Maharashtra: ಕೆಲ ದಿನಗಳ ಹಿಂದಷ್ಟೇ ಪುಣೆ (Pune)ಯಲ್ಲಿ ಸಂಭವಿಸಿದ ಪೋರ್ಷೆ ಕಾರು ಅಪಘಾತ (Porsche Car Accident)ದ ನಂತರ ಎಚ್ಚೆತ್ತಿರುವ ಮಹಾರಾಷ್ಟ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನುಮುಂದೆ ಬಾರ್ ಹಾಗೂ ಪಬ್ಗಳಲ್ಲಿ ಮದ್ಯ ಸೇವಿಸಲು ಕನಿಷ್ಟ ಸರ್ಕಾರಿ ಗುರುತಿನ ಚೀಟಿಹೊಂದಿರಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದಾಗಿ ಅಪ್ರಾಪ್ತ ವಯಸ್ಸಿನ ಬಾಲಕರು ಮದ್ಯ ಸೇವನೆ ಮಾಡುವುದನ್ನು ತಡೆಯಬಹುದಾಗಿದೆ ಎಂಬುದು ಮಹರಾಷ್ಟ್ರ (Maharashtra) ಸರ್ಕಾರದ ಕಾರ್ಯ ಯೋಜನೆಯಾಗಿದೆ.
![](https://sp-ao.shortpixel.ai/client/to_webp,q_glossy,ret_img,w_750,h_450/https://vijayatimes.com/wp-content/uploads/2024/06/750x450_541062-porsche-car-accident-case.webp)
ಪುಣೆಯಲ್ಲಿ ಅಪ್ರಾಪ್ತನೊಬ್ಬ ಗೆಳೆಯರೊಡನೆ ಸೇರಿ ಪಬ್ ಒಂದರಲ್ಲಿ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ಆಡಳಿತದ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಪ್ರಾಪ್ತರ ಕೈಯಲ್ಲಿ ವಾಹನ ನೀಡಿದ್ದು ಎಷ್ಟು ದೊಡ್ದ ತಪ್ಪೋ , ಅಪ್ರಾಪ್ತರಿಗೆ ಮದ್ಯ ಸೇವನೆ ಮಾಡಲು ಅವಕಾಶ ಕಲ್ಪಿಸಿದ್ದು ಕೂಡ ಅತಿ ದೊಡ್ದ ತಪ್ಪು ಎಂಬ ವ್ಯಂಗ್ಯದ ಮಾತುಗಳು ಕೇಳಿ ಬಂದಿದ್ದವು.ಇದರಿಂದ ಎಚ್ಚೆತ್ತುಕೊಂಡಿರುವ ಪಬ್ ಮತ್ತು ಬಾರ್ (Pub and Bar)ನಿರ್ವಾಹಕರು ಇದೀಗ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿಕೊಂಡು ಸರ್ಕಾರದ ಹೊಸ ಯೋಜನೆಗೆ ಅನುಮತಿ ನೀಡಿದ್ದಾರೆ.
ಹಾಗಾಗಿ ಇನ್ಮುಂದೆ ಮುಂಬೈ ಮತ್ತು ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ (Wine) ಸೇವಿಸುವವರಿಗೆ ವಯಸ್ಸಿನ ಪ್ರಮಾಣ ಪತ್ರ ಅಗತ್ಯವಾಗಲಿದೆ. ಈಗಾಗಲೇ ಪುಣೆ, ಮುಂಬೈ, ನಾಗ್ಪುರದಂತಹ ದೊಡ್ಡ ನಗರಗಳಲ್ಲಿ ಅಪ್ರಾಪ್ತ ವಯಸ್ಕರು ಮದ್ಯಪಾನ ಮಾಡಿ ಅತಿವೇಗದಲ್ಲಿ ವಾಹನ ಚಲಾಯಿಸುವ ಅನೇಕ ಪ್ರಕರಣಗಳಿವೆ. ಹಾಗಾಗಿ ಈಗ ಮುಂಬೈ ಪುಣೆಯಲ್ಲಿ ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಸೇವಿಸುವ ಮುನ್ನ ವಯಸ್ಸಿನ ಪ್ರಮಾಣ ಪತ್ರವನ್ನು ಪ್ರವೇಶ ದ್ವಾಾರದಲ್ಲಿಯೇ ಪರಿಶೀಲಿಸಲಾಗುತ್ತದೆ.
ವೈನ್ ಮತ್ತು ಬಿಯರ್ ಕುಡಿಯಲು 21 ವರ್ಷ ಮತ್ತು ಮದ್ಯ ಸೇವಿಸಲು 25 ವರ್ಷ ವಯಸ್ಸು ಕಡ್ಡಾಯವಾಗಿ ಆಗಿರಬೇಕಾಗಿರುತ್ತದೆ. ಇದಕ್ಕಿಂತ ಚಿಕ್ಕ ವಯಸ್ಸಿನವರಿಗೆ ಯಾವುದೇ ಮದ್ಯಪಾನ ನೀಡಲಾಗುವುದಿಲ್ಲ ಎಂದು ಪಬ್ ಮತ್ತು ಬಾರ್ ನಿರ್ವಾಹಕರು ತಿಳಿಸಿದ್ದಾರೆ.