ಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾ

Sumalatha

ನನಗೆ ರಾಜಕೀಯ(Political) ಅನಿವಾರ್ಯವಲ್ಲ. ಮಂಡ್ಯ(Mandya) ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಮಂಡ್ಯವನ್ನು ಬಿಡುವುದಿಲ್ಲ, ನನ್ನನ್ನು ಮಂಡ್ಯ ಬಿಡುವುದಿಲ್ಲ. ನಾನು ಮಂಡ್ಯ ಲೋಕಸಭಾ ಕ್ಷೇತ್ರವನ್ನು(Mandya Loksabha) ಬಿಟ್ಟು ಹೋಗುತ್ತೇನೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್(Sumalatha Ambareesh) ಹೇಳಿದ್ದಾರೆ.

ಮಂಡ್ಯದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯ ಲೋಕಸಭಾ ಕ್ಷೇತ್ರವನ್ನು ತೊರೆದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಶುದ್ದ ಸುಳ್ಳು. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇನ್ನು ನನ್ನ ಮಗ ಅಭಿಷೇಕ್ ಅಂಬರೀಶ್‍ಗಾಗಿ(Abhishek Ambareesh) ಯಾವ ಕ್ಷೇತ್ರದಿಂದಲೂ, ಯಾವ ಪಕ್ಷದಿಂದಲೂ ಟಿಕೆಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಮೈಸೂರು-ಕೊಡಗು(Mysuru-Kodagu) ಸಂಸದ ಪ್ರತಾಪ್ ಸಿಂಹ(Prathap Simha) ಜೊತೆ ನಡೆಯುತ್ತಿರುವ ಶೀತಲ ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾರ ಜೊತೆಯೂ ಶೀತಲ ಸಮರ ನಡೆಸುತ್ತಿಲ್ಲ. ಈ ರೀತಿಯ ಸಮರ ನಡೆಸಲು ನನಗೆ ಸಮಯವಿಲ್ಲ. ಹೆದ್ದಾರಿ ವಿಚಾರದಲ್ಲಿ ಮಂಡ್ಯ ಜನತೆಗೆ ತೊಂದರೆಯಾದರೆ, ಅದರ ವಿರುದ್ದ ನಾನು ಹೋರಾಟ ನಡೆಸುತ್ತೇನೆ. ಇನ್ನು ಮಂಡ್ಯ ನಗರದಲ್ಲಿನ ಕೆಎಚ್‍ಬಿ ಕಾಲೋನಿಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿರುವುದು ನನ್ನ ಗಮನಕ್ಕೆ ಬಂದಿದೆ.

ಅದನ್ನು ಸರಿಪಡಿಸುವಂತೆ ದಿಶಾ ಸಭೆಯಲ್ಲಿ ಸೂಚಿಸಿದ್ದೇನೆ. ಅದರ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದರು ನನಗೆ ಏನೂ ತೊಂದರೆ ಇಲ್ಲ ಎಂದಿದ್ದಾರೆ.

Exit mobile version