ಹೆಂಡತಿ ಮೇಲಿನ ಕೋಪಕ್ಕೆ ಮನೆಗೆ ಬೆಂಕಿಯಿಟ್ಟ ಪತಿರಾಯ: 6 ಮಂದಿ ಸಜೀವ ದಹನ

ಕೊಡಗು, ಎ. 03: ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಮನೆಗೆ ಬೆಂಕಿ ಇಟ್ಟ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ಬೇಬಿ (40), ಸೀತೆ (45), ಪ್ರಾರ್ಥನ (6) ಮೃತರು. ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7), ಪ್ರಕಾಶ್‌ (7) ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾಗ್ಯ (40) ಹಾಗೂ ಪಾಚೆ(60) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಬಿ ಅವರ ಪತಿ ಬೋಜ (50) ಕುಡಿದ ಮತ್ತಿನಲ್ಲಿ ತಡರಾತ್ರಿ ಲೈನ್‌ ಮನೆಯ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಪತ್ನಿ ಸಹೋದರನ ಮನೆಯಲ್ಲಿದ್ದಾಗ ಕರೆದರೂ ಬಂದಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಇದೆ. ಘಟನೆ ಬಳಿಕ ಬೋಜ ಪರಾರಿಯಾಗಿದ್ದು ಈತನ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

Exit mobile version