ಹುಷಾರ್! ಹಳಿ ಮೇಲೆ ನಡೆದ್ರೆ ಭಾರೀ ದಂಡ

ಬೆಂಗಳೂರು,ಫೆ.17:. ರೈಲ್ವೇ ನಿಲ್ದಾಣದಲ್ಲಿ ಇನ್ಮುಂದೆ ತಪ್ಪುಗಳನ್ನ ಮಾಡಿದರೆ ಅಥವಾ ತಪ್ಪು ಕೃತ್ಯಗಳನ್ನ ಎಸಗಿದ್ರೆ ಭಾರೀ ದಂಡತೆರಬೇಕಾಗುತ್ತೆ. ಅಷ್ಟೇ ಅಲ್ಲ ನೀವು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗ್ಬೋದು. ರೈಲ್ವೆ ಅಧಿಕಾರಿಗಳು ಹೇಳುವಂತೆ, ರೈಲ್ವೆ ಕಾಯ್ದೆಯಲ್ಲಿ ಕೆಲವು ನಿಯಮಗಳಿವೆ. ಆದ್ರೆ, ಪ್ರಯಾಣಿಕರು ಅವುಗಳನ್ನ ಅನುಸರಿಸುತ್ತಿಲ್ಲ. ಇನ್ಮುಂದೆಯಾದ್ರೂ ಜವಾಬ್ದಾರಿಯುತ ಪ್ರಯಾಣಿಕನಾಗಿ ರೈಲು ಪ್ರಯಾಣದಲ್ಲಿ ನೀವು ವ್ಯವಹರಿಸಬೇಕಾಗುತ್ತೆ ಎಂದಿದ್ದಾರೆ.

ರೈಲ್ವೆ ರಕ್ಷಣಾ ಪಡೆಯೊಂದಿಗೆ ರೈಲ್ವೆ ನಿಲ್ದಾಣದ ಆಡಳಿತ ಮಂಡಳಿಯು ಕೂಡ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಡಲಿದೆ. ಕಸ ಬಿಸಾಡುವಾಗ ಸಿಕ್ಕಿಬಿದ್ದರೆ 500 ರೂಪಾಯಿ ದಂಡ ವಿಧಿಸಲಾಗುವುದು. ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದ್ದು, ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಸಂದೇಶ ನೀಡಲಾಗುತ್ತಿದೆ.

ರೈಲ್ವೆ ಹಳಿ ದಾಟುವುದು, ರೈಲ್ವೆ ಕ್ಯಾಂಪಸ್ʼನಲ್ಲಿ ಕಸ ಹಾಕುವುದು, ಚೈನ್ ಎಳೆಯುವುದು, ರೈಲ್ವೆ ಕ್ಯಾಂಪಸ್ʼನಲ್ಲಿ ಜಗಳ ಮಾಡೋದು, ಪ್ಲಾಟ್ ಫಾರಂನಿಂದ ರೈಲಿನ ಕಡೆಗೆ ಇಣುಕಿ ನೋಡುವುದು ಕಂಡು ಬಂದ್ರೆ ಅದು ಅಪರಾಧದ ವಿಭಾಗದಲ್ಲಿ ಬರುತ್ತದೆ. ಇದಕ್ಕೆ ರೈಲ್ವೆ ಕಾಯ್ದೆಯಲ್ಲಿ ಕೆಲವು ನಿಬಂಧನೆಗಳಿದ್ದು, ದುಬಾರಿ ದಂಡದ ಜೊತೆಗೆ ಜೈಲು ಶಿಕ್ಷೆಯೂ ಆಗ್ಬೋದು.

ನೀವು ರೈಲನ್ನ ಬಲವಂತವಾಗಿ ನಿಲ್ಲಿಸಿದರೆ ಅದು ಬಹುದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಶಿಕ್ಷೆಯೂ ದೊಡ್ಡದಾಗಿದ್ದು, ರೈಲ್ವೆ ಕಾಯ್ದೆಯಡಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲು ಸಿದ್ದರಿರಬೇಕು. ಇದಲ್ಲದೆ ಕ್ಯಾಂಪಸ್ʼನಲ್ಲಿ ಜೋರಾಗಿ ಮಾತನಾಡುವುದು, ಜಗಳ ಮಾಡುವುದು ಮತ್ತು ಅಸಭ್ಯ ವರ್ತನೆಗೆ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಲು ಅವಕಾಶವಿದೆ.

ರೈಲ್ವೇ ಪ್ಲಾಟ್‌ ಫಾಮ್ ಅಂಚಿನಲ್ಲಿ ನಿಂತು ಫಿಕ್ಸೆಡ್ ಲೈನ್ ದಾಟಿ ಇಣುಕಿ ನೋಡಿದ್ದೇ ಆದ್ರೆ ಶಿಕ್ಷೆ ಖಚಿತ, ಹಳದಿ ಗೆರೆಗಳು ಅಥವಾ ಹಳದಿ ಕಲ್ಲುಗಳನ್ನ ವೇದಿಕೆಯ ಅಂಚಿನಿಂದ ಒಂದೂವರೆ ಅಡಿಗಳವರೆಗೆ ಅಳವಡಿಸಲಾಗಿದೆ. ರೈಲು ಬಂದಾಗ ಹಳದಿ ಗೆರೆಯ ಹೊರಗೆ ನಿಲ್ಲುವುದು ನಿಯಮ. ಈ ನಿಯಮವನ್ನ ಮೀರಿದ್ರೆ, ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿಯಲ್ಲಿ 500 ರೂಪಾಯಿ ಅಥವಾ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸುತ್ತದೆ.

ಹಲವು ಬಾರಿ ಪುರುಷ ಪ್ರಯಾಣಿಕರು ರೈಲಿನಲ್ಲಿ ಕಿಕ್ಕಿರಿದು ಜನ ಸೇರಿದಾಗ ಮಹಿಳಾ ಬೋಗಿ ಅಥವಾ ಅಂಗವಿಕಲ ಬೋಗಿಯನ್ನ ಪ್ರವೇಶಿಸುತ್ತಾರೆ. ಹೀಗೆ ಮಾಡಿದ್ರೆ ಬೋಗಿಗಳಲ್ಲಿ ಅಶಕ್ತ ಪ್ರಯಾಣಿಕರಿಗೆ ರೈಲ್ವೆ ಕಾಯಿದೆಯ ಸೆಕ್ಷನ್ 162 ಮತ್ತು ಸೆಕ್ಷನ್ 155ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. 500 ರೂಪಾಯಿ ದಂಡ ಅಥವಾ ಒಂದು ತಿಂಗಳ ಜೈಲು ಶಿಕ್ಷೆಯೂ ವಿಧಿಸಬಹುದು. ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version