ನವದೆಹಲಿ, ಡಿ. 16: 1971ರ ಯುದ್ಧದಲ್ಲಿ ಸೈನಿಕರು ಮಾಡಿದ ತ್ಯಾಗ, ಭಾರತೀ ನಾಗರಿಕರಿಗೆ ಸ್ಫೂರ್ತಿ. ಹುತಾತ್ಮರು ಸದಾ ಸ್ಮರಣೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
1971ರ ಡಿಸೆಂಬರ್ 16ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿತು. ಈ ಪ್ರಯುಕ್ತ ದೇಶದಾದ್ಯಂತ ಡಿಸೆಂಬರ್ 16ನ್ನು ‘ವಿಜಯ ದಿನ’ ಎಂದು ಆಚರಿಸಲಾಗುತ್ತದೆ. ಇದೇ ದಿನ ಬಾಂಗ್ಲಾದೇಶ ಕೂಡ ರೂಪುಗೊಂಡಿತು. ಆದ್ದರಿಂದ ಅವರು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಾರೆ.
‘ಇಂದು ‘ವಿಜಯ ದಿನ’ದ ಸಂದರ್ಭದಲ್ಲಿ ನಾನು ಭಾರತೀಯ ಸೇನೆಯ ಧೈರ್ಯ ಮತ್ತು ಶೌರ್ಯಕ್ಕೆ ವಂದಿಸುತ್ತೇನೆ. 1971ರ ಯುದ್ಧದಲ್ಲಿ ಸೈನಿಕರು ತಮ್ಮ ಶೌರ್ಯದ ಹೊಸ ಕಥೆಯನ್ನು ಬರೆದಿದ್ದಾರೆ’ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
आज विजय दिवस के अवसर मैं भारतीय सेना के शौर्य एवं पराक्रम की परम्परा को नमन करता हूँ। मैं स्मरण करता हूँ उन जाँबाज़ सैनिकों की बहादुरी को जिन्होंने १९७१ के युद्ध में एक नई शौर्यगाथा लिखी। उनका त्याग और बलिदान सभी भारतीयों के लिए प्रेरणा का स्रोत है। यह देश उन्हें हमेशा याद रखेगा।
— Rajnath Singh (@rajnathsingh) December 16, 2020