Bengaluru : ಮಳೆಗಾಲದ ಆರಂಭದ ನಂತರ, ಬೆಂಗಳೂರಿನಲ್ಲಿ ಡೆಂಗ್ಯೂ (Increase in dengue cases) ಜ್ವರವು ಅತ್ಯಂತ ತೀವ್ರಗತಿಯಲ್ಲಿ ಹರಡುತ್ತಿದ್ದು, ಬಿಳಿ ರಕ್ತ ಕಣಗಳ
ಹುಡುಕಾಟದಲ್ಲಿ ರಕ್ತನಿಧಿ ಕೇಂದ್ರಗಳಿಗೆ ಜನ ಭೇಟಿ ಕೊಡುತ್ತಿದ್ದಾರೆ. ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳ ಪ್ರಮಾಣವು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ, ಇದರ ಪರಿಣಾಮವಾಗಿ
ಬಿಳಿ ರಕ್ತ ಕಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪರಿಣಾಮವಾಗಿ, ರಕ್ತನಿಧಿ ಕೇಂದ್ರಗಳ (Blood bank centre) ಮುಂದೆ ಜನರು ನಿತ್ಯವೂ ಸರದಿ ನಿಲ್ಲುವಂತಾಗಿದೆ.
ಹೆಚ್ಚು ಅಗತ್ಯವಿರುವ ಬಿಳಿ ರಕ್ತ ಕಣಗಳನ್ನು (White Blood cell) ಪಡೆಯಲು ಜನ ಪರದಾಡುತ್ತಿದ್ದಾರೆ . ದುರಾದೃಷ್ಟವಶಾತ್, ಈ ಕೇಂದ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ
ಬಿಳಿ ರಕ್ತ ಕಣಗಳ ಕೊರತೆಯಿಂದಾಗಿ, ರೋಗಿಗಳ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಹಾಗೂ ಇದೂ ಕಾರ್ಯಸಾಧ್ಯವಾಗದೇ ಇದ್ದಾಗ ಒಂದು ರಕ್ತನಿಧಿಯಿಂದ ಮತ್ತೊಂದು
ರಕ್ತನಿಧಿಗೆ ಅಲೆಯುವ ಪರಿಸ್ಥಿತಿ (Increase in dengue cases) ಎದುರಾಗಿದೆ.
ಬಿಳಿ ರಕ್ತಕಣಕ್ಕಾಗಿ ರೋಗಿಗಳ ಕುಟುಂಬದವರು ದಾನಿಗಳನ್ನು ಕರೆತಂದು ರಕ್ತ ನೀಡಿ, ಬಿಳಿ ರಕ್ತಕಣವನ್ನು ಹೇಗೋ ಪಡೆಯುತ್ತಿದ್ದಾರೆ. ಆದರೆ ಬೆಂಗಳೂರಿನ ಪರಿಚಯ ಇಲ್ಲದವರು ಪರದಾಡುವಂತಾಗಿದೆ.
ಈ ಸಂಕಟವು ಸ್ಥಳೀಯ ನಿವಾಸಿಗಳೊಂದಿಗೆ ಪರಿಚಯವಿಲ್ಲದವರನ್ನು ಕೂಡ ಸಂಕಷ್ಟದ ಸ್ಥಿತಿಯಲ್ಲಿರಿಸಿವೆ.
ಜುಲೈ 12, 2022 ರ ಹೊತ್ತಿಗೆ, ಬೆಂಗಳೂರಿನಲ್ಲಿ ಒಟ್ಟು 585 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ : ಮಕ್ಕಳಿಗೆ ಮತ್ತು ಗರ್ಭಿಣಿಯಾರಿಗೆ ಕೊಳೆತ ಮೊಟ್ಟೆ ವಿತರಣೆ : 4 ದಿನಗಳಲ್ಲಿ 2ನೇ ಪ್ರಕರಣ ಬಯಲು
ಆದರೆ, ಈ ವರ್ಷ ಇದೇ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ 905ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಪ್ರಕರಣಗಳು ದ್ವಿಗುಣಗೊಂಡಿದೆ.
ಜುಲೈ 1 ರ ಮೊದಲು, ಬೆಂಗಳೂರಿನಲ್ಲಿ ಈಗಾಗಲೇ 732 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ಜುಲೈ 16 ರ ಹೊತ್ತಿಗೆ, ದಾಖಲಾದ ಪ್ರಕರಣಗಳ ಸಂಖ್ಯೆ 1200 ಮೀರಿದೆ. ಪ್ರತಿದಿನವೂ
ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ನಿತ್ಯ ಡೆಂಘೀ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಬಿಳಿ ರಕ್ತ ಕಣಗಳ ಜೀವಿತಾವಧಿ 3 ರಿಂದ 6 ದಿನಗಳು:
ರಕ್ತವು ಕೆಂಪು ರಕ್ತ ಕಣಗಳು(Red blood cells), ಬಿಳಿ ರಕ್ತ ಕಣಗಳು ಮತ್ತು ದ್ರವ ರಕ್ತವನ್ನು (ಪ್ಲಾಸ್ಮಾ)(Plasma) ಹೊಂದಿರುತ್ತದೆ. ಅಪಘಾತದಂತಹ ಮತ್ತಿತರ ಸಂದರ್ಭದಲ್ಲಿ ರಕ್ತದ ಅವಶ್ಯಕತೆ
ಇದ್ದಾಗ ರೋಗಿಯ ರಕ್ತದ ಗುಂಪಿಗೆ ಹೋಲುವ ಒಟ್ಟಾರೆ ರಕ್ತ ನೀಡಲಾಗುತ್ತದೆ. ರಕ್ತದಾನ ಕೇಂದ್ರಗಳಿಂದ ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಪರೀಕ್ಷೆಯ ನಂತರ 30 ರಿಂದ 35 ದಿನಗಳವರೆಗೆ
ಪ್ಯಾಕ್ ಮಾಡಿ ಸಂಗ್ರಹಿಸಬಹುದು. ಆದರೆ, ಬಿಳಿ ಕಣಗಳನ್ನು ಬೇರ್ಪಡಿಸಿ ರಕ್ತವನ್ನು ಮೂರರಿಂದ ಆರು ದಿನಗಳವರೆಗೆ ಮಾತ್ರ ಇಡಲು ಸಾಧ್ಯವಿದೆ. ಇದಕ್ಕಿಂತ ಮುಂದೆ ಇಟ್ಟರೆ ಅದು ನಿಷ್ಪ್ರಯೋಜಕವಾಗುತ್ತದೆ.
ಹಾಗಾಗಿ ಬಿಳಿ ರಕ್ತ ಕಣಗಳ ಅಗತ್ಯವಿದ್ದಾಗ ದಾನಿಯಿಂದ ರಕ್ತವನ್ನು ಸಂಗ್ರಹಿಸಿ, ರಕ್ತ ಕಣಗಳನ್ನು ಬೇರ್ಪಡಿಸಿ ನೀಡಲಾಗುತ್ತದೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
ಡೆಂಘಿ ವೈರಾಣು 1 ರಿಂದ ರೋಗ ಬಂದರೆ ಸುಲ ಭವಾಗಿ ಗುಣವಾಗುತ್ತದೆ. ಡೆಂಗ್ಯೂ ಜ್ವರಕ್ಕೆ ಒಳಗಾದ ವ್ಯಕ್ತಿಗೆ ಮತ್ತೆ ಡೆಂಗ್ಯೂ ಟೈಪ್ 2 ವೈರಸ್(Dengue type 2 virus) ಸೋಂಕಿಗೆ ಒಳಗಾಗಿದ್ದರೆ,
ಪರಿಣಾಮಗಳು ತುಂಬಾ ಗಂಭೀರವಾಗಿರುತ್ತವೆ. ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ನೋಯುತ್ತಿರುವ ಗಂಟಲು, ವಾಂತಿ, ಹೊಟ್ಟೆ ನೋವು, ತೋಳು ಮತ್ತು ಕೈ ನೋವು ಮತ್ತು ಅತಿಸಾರದಂತಹ
ತೀವ್ರತರವಾದ ರೋಗಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ನಂತರ ಕರುಳಿನ ರಕ್ತಸ್ರಾವದೊಂದಿಗೆ ದೇಹದ ಮೇಲೆ ಕೆಂಪು ದದ್ದು ಬೆಳೆಯುತ್ತದೆ.
ಹರಡುವುದು ಹೇಗೆ?
- ಡೆಂಘೀ ರೋಗ ಹರಡಲು ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯೇ ಕಾರಣ.
- ಇವು ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ.
- ಡೆಂಘೀಯಿಂದ ಗರ್ಭಿಣಿಯರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, , ವೃದ್ಧರಿಗೆ ಅಪಾಯಕಾರಿ.
- ಸಾಮಾನ್ಯ ಜ್ವರ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಮೊದಲ ಹಂತದಲ್ಲಿಕಾಣಿಸಿಕೊಳ್ಳುತ್ತದೆ
- ಡೆಂಘೀಶಾಕ್ ಸಿಂಡೋಮ್ ಉಂಟಾಗಿ ಕರುಳಿನಲ್ಲಿ ರಕ್ತ ಸ್ರಾವ ಆದರೆ ಆ ಸಮಯದಲ್ಲಿ ರೋಗಿಗಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚು.
ರಶ್ಮಿತಾ ಅನೀಶ್