ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

Madhya Pradesh : ಮಧ್ಯಪ್ರದೇಶದ (Madhya Pradesh) ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರನ್ನು ಮದುವೆಯಾಗಿ, ಅವರೊಂದಿಗೆ ವಿಚಿತ್ರದ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಈ ವ್ಯಕ್ತಿ (Husband and wife aggreement) ಮಾಡಿಕೊಂಡಿರುವ ಒಪ್ಪಂದವಾದರೂ ಏನು? ಇಬ್ಬರ ಹೆಂಡಿರ ಮುದ್ದಿನ ಗಂಡನ ಕಸರತ್ತೇನು ಗೊತ್ತಾ? ಇಲ್ಲಿದೆ ಮಾಹಿತಿ

ಮಧ್ಯಪ್ರದೇಶದ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಎರಡು ವಿವಾಹವಾಗಿದ್ದು, ಇಬ್ಬರು ಹೆಂಡತಿಯರ ಮನೆಯಲ್ಲಿ ಈತ ಸಂಸಾರ ಮಾಡುತ್ತಿದ್ದಾನೆ.

ವಾರದಲ್ಲಿ ಮೂರು ದಿನ ಒಬ್ಬರ ಮನೆಯಲ್ಲಿ, ಉಳಿದ ಮೂರು ದಿನ ಮತ್ತೊಬ್ಬರ ಮನೆಯಲ್ಲಿ ಕಳೆಯುತ್ತಾನೆ. ಭಾನುವಾರ ಆತನಿಗೆ ಬಿಟ್ಟದ್ದು,

ಇಬರಲ್ಲಿ ಯಾರ ಜೊತೆ ಉಳಿಯಬೇಕು ಎಂಬುದು! ಮಧ್ಯಪ್ರದೇಶದ ಗ್ವಾಲಿಯರ್‌ನ (Madhya Pradesh Gwalior) 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಇಬ್ಬರು ಹೆಂಡತಿಯರೊಂದಿಗೆ

ಈ ಒಪ್ಪಂದಕ್ಕೆ ಬಂದಿದ್ದಾನೆ ಮತ್ತು ಇಬ್ಬರು ಮಹಿಳೆಯರ ನಡುವೆ ತನ್ನ ದಿನಚರಿಯ ಸಮಯವನ್ನು ಸಮವಾಗಿ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ :https://vijayatimes.com/dattatreya-hosabale-statement/

ತನ್ನ ಇಬ್ಬರು ಹೆಂಡತಿಯರಿಗು ಪ್ರತ್ಯೇಕವಾಗಿ ಒಂದೊಂದು ಫ್ಲ್ಯಾಟ್‌ ನೀಡಿದ್ದು, ಇಬ್ಬರು ಬೇರೆ ಬೇರೆ ವಾಸವಿದ್ದಾರೆ. ಇಬ್ಬರು ಹೆಂಡತಿಯರಿಗು ಮಕ್ಕಳಿದ್ದಾರೆ!

ಅಷ್ಟಕ್ಕೂ ಇದಕ್ಕೆ ಎಂದು ನ್ಯಾಯಾಲಯ ಇದ್ದರೂ ಈ ರೀತಿ ಒಪ್ಪಂದ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಜನವರಿ 2023 ರಲ್ಲಿ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ನೇಮಿಸಿದ ಸಲಹೆಗಾರರಾದ ವಕೀಲ (Husband and wife aggreement) ಹರೀಶ್ ದಿವಾನ್ ಎಂಬ ವ್ಯಕ್ತಿ,

26 ವರ್ಷದ ಮಹಿಳೆ ಮೇ 2018 ರಲ್ಲಿ ಸಾಫ್ಟವೇರ್‌ ಇಂಜಿನಿಯರ್‌ ವ್ಯಕ್ತಿಯನ್ನು ವಿವಾಹವಾದರು ಎಂದು ಹೇಳಿದರು.

ಆ ವ್ಯಕ್ತಿ ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಎರಡು ವರ್ಷಗಳ ಕಾಲ ನಗರದಲ್ಲಿ ವಾಸವಿದ್ದರು.

ಈ ದಂಪತಿಗೆ ಒಬ್ಬ ಪುತ್ರನಿದ್ದಾನೆ. 2020 ರಲ್ಲಿ, ಪ್ರಾರಂಭವಾದ ಸಾಂಕ್ರಾಮಿಕ ಖಾಯಿಲೆ ನಂತರ ಈ ದಂಪತಿಗಳು ಗ್ವಾಲಿಯರ್‌ಗೆ ಬಂದಿದ್ದಾರೆ.

ಇದನ್ನೂ ಓದಿ : https://vijayatimes.com/ksrtc-bus-fare-hike/

ಆ ವೇಳೆ ಪತಿ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಬಳಿಕ ಗ್ವಾಲಿಯರ್‌ನಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಪತಿ ಗುರುಗ್ರಾಮ್‌ಗೆ ಹಿಂತಿರುಗಿದ್ದಾನೆ.

ಆದ್ರೆ ತನ್ನ ಮೊದಲ ಪತ್ನಿ, ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಪರಿಸ್ಥಿತಿ ಹದಗೆಟ್ಟರೂ ತನ್ನ ಹೆಂಡತಿ ಮತ್ತು ಮಗುವನ್ನು ನೋಡಲು ಪತಿ ಮರಳಿ ಬರದೆ ಇದ್ದಾಗ,

ಗ್ವಾಲಿಯರ್‌ನಿಂದ ಗುರುಗ್ರಾಮ್‌ಗೆ ಬರುವುದಾಗಿ ಪತ್ನಿ ಹೇಳಿದಾಗ, ಆತ 2021 ರಲ್ಲಿ ತನ್ನ

ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಮದುವೆಯಾಗಿರುವುದು ಆಕೆಯ ಕುಟುಂಬಕ್ಕೆ ಗೊತ್ತಾಗಿದೆ.

ಈ ವ್ಯಕ್ತಿಯ ಎರಡನೇ ಪತ್ನಿಗೆ ಒಂದು ಹೆಣ್ಣು ಮಗುವಿರುವುದು ತಿಳಿದುಬಂದಿದೆ.

ಈ ವಿಚಾರ ತಿಳಿಯುತ್ತಿದ್ದಂತೆ, ಮೊದಲ ಪತ್ನಿ ಜೀವನಾಂಶಕ್ಕಾಗಿ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ನಡೆಯಬೇಕಿದ್ದ ವಿಚಾರಣೆಯ ಮೊದಲು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವಂತೆ ವಕೀಲ ಮತ್ತು ಸಲಹೆಗಾರ ಹರೀಶ್ ದಿವಾನ್ ಅವರಿಗೆ ನ್ಯಾಯಾಲಯ (Court) ಹೇಳಿದೆ.

ಈ ಕುರಿತು ದಿವಾನ್ ಆ ವ್ಯಕ್ತಿಯೊಂದಿಗೆ ಮಾತನಾಡಿ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಬೇರೆ ಮಹಿಳೆಯನ್ನು ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆಯಡಿ ಅಪರಾಧ.

ಮೊದಲ ಪತ್ನಿ ಎಫ್‌ಐಆರ್ (FIR) ದಾಖಲಿಸಿದರೆ ನೀನು ಕೆಲಸ ಕಳೆದುಕೊಳ್ಳಬಹುದು ಎಂದು ವಕೀಲರು ಆ ವ್ಯಕ್ತಿಗೆ ಸಲಹೆ ನೀಡಿದ್ದಾರೆ.

ನಂತರ ಮೂರು ಜನರು ನ್ಯಾಯಾಲಯದ ಹೊರಗೆ ಒಪ್ಪಂದಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಒಪ್ಪಂದದ ಅನುಸಾರ, ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಮೊದಲ ಪತ್ನಿಯೊಂದಿಗೆ ಕಳೆದರೆ,

ಉಳಿದ ಮೂರು ದಿನಗಳನ್ನು ಎರಡನೇ ಪತ್ನಿಯೊಟ್ಟಿಗೆ ಕಳೆಯಬೇಕು ಮತ್ತು ಭಾನುವಾರ ಮಾತ್ರ ಆತನ ಆಯ್ಕೆ!

ಇಬ್ಬರು ಪತ್ನಿಯರ ಪೈಕಿ ಯಾರೊಟ್ಟಿಗೆ ಭಾನುವಾರ ಕಳೆಯಬೇಕು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಲಾಗಿದೆ.

ದಿವಾನ್ ಹೇಳಿರುವ ಪ್ರಕಾರ, ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಹೆಂಡತಿ ನ್ಯಾಯಾಲಯಕ್ಕೆ ಹೋಗಬಹುದು.

Exit mobile version