ಭಾರತದ ಕಾಫಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು

Kasaragodu: ಭಾರತದಲ್ಲಿ ಪ್ರಧಾನವಾಗಿ ರೋಬಸ್ಟ್‌ (Increased demand for Indian Coffee) ಮತ್ತುಅರೇಬಿಕಾ ಕಾಫಿ ತಳಿ ಬೆಳೆಯಲಾಗುತ್ತಿದೆ. ಇದರಲ್ಲಿಅರೇಬಿಕಾಕ್ಕೆ ಬೇಡಿಕೆ ಹೆಚ್ಚಿದ್ದರೂ

ಉತ್ಪಾದನೆ ಕಡಿಮೆ ಇದೆ. ಅರೇಬಿಕಾ (Arabic) ಕೊಯ್ಲು ನವೆಂಬರ್‌ನಿಂದ ಜನವರಿ ತನಕ ಹಾಗೂ ರೋಬಸ್ಟ್‌ ಕೊಯ್ಲು ಡಿಸೆಂಬರ್‌ನಿಂದ ಫೆಬ್ರವರಿ ತನಕ ನಡೆಸಲಾಗುತ್ತಿದೆ. ಭಾರತದಿಂದ ಜರ್ಮನಿ,

ಇಟಲಿ, ಬೆಲ್ಜಿಯಂ ಮತ್ತು ರಷ್ಯಾ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ (Increased demand for Indian Coffee) ಕಾಫಿ ರಫ್ತು ಮಾಡಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚುಇರುವುದರಿಂದ ಕಳೆದ ವರ್ಷ ಕೆಜಿಗೆ 130 ರೂ. ಇದ್ದ ರೋಬಸ್ಟ್‌ ಕಾಫಿ ಬೀಜದ ಬೆಲೆ ಪ್ರಸ್ತುತ 240 ರೂ.ಗೆ ತಲುಪಿದೆ ಇನ್ನು ಕೇರಳವು ಕಾಫಿ

ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾಫಿಗೆ (Coffee) ಬೇಡಿಕೆ ಹೆಚ್ಚುತ್ತಿದೆ. ಪ್ರಮುಖ ಉತ್ಪಾದಕ ದೇಶಗಳಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗಿರುವುದು ಬೇಡಿಕೆ ಹೆಚ್ಚಲು ಕಾರಣವಾಗಿದೆ.

ಮುಂದಿನ ತಿಂಗಳಲ್ಲಿ ಕಾಫಿ ಬೇಡಿಕೆ ಇನ್ನಷ್ಟು ಹೆಚ್ಚಲಿದೆ ಎಂದು ರಫ್ತುದಾರರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಕಾಫಿ ಸಂಗ್ರಹಕ್ಕೆ ವಿದೇಶಿ ವ್ಯಾಪಾರಿಗಳು ಭಾರತ ತಲುಪುತ್ತಿದ್ದಾರೆ.

ಹವಾಮಾನ ಬದಲಾವಣೆ ಇಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗಲು ಕಾರಣವಾಗಿದ್ದರಿಂದ, ಭಾರತದ ಮಾರುಕಟ್ಟೆಯಲ್ಲೂ ಉತ್ಪಾದನೆ ಕಡಿಮೆಯಾಗಿದೆ.

ಬೇಡಿಕೆ ಹೆಚ್ಚಿದರೆ ಕಾಫಿ ಬೆಲೆ ಇನ್ನೂಹೆಚ್ಚಾಗಲಿದೆ ಎಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ. ಕಳೆದ ವರ್ಷ ಒಂದು ಕೆಜಿಗೆ 130 ರೂ. ಇದ್ದ ರೋಬಸ್ಟ್‌ ಕಾಫಿ ಬೀಜದ ಬೆಲೆ ಪ್ರಸ್ತುತ 240 ರೂ.ಗೆ ತಲುಪಿದೆ.

ಅರೇಬಿಕಾ ಬೀಜಕ್ಕೆ ಕೆಜಿಗೆ 400 ರೂ. ಬೆಲೆ ಇದೆ.

ಕಾಫಿ ಬೆಳೆಯಲು ಕೇರಳ ಎರಡನೇ ಸ್ಥಾನ
ಭಾರತದಲ್ಲಿ ವಾರ್ಷಿಕ 3.6 ಲಕ್ಷ ಟನ್‌ ಕಾಫಿ ಉತ್ಪಾದಿಸುತ್ತಿದ್ದು. ಕೇರಳ (Kerala) ಕಾಫಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದುದ್ದರಿಂದ. ದೇಶದ ಒಟ್ಟು ಉತ್ಪಾದನೆಯ ಶೇ. 70 ರಷ್ಟು, ಸರಿ

ಸುಮಾರು 2.5 ಲಕ್ಷ ಟನ್‌ ಉತ್ಪಾದನೆಯೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ. 20 ರಷ್ಟು ಸರಿ ಸುಮಾರು 72,000 ಟನ್‌ ಕಾಫಿ ಕೇರಳದಲ್ಲಿ ಉತ್ಪಾದಿಸಲಾಗುತ್ತಿದೆ. ವಯನಾಡ್‌, ಇಡುಕ್ಕಿ, ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಫಿ

ಬೆಳೆಯಲಾಗುತ್ತಿದೆ.ಅಲ್ಲದೆ 18,500 ಟನ್‌ ಉತ್ಪಾದನೆಯೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲಿದೆ.

ಕಾಫಿಯನ್ನು ಪೇಯವಾಗಿಯೂ ಬಳಸುವುದರ ಜೊತೆಗೆ ಸೌಂದರ್ಯವರ್ಧಕ ಉತ್ಪನ್ನವಾಗಿಯೂ ಬಳಸುವುದರಿಂದ ಕಾಫಿಯ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ. ಭಾರತದಲ್ಲಿ ಕಾಫಿ ದೇಶೀಯ ಬಳಕೆ ಕಡಿಮೆ

ಇರುವ ಕಾರಣ ಶೇ. 80 ರಷ್ಟು ಕಾಫಿಯನ್ನು ರಫ್ತು ಮಾಡಲಾಗುತ್ತಿದೆ.

ಜಾರ್ಜ್ ಡೇನಿಯಲ್‌ (George Denial) , ಉಪ ನಿರ್ದೇಶಕ, ಕಾಫಿ ಮಂಡಳಿ ಸಂಶೋಧನಾ ವಿಭಾಗ ತಿಳಿಸಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಸುರಂಗಮಾರ್ಗ ನಿರ್ಮಿಸಲು ಮುಂದಾದ ಸರ್ಕಾರ ; ಖರ್ಚು ಕೇಳಿದ್ರೆ ಶಾಕ್ ಆಗ್ತಿರಾ..!

Exit mobile version