವಸಮುದಾಯಕ್ಕೆ ಸಂದೇಶವೊಂದನ್ನು ರವಾನಿಸಿದ್ದು, ನಾವು ಧಾರ್ಮಿಕ ಸ್ವಾಯತ್ತತೆಯನ್ನು ಗೌರವಿಸುತ್ತೇವೆ, ಅದೇ ರೀತಿ ನೀವು ಕೂಡಾ ನಮ್ಮ ಸ್ವಾಯತ್ತತೆಯನ್ನು ಗೌರವಿಸಿ.

https://youtu.be/aVfgUoyykm4

ಚೀನಾ ಉಯ್ಗರ್ ಮುಸ್ಲಿಮರ ವಿಷಯದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಣಯದಲ್ಲಿ ನಾವು ಭಾಗಿಯಾಗುವುದಿಲ್ಲ, ಹಾಗೇ ಚೀನಾ ಕೂಡಾ ಕಾಶ್ಮೀರದ ವಿಷಯದಲ್ಲಿ ಅಂತರ ಕಾಯ್ದುಕೊಳ್ಳಬೇಕು.

ಇದನ್ನೂ ಓದಿ : https://vijayatimes.com/floating-post-office-in-india/

ನಮ್ಮ ಆಂತರಿಕ ಭದ್ರತೆಗಾಗಿ ನಾವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಚೀನಾದ ನಿಲುವನ್ನು ಭಾರತ ಪರೋಕ್ಷವಾಗಿ ಬೆಂಬಲಿಸಿದೆ. ಹೀಗಾಗಿ ಸದ್ಯ ಭಾರತ ತೆಗೆದುಕೊಂಡಿರುವ ನಿರ್ಧಾರ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

.

Exit mobile version