Bengaluru: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ (Traffic) ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು (new subway in Bangalore) ತೆಗೆದುಕೊಳ್ಳಲು ಮುಂದಾಗಿರುವ
ರಾಜ್ಯ ಸರ್ಕಾರ, ಇದೀಗ ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲು ಮುಂದಾಗಿದೆ. ಈ ಸುರಂಗ ರಸ್ತೆಗಳ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್)
ಸಿದ್ಧಪಡಿಸಿಕೊಡಲು ಹಲವು ಸಂಸ್ಥೆಗಳು (new subway in Bangalore) ಮುಂದೆ ಬಂದಿವೆ.
ಮೂಲಗಳ ಪ್ರಕಾರ, ಮೊದಲ ಹಂತದಲ್ಲಿ ಬೆಂಗಳೂರು ನಗರದ 12 ಅತಿ ದಟ್ಟಣೆ ಇರುವ ರಸ್ತೆಗಳಲ್ಲಿ 65 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲು ಚಿಂತಿಸಲಾಗಿದೆ. ದಿ ಅರ್ಬನ್ ಲ್ಯಾಬ್, ಸ್ಮೆಕ್ ಇಂಡಿಯಾ
ಪ್ರೈ.ಲಿ., ದಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈ.ಲಿ., ಐಬಿಐ ಗ್ರೂಪ್ ಇಂಡಿಯಾ ಪ್ರೈ.ಲಿ. ಆ್ಯಂಡ್ ಇನ್ಫ್ರಾ ಸಪೋರ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಪ್ರೈ.ಲಿ., ರೋಡಿಕ್ ಕನ್ಸಲ್ಟೆಂಟ್ಸ್ ಪ್ರೈ.ಲಿ.
ಸಂಸ್ಥೆಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿವೆ.
ಒಂದು ಕಿ.ಮೀ.ಗೆ 450 ಕೋಟಿ ರೂ.ಗಳು..! ಒಟ್ಟು ವೆಚ್ಚ 50 ಸಾವಿರ ಕೋಟಿ
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಂಗಮಾರ್ಗಕ್ಕೆ ತಗುಲುವ ವೆಚ್ಚ ಅಧಿಕವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. 1 ಕಿ.ಮೀ ಸುರಂಗಮಾರ್ಗ ನಿರ್ಮಾಣಕ್ಕೆ ಅಂದಾಜು 450 ಕೋಟಿ ರೂ.ಗಳನ್ನು
ವೆಚ್ಚ ಮಾಡಬೇಕಾಗುತ್ತದೆ. ಒಟ್ಟು ಎರಡು ಹಂತಗಳಲ್ಲಿ 100 ಕಿ.ಮೀ. ಸುರಂಗಮಾರ್ಗ ನಿರ್ಮಾಣಕ್ಕೆ 50000 ಕೋಟಿ ರೂ.ಗಳನ್ನು ಮೀಸಲಿಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಸುರಂಗ ರಸ್ತೆ
ನಿರ್ಮಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಆಸಕ್ತಿ ತೋರಿದ್ದಾರೆ.
ಸುರಂಗಮಾರ್ಗಕ್ಕೂ ಟೋಲ್ ವ್ಯವಸ್ಥೆ..!
ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ನಿರ್ಮಾಣ, ನಿರ್ವಹಣೆ, ವರ್ಗಾವಣೆ ಸೇರಿದಂತೆ ಹಲವು ಆಯ್ಕೆಗಳಿವೆ. ಬಿಒಟಿ- ಟೋಲ್ (BOT-Toll)
ಆಯ್ಕೆಯನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ. ಆಗ ಸುರಂಗಮಾರ್ಗ ಬಳಸುವ ನಾಗರಿಕರು ಶುಲ್ಕ ಪಾವತಿಸಬೇಕಾಗುತ್ತದೆ. ಖಾಸಗಿಯವರೇ ನಿರ್ಮಾಣ, ನಿರ್ವಹಣೆ ಮಾಡಿ ಶುಲ್ಕ ಸಂಗ್ರಹಿಸಲಿದ್ದಾರೆ.
ಇನ್ನು ಸುರಂಗ ಮಾರ್ಗವನ್ನು 6 ಪಥಗಳಲ್ಲಿ ನಿರ್ಮಿಸಲಿದ್ದು, ಸುರಕ್ಷತೆ ದೃಷ್ಟಿಯಿಂದ ಏಕಮುಖ ರಸ್ತೆಗಳನ್ನೇ ನಿರ್ಮಿಸಲು ಯೋಜಿಸಲಾಗಿದೆ. ರಾಜ್ಯದ ಲೋಕೋಪಯೋಗಿ ಇಲಾಖೆ ಕೂಡ ಸುರಂಗ ಮಾರ್ಗ
ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಯೋಜನೆಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ವರದಿ ನೀಡಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಸುರಂಗಮಾರ್ಗ ನಿರ್ಮಿಸಲು ಮುಂದಾದ ಸರ್ಕಾರ ; ಖರ್ಚು ಕೇಳಿದ್ರೆ ಶಾಕ್ ಆಗ್ತಿರಾ..!