ಸೆ.17 ಹೈದ್ರಾಬಾದ್‌ ವಿಮೋಚನೆ ; ರಜಾಕರ ಹಾವಳಿ, ಪಟೇಲರ ದಿಟ್ಟತನ, ಪೊಲೀಸ್ ಕಾರ್ಯಾಚರಣೆ!

Hyderabad : 1947 ಆಗಸ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು. ಆದರೆ ಹೈದ್ರಾಬಾದ್ (Hyderabad) ಸಂಸ್ಥಾನದ ಜನರ ಅಭಿಪ್ರಾಯವನ್ನು ವಿರೋಧಿಸಿದ ನಿಜಾಮ “ನಿಜಾಮ್ ರೇಡಿಯೋ”(Nizam Radio) ಮೂಲಕ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ.

Nizam

ಆ ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ನ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್(British) ಹಾಗು ಪಾಕಿಸ್ತಾನ(Pakistan) ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತವು.

ಪಾಕಿಸ್ತಾನವು ಹೈದರಾಬಾದ್ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಪರೋಕ್ಷವಾಗಿ ಬ್ರಿಟನ್‌ ಕೂಡಾ ಇದಕ್ಕೆ ನೆರವು ನೀಡಿತ್ತು.

ಆಗ ಹೈದರಾಬಾದ ಪ್ರಜೆಗಳು ಸ್ವಾಮಿ ರಾಮಾನಂದ ತೀರ್ಥರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದ್ದರು. ಈ ಚಳುವಳಿಯನ್ನು ಹತ್ತಿಕ್ಕಲು ನಿಜಾಮ ಪೋಲೀಸ್ ಬಲವನ್ನು ಅತ್ಯಂತ ಕ್ರೂರವಾಗಿ ಬಳಸಿದ.

ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕರರು ಎಂಬ ಹೆಸರಿನ ಭಯೋತ್ಪಾದಕರ ಪಡೆಯನ್ನು ದಾಳಿಗಿಳಿಸಿದರು.

ಈ ರಜಾಕಾರರು ಸಾವಿರಾರು ಅಮಾಯಕರ ಮೇಲೆ ದಾಳಿ ಮಾಡಿ ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಹಿಂದು ಸಮುದಾಯದ ಮೇಲೆ ದಾಳಿ ಮಾಡುವುದು,

ಬೆಳೆ ನಾಶ ಮಾಡುವುದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವುದು, ಹೆಂಗಸರ ಮೇಲೆ ಅತ್ಯಾಚಾರ, ಹಿಂಸಿಸಿ ಕೊಲ್ಲುವುದು.

`ಕಾಟೊ, ಲೂಟೊ ಔರ ಬಾಟೊ’ ಎನ್ನುವುದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ.

https://youtu.be/kbwSg9_8jrY ವೆಹಿಕಲ್ ಟೋಯಿಂಗ್ ಅವಶ್ಯಕತೆ ಇದೆಯಾ?

ಪಟೇಲರ ದಿಟ್ಟತನ : 1948 ಸಪ್ಟಂಬರ್ ೧೨ರಂದು ಪ್ರಧಾನಿ ಜವಾಹರಲಾಲ್‌ ನೆಹರೂ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ಗೋಪಾಲಸ್ವಾಮಿ ಅಯ್ಯಂಗಾರ್, ರಕ್ಷಣಾ ಮಂತ್ರಿ ಬಲದೇವ ಸಿಂಗ, ಜನರಲ್ ಬುಕರ್, ಜನರಲ್ ಕರಿಯಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ : https://vijayatimes.com/wife-got-to-know-his-husband-is-women-after-8-years/

ಜನರಲ್ ಬುಕರ್ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವುದೆ ಆದರೆ, ತಾವು ರಾಜೀನಾಮೆ ಕೊಡುವುದಾಗಿ ಹೇಳಿದರು.

ಆಗ ಪಟೇಲರು “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು. ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು” ಎಂದು ಘೋಷಣೆ ಮಾಡಿದರು.

ನಂತರ ಸಪ್ಟಂಬರ್ 13 ರಂದು ಭಾರತೀಯ ಸೇನೆ ಹೈದ್ರಾಬಾದ್‌ ಮೇಲೆ ದಾಳಿ ಪ್ರಾರಂಭಿಸಿತು. ಸಪ್ಟಂಬರ್ 18 ರಂದು ಭಾರತೀಯ 18 ಸೇನೆಯ ಜನರಲ್ ಚೌಧರಿಗೆ ಹೈದರಾಬಾದ್‌ ಸೇನೆಯ ಮುಖಂಡ ಎಲ್ ಎದ್ರೂಸ್ ಶರಣಾಗತನಾದ. ಹೈದ್ರಾಬಾದ್ ಜನತೆಗೆ ವಿಮೋಚನೆ ದೊರೆಯಿತು.
Exit mobile version