ಬಿಗ್‌ಬಾಸ್‌ ಸೀಸನ್‌-8ಕ್ಕೆ ಹೋಗಲು ನಾನು ರೆಡಿ ಇದ್ದೇನೆ: MLC ಎಚ್. ವಿಶ್ವನಾಥ್

ಬೆಂಗಳೂರು, ಮಾ. 01: ನನಗೆ ಬಿಗ್‌ಬಾಸ್‌ ಸೀಸನ್‌-8ಕ್ಕೆ ಹೋಗಲು ನಾನು ರೆಡಿ ಇದ್ದೇನೆ. ಆದರೆ, ಚುನಾವಣೆ ಚಟುವಟಿಕೆ, ಬೇರೆ ಕಾರ್ಯಗಳ ಮಧ್ಯೆ ಹೋಗುವುದು ಕಷ್ಟ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬದುಕುತ್ತಿರುವ ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ, ರಾಜಕಾರಣವನ್ನು ಸಕಾರಾತ್ಮಕವಾಗಿ ನೋಡಬೇಕು. ಬಿಗ್‌ಬಾಸ್‌ಗೆ ಹೋದರೆ ಅದನ್ನು ಪ್ರಮೋಟ್‌ ಮಾಡೋದಕ್ಕೆ ವೇದಿಕೆ ಸಿಕ್ಕಿದಂತೆಯೂ ಆಗುತ್ತದೆ ಎಂದು ಯೋಚಿಸಿದ್ದೆ. ಚುನಾವಣೆ ಚಟುವಟಿಕೆ, ಬೇರೆ ಕಾರ್ಯಗಳ ಮಧ್ಯೆ ಬಿಗ್‌ಬಾಸ್‌ಗೆ ಹೋಗುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಜನರಿಗೆ ಎಲ್ಲವೂ ಅರ್ಥ ಆಗುತ್ತಿದೆ. ಆದರೆ, ರಾಜಕಾರಣ ಅರ್ಥವಾಗುತ್ತಿಲ್ಲ. ನಾವು ಉಸಿರಾಡುವುದು, ತಿನ್ನುವುದು, ಮಲಗುವುದು ಎಲ್ಲವೂ ರಾಜಕಾರಣ. ಆ ಮನೆಯಲ್ಲಿ ಯುವಕರು, ಸಿನಿಮಾದವರಿದ್ದಾರೆ. ಅಲ್ಲಿಯೂ ರಾಜಕಾರಣವನ್ನು ತಿಳಿಸಬೇಕು ಎಂದರು.

Exit mobile version