ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಜನ ಕರೆ ತರಲು 1600 ಬಸ್ ಬಳಕೆ!

Bengaluru : ಶಿವಮೊಗ್ಗದ (Shivamogga) ಸೋಗಾನೆಯಲ್ಲಿನ ವಿಮಾನ ನಿಲ್ದಾಣದ (Airport) ಉದ್ಘಾಟನಾ ಕಾರ್ಯಕ್ರಮಕ್ಕೆ ಫೆಬ್ರವರಿ 27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Inauguration of Shimoga Airport) ಬಂದ ಹಿನ್ನೆಲೆಯಲ್ಲಿ,

ಅದೇ ಜಿಲ್ಲೆಯ ವಿವಿಧ ತಾಲೂಕುಗಳಿಂದ 1600 ಕೆ. ಎಸ್.ಆರ್.ಟಿ.ಸಿ (KSRTC) ಬಸ್‌ಗಳಲ್ಲಿ ಜನರನ್ನು ಕರೆಸಿದ್ದರು ಎಂಬ ಅಚ್ಚರಿಯ ಮಾಹಿತಿ ಆರ್‌ಟಿಐಯಿಂದ (RTI) ತಿಳಿದು ಬಂದಿದೆ ಎಂದು ದಿ ಫೈಲ್ಸ್‌ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬರುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ಅಂದು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರು.

ಆದರೆ ಅಲ್ಲಿಗೆ ಆಗಮಿಸಿದ್ದ ಜನರನ್ನು ಶಿವಮೊಗ್ಗದ ಮೂಲೆ ಮೂಲೆಗಳಿಂದ ಬಿಜೆಪಿ ಸರ್ಕಾರ ಕರೆತಂದಿರುವ ವಿಷಯ ಮಾಹಿತಿ ಹಕ್ಕು ಅರ್ಜಿಗೆ

ಕೆ.ಎಸ್ ಆರ್.ಟಿ.ಸಿ ಶಿವಮೊಗ್ಗದ ವಿಭಾಗದ ಅಧಿಕಾರಿಗಳು ಉತ್ತರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗಪಡಿಸಿದ್ದಾರೆ.


ಮೋದಿಯವರ ಆಗಮನಕ್ಕಾಗಿ ಜನರು ಸ್ವಯಂ ಆಸಕ್ತಿಯಿಂದ ಬಂದಿದ್ದರು.

ಸೇರಿರುವ ಜನಸ್ತೋಮ ಮೋದಿ ಅಭಿಮಾನಿಗಳು ಎಂದು ಬಿಜೆಪಿ (BJP) ನಾಯಕರನ್ನು ಹೇಳಿಕೊಂಡಿದ್ದರು.

ಆದ್ರೆ ಈಗ ಲಭ್ಯವಾಗಿರುವ ಆರ್‌ಟಿಐ ಮಾಹಿತಿ ಅದಕ್ಕೆ ವ್ಯತಿರಿಕ್ತವಾದ ಪುರಾವೆಗಳನ್ನು ಕೊಡುತ್ತಿದೆ.

ಇದನ್ನೂ ಓದಿ : https://vijayatimes.com/dhruvanarayan-wife-dies/


ಕೆ.ಎಸ್.ಆರ್.ಟಿ.ಸಿ ವಾಹನಗಳಲ್ಲಿ 1600 ವಾಹನಗಳನ್ನು ವಿಮಾನ ನಿಲ್ದಾಣದ ಉದ್ಘಾಟನೆಗೆ ಜನರನ್ನು ಕರೆತರಲು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆದಿದ್ದಕ್ಕೆ

ಪ್ರತಿಯಾಗಿ ಶಿವಮೊಗ್ಗ ಕಾರ್ಯಪಾಲಕ ಇಂಜಿನಿಯರ್ ಅವರು 3.93ಕೋಟಿ ರೂಪಾಯಿ (3,93,92, 565ರೂಪಾಯಿ) ಹಣವನ್ನು (Inauguration of Shimoga Airport) ಪಾವತಿಸಿದ್ದಾರೆ.

ಈ ವಿಷಯದ ಕುರಿತು ಆಕಾಶ್ ಪಾಟೀಲ್ (Akash Patil) ಎಂಬುವರು ಸಲ್ಲಿಸಿದ್ದ ಆರ್‌.ಟಿ.ಐ ಅರ್ಜಿಗೆ ಕೆ.ಎಸ್.ಆರ್.ಟಿ.ಸಿ ಈ ರೀತಿ ಉತ್ತರ ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದವರು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ವಿವಿಧ ಜಿಲ್ಲೆಗಳಿಂದ

ಈ ಕಾರ್ಯಕ್ರಮಕ್ಕೆ ಜನರನ್ನು ಕರೆ ತರಲು ಒಟ್ಟು ಎಷ್ಟು ಕೆ.ಎಸ್. ಆರ್. ಟಿ.ಸಿ ಬಳಸಲಾಗಿತ್ತು.

ಇದಕ್ಕೆ ಎಷ್ಟು ವೆಚ್ಚ ಮಾಡಲಾಗಿತ್ತು, ಎಂದು ಅರ್ಜಿಯಲ್ಲಿ ಮಾಹಿತಿಯನ್ನು ಕೇಳಿದ್ದಾರೆ.

ಇದನ್ನೂ ಓದಿ : https://vijayatimes.com/congress-candidates-list-released/

ಆದರೆ ಅಧಿಕಾರಿಗಳು ಕೇವಲ ಶಿವಮೊಗ್ಗ ಜಿಲ್ಲೆಯಿಂದ ಬಳಕೆಯಾದ ಬಸ್ ಹಾಗೂ ಅದಕ್ಕೆ ಪಾವತಿಸಿದ ಹಣದ ಮಾಹಿತಿಯನ್ನಷ್ಟು ಮಾತ್ರವೇ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಗಾನೆಯಲ್ಲಿ ರೂಪಾಯಿ 450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ

ನಿಲ್ದಾಣ ಸೇರಿದಂತೆ 3600 ಕೋಟಿಗಿಂತ ಇನ್ನೂ ಹೆಚ್ಚಿನ ಬಹು ವಿಧದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಾಗಿ ಆಗಮಿಸಿದ್ದರು.

Exit mobile version