Bengaluru, ಆಗಸ್ಟ್ 02: ಇಂದು ಕರ್ನಾಟಕ ಹೈಕೋರ್ಟ್(Illegal flex banner fine) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ರಾಜ್ಯ ಸರ್ಕಾರವನ್ನು ಅಕ್ರಮ ಫ್ಲೆಕ್ಸ್ (Flex)
ಹಾವಳಿ ತಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಳೆ (B.Varale) ಮತ್ತು ಎಂಜಿಎಸ್ ಕಮಲ್ (MGS Kamal)
ಅವರಿದ್ದ ಹೈಕೋರ್ಟ್ ಪೀಠ ‘ನಿಮಗೆ ಐದು ವರ್ಷಗಳ ಯೋಜನೆ ಈ ಅಕ್ರಮ ಬ್ಯಾನರ್‌ಗಳನ್ನು ತಡೆಯಲು ಬೇಕೇ? ನೀವು ಈ ಅನಧಿಕೃತ ಬ್ಯಾನರ್‌ಗಳನ್ನು (Banner) ತೆಗೆದುಹಾಕಲು ಶುಭ
ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ?’ ಎಂದು ಹೇಳಿದೆ.

ಬೆಂಗಳೂರಿನಲ್ಲಿ(Bengaluru) ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಫ್ಲೆಕ್ಸ್‌ಗಳನ್ನು ಹಾಕುವುದು ಸರ್ವೇಸಾಮಾನ್ಯವಾಗಿದೆ. ನಗರದ ಸೌಂದರ್ಯಕ್ಕೆ ಈ ಬ್ಯಾನರ್‌ಗಳಿಂದ ಹಾನಿಯಾಗುತ್ತದೆ
ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕರ್ನಾಟಕ ಹೈಕೋರ್ಟ್ ನಗರದಲ್ಲಿನ ಫ್ಲೆಕ್ಸ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶವನ್ನು ಸರ್ಕಾರ
ಹಾಗೂ ಬಿಬಿಪಿಎಂ ಪಾಲಿಸಿಲ್ಲ ಎಂಬುದು ಮೇಲ್ನೊಟಕ್ಕೆ (Illegal flex banner fine) ಗೊತ್ತಾಗುತ್ತದೆ.
ಬೆಂಗಳೂರು ಬ್ರ್ಯಾಂಡ್‌ಗೆ (Bengaluru Brand) ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳು ಕಪ್ಪು ಚುಕ್ಕೆಯಾಗಿದೆ. ನೀವು ಯಾವ ಸಂದೇಶವನ್ನು ಹೂಡಿಕೆದಾರರಿಗೆ ರವಾನಿಸುತ್ತೀರಿ? ವಿಶ್ವದರ್ಜೆಯ ನಗರವನ್ನಾಗಿ
ಬೆಂಗಳೂರನ್ನು ನೋಡಲಾಗುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ. ಬಿಬಿಎಂಪಿ ಮತ್ತು ಸರ್ಕಾರಕ್ಕೆ ನ್ಯಾಯಾಲಯವು ನಗರದಲ್ಲಿನ ಪ್ರತಿ ಅಕ್ರಮ ಬ್ಯಾನರ್‌ಗೆ 50 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
2018ರಲ್ಲಿ ಈಗಾಗಲೇ ಈ ಬಗ್ಗೆ ನ್ಯಾಯಾಲಯ ಆದೇಶದ ಹೊರಡಿಸಿತ್ತು ಇದರ ಹೊರತಾಗಿಯೂ ನಗರದಾದ್ಯಂತ ಬ್ಯಾನರ್‌ಗಳು,ಅಕ್ರಮ ಫ್ಲೆಕ್ಸ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ತಡೆಯಲು ವಿಫಲವಾಗಿದೆ
ಎಂದು ಹೈಕೋರ್ಟ್ ತಿಳಿಸಿದೆ. ಇದೇ ವೇಳೆ ಸರ್ಕಾರವನ್ನು ಮತ್ತು ಬಿಬಿಎಂಪಿ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ : ಬೆಳೆ ವಿಮೆ ಗೋಲ್‌ಮಾಲ್ ! ರೈತ ಬೆಳೆಗೆ ಖರ್ಚು ಮಾಡಿದ್ದು 15 ಸಾವಿರ ಆದರೆ ವಿಮೆ ಸಿಕ್ಕಿದ್ದು ಕೇವಲ 960ರೂ!
ಈ ವಿಚಾರವಾಗಿ ಹೈಕೋರ್ಟ್ ಸರ್ಕಾರಕ್ಕೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ ಅಲ್ಲದೆ ಇಂತಹ ಚಟುವಟಿಕೆಗಳನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸಹ ಆದೇಶಿಸಿದೆ.

60,000 ಅಕ್ರಮ ಫ್ಲೆಕ್ಸ್‌ಗಳು ವಿಧಾನಸಭೆ ಚುನಾವಣೆ(Vidhanasabha Election) ವೇಳೆ ಆದರೆ, ಕೇವಲ 134 ದೂರುಗಳನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಗಣಿಸಲಾಗಿದೆ. ಮತ್ತು ಕೇವಲ
40 ಎಫ್‌ಐಆರ್‌ಗಳನ್ನು (FIR) ದಾಖಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಇನ್ನು ಈ ಬಗ್ಗೆ ಹೈಕೋರ್ಟ್ ಸರ್ಕಾರವನ್ನು ಅಕ್ರಮ ಬ್ಯಾನರ್ ಕಟ್ಟಿರುವ ರಾಜಕೀಯ ಪಕ್ಷಗಳ ಪದಾಧಿಕಾರಿಗಳ
ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದೆ.
‘ಹೈಕೋರ್ಟ್ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಇನ್ನು ಮೂರು ವಾರಗಳಲ್ಲಿ ನಗರದಲ್ಲಿನ ಅಕ್ರಮ ಹೋರ್ಡಿಂಗ್‌ಗಳ ಮೇಲೆ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದೆ.
ರಶ್ಮಿತಾ ಅನೀಶ್