2023ರ ಐಸಿಸಿ ತಿಂಗಳ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್

India : ಭಾರತೀಯ ಸ್ಟಾರ್ ಕ್ರಿಕೆಟಿಗರಾದ ಶುಭಮನ್ ಗಿಲ್ (ICC Award 2023 Selection) ಮತ್ತು ಮೊಹಮ್ಮದ್ ಸಿರಾಜ್‌ ಸೇರಿದಂತೆ ಮೂವರು 2023ರ ಐಸಿಸಿ ತಿಂಗಳ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾದ ಐಸಿಸಿ(ICC), ಜನವರಿ 2023ರ ತಿಂಗಳ ಆಟಗಾರ ಪ್ರಶಸ್ತಿಗೆ ಇಬ್ಬರು ಭಾರತೀಯ ಸ್ಟಾರ್‌ ಕ್ರಿಕೆಟ್‌ ಆಟಗಾರರು, ಮತ್ತೊಬ್ಬ ನ್ಯೂಜಿಲೆಂಡ್‌(New Zealand) ಆಟಗಾರ ಆಯ್ಕೆ

ಆಗಿದ್ದಾರೆ. ಈ ಕುರಿತು ಐಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ (Social Media) ಖಾತೆಯಲ್ಲಿ ಮಾಹಿತಿಯನ್ನು ಮಂಗಳವಾರ ಪ್ರಕಟಿಸಿದೆ. ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಆದ ಶುಭಮನ್ ಗಿಲ್,

ಬಲಗೈ ಬೋಲರ್ ಆದ ಮೊಹಮ್ಮದ್ ಸಿರಾಜ್ ಮತ್ತು ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಓಪನಿಂಗ್‌ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ(Devon Conway).

ಈ ಬಗ್ಗೆ ಐಸಿಸಿ(ICC) ತಮ್ಮ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟಿಸಿದೆ. ಮೂವರು ಕ್ರಿಕೆಟಿಗರಿಗೆ ಮತ ಹಾಕಲು ಲಿಂಕ್ ಅನ್ನು ಕ್ರಿಕೆಟ್‌ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಫಾರ್ಮ್ಯಾಟ್‌ಗಳಾದ್ಯಂತ ಉತ್ತಮ ರನ್‌ ಗಳಿಸುವ ಮೂಲಕ ತಮ್ಮ ತಂಡಕ್ಕೆ ಅತೀ ಹೆಚ್ಚು ರನ್‌ ಹಾಗೂ

ಅತ್ಯುತ್ತಮ ಪ್ರದರ್ಶನಗಳೊಂದಿಗೆ ದಾಖಲೆಗಳನ್ನು ನಿರ್ಮಿಸುತ್ತಿರುವ ಶುಭಮನ್‌ ಗಿಲ್‌ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ಜನವರಿ 2023 ರಲ್ಲಿ,

ಶುಭಮನ್‌ ಗಿಲ್‌ ಅವರು ಶ್ರೀಲಂಕಾ (Sri Lanka) ವಿರುದ್ಧದ ಮೂರು ಪಂದ್ಯಗಳ ಏಕ ದಿನ ಪಂದ್ಯದ (ODI) ಸರಣಿಯಲ್ಲಿ 69.00 ಸರಾಸರಿಯಲ್ಲಿ 207 ರನ್ ಗಳಿಸುವ ಮೂಲಕ

ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು.

ಇದನ್ನೂ ಓದಿ: ಮೈಸೂರು – ಬನ್ನೇರುಘಟ್ಟ ರಿಂಗ್‌ ರಸ್ತೆಗೆ ಪುನೀತ್ ರಾಜ್‌ಕುಮಾರ್ ನಾಮಕರಣ

ಅದೇ ತಿಂಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ODI ಸರಣಿ ಮತ್ತು ಮೂರು ಪಂದ್ಯಗಳ ಟಿ-೨೦(T20I) ಸರಣಿಯಲ್ಲಿ ಅದ್ಭುತ ಪ್ರದರ್ಶನಗಳನ್ನು ತೋರಿರುವುದು ಗಣನೀಯಕ್ಕೆ ತೆಗೆದುಕೊಳ್ಳಲಾಗಿದೆ.

ಏಕದಿನ ಪಂದ್ಯಗಳಲ್ಲಿ ಶುಭಮನ್‌ ಗಿಲ್‌ ಅವರು ಮೂರು ಪಂದ್ಯಗಳಲ್ಲಿ 180.00 ಸ್ಟ್ರೇಕ್‌ ರೇಟ್ ಸರಾಸರಿಯಲ್ಲಿ 360 ರನ್‌ಗಳನ್ನು ಗಳಿಸಿ, ಸರಣಿಯ ಆಟಗಾರ ಪ್ರಶಸ್ತಿಯನ್ನೂ ಬಾಚಿಕೊಂಡರು.

ಇದೇ ರೀತಿ ಭಾರತದ ಮತ್ತೊಬ್ಬ ಆಟಗಾರರಾದ ಮೊಹಮ್ಮದ್‌ ಸಿರಾಜ್‌, ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ವಿಶ್ವದ ನಂ.1 ಬೋಲರ್ ಆಗಿ ಹೊರಹೊಮ್ಮಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಸಿರಾಜ್‌ ಗುರುತಿಸಿಕೊಂಡರು. ಸಿರಾಜ್‌ ಅವರು ಮೂರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು. ತದನಂತರ

ನ್ಯೂಜಿಲೆಂಡ್ ವಿರುದ್ಧದ ಎರಡು ODI ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದರು.

ಇನ್ನು ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಓಪನಿಂಗ್‌ ಬ್ಯಾಟ್ಸ್ಮನ್ ಕಾನ್ವೇ ಅವರು ಭಾರತ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರು.
ಮೂರು ಪಂದ್ಯಗಳಲ್ಲಿ 51.67 ಸರಾಸರಿಯಲ್ಲಿ 155 ರನ್ ಗಳಿಸಿದರು.

ಒಟ್ಟಾರೆ ಈ ಬಾರಿಯ ೨೦೨೩ರ ಐಸಿಸಿ ತಿಂಗಳ ಆಟಗಾರರ ಪ್ರಶಸ್ತಿಗೆ ಭಾರತ ತಂಡದಿಂದ ಶುಭಮನ್‌ ಗಿಲ್‌,

ಸಿರಾಜ್‌ ಮೊಹಮ್ಮದ್‌ ಮತ್ತು ನ್ಯೂಜಿಲೆಂಡ್‌ ತಂಡದಿಂದ ಕಾನ್ವೇ ಅವರನ್ನು ಐಸಿಸಿ ಆಯ್ಕೆ ಮಾಡಿದೆ.

Exit mobile version