ಐಸಿಸಿ ಟಿ 20 ವಿಶ್ವಕಪ್ ಕ್ರಿಕೆಟ್ : ಭಾರತ ಮತ್ತು ಪಾಕ್ ಪಂದ್ಯ ಅಕ್ಟೋಬರ್ 24ಕ್ಕೆ

ದುಬೈ : ಕ್ರಿಕೆಟ್ ನ ಸಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ  ಅಕ್ಟೋಬರ್ 24ಕ್ಕೆ ರಂದು ಪಂದ್ಯ ನಡೆಯಲಿದೆ.

ಈ ಬಾರಿ ಭಾರತದಲ್ಲಿ ನಡೆಯಬೇಕಿದ್ದ ಪಂದ್ಯವು ಕೊರನಾ ಕಾರಣದಿಂದಾಗಿ ಯುಎಇ ಮತ್ತು ಒಮನ್ ಗೆ ಸ್ಥಳಾಂತರಗೊಂಡಿದೆ. ಈ ಬಾರಿಯ ಟಿ20 ಪಂದ್ಯಾವಳಿಯು ಒಮನ್ ಮತ್ತು ಯುಎಇ ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ಗೆ ಚಾಲನೆ ದೊರೆಯಲಿದ್ದು ಚುಟುಕು ಕ್ರಿಕೆಟ್ ಸಮರ ನವೆಂಬರ್ 14ರ ವರೆಗೂ ನಡೆಯಲಿದೆ.

ಟಿ20 ವಿಶ್ವಕಪ್‌ ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆದರೆ, ಎರಡನೇ ಸುತ್ತಿನಲ್ಲಿ ಸೂಪರ್‌ 12ರ ಹಂತದ ಪಂದ್ಯಗಳು ಜರುಗಲಿವೆ. ನವೆಂಬರ್‌ 10 ರಂದು ಅಬುಧಾಬಿಯಲ್ಲಿ ಮೊದಲನೇ ಸೆಮಿಫೈನಲ್‌ ನಡೆಯಲಿದ್ದು, ಎರಡನೇ ಸೆಮಿಫೈನಲ್‌ ಪಂದ್ಯ ದುಬೈನಲ್ಲಿ ನವೆಂಬರ್‌ 11 ರಂದು ಜರುಗಲಿದೆ. ಈ ಎರಡೂ ನಾಕೌಟ್‌ ಪಂದ್ಯಗಳಿಗೆ ಮೀಸಲು ದಿನಗಳನ್ನು ನೀಡಲಾಗಿದೆ. ಇನ್ನು ಫೈನಲ್‌ ಪಂದ್ಯ ನವೆಂಬರ್‌ 14 ರಂದು ಭಾನುವಾರ ದುಬೈನಲ್ಲಿ ಆಯೋಜಿಸಲಾಗಿದೆ.

ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ ; ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ದ ಅ.31 ರಂದು ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ನ.3 ಟೀಂ ಇಂಡಿಯಾ ಪಡೆ, ಅಫ್ಗಾನಿಸ್ತಾನ ವಿರುದ್ದ ಮತ್ತು ನ.5 ರಂದು ಮತ್ತು ಮೊದಲ ಸುತ್ತಿನ ಬಿ ಗುಂಪಿನ ವಿಜೇತ ತಂಡದೊಂದಿಗೆ ಸೆಣಸಲಿದೆ. ಅಂತಿಮವಾಗಿ ನವೆಂಬರ್‌ 8 ರಂದು ಮೊದಲ ಸುತ್ತಿನ ಎ ಗುಂಪಿನ ವಿಜೇತ ತಂಡದೊಂದಿಗೆ ಭಾರತ ಸೆಣೆಸಾಡಲಿದೆ.

Exit mobile version