ಬೀಫ್ ರಫ್ತಿನಲ್ಲಿ ಎರಡನೇ ಸ್ಥಾನ ಪಡೆದ ಭಾರತ!

New Delhi: ಭಾರತವು, 2023ರಲ್ಲಿ ಬೀಫ್ ರಫ್ತುದಾರರ (IND Ranked 2nd-Beef Exports) ಪೈಕಿ ಮತ್ತೊಂದು ಪ್ರಮುಖ ರಫ್ತು ದೇಶವಾಗಿ ಹೊರ

ಹೊಮ್ಮಿದ್ದು, ನೀರು ಕೋಣದ ಮಾಂಸವನ್ನು ರಫ್ತು ಮಾಡುತ್ತಿದೆ.ಜಗತ್ತಲ್ಲೇ ಭಾರತವು ದೊಡ್ಡ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ 2ನೇ ಸ್ಥಾನಕ್ಕೇರಿದೆ ಎಂದು

the wire ವರದಿಯಲ್ಲಿ (IND Ranked 2nd-Beef Exports) ಬಹಿರಂಗಪಡಿಸಿದೆ.

ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ (America And Australia) ದೇಶಗಳಿವೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. ಅತೀ

ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು, ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ

ಎಂದು ವರದಿಯಲ್ಲಿ ತಿಳಿಸಲಾಗಿದೆ. 2023ರ ಏಪ್ರಿಲ್ ವರೆಗೆ 14.75 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿದೆ.

ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ (Brazil) 2023ರ ಏಪ್ರಿಲ್ ವೇಳೆಗೆ 30ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು.

14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ.

2022ರಲ್ಲಿ ಭಾರತವು 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳು

ತಿಳಿಸಿವೆ.

ಬ್ರೆಝಿಲ್ ನ ಸೆರಾಡೊ ಪ್ರಸ್ಥಭೂಮಿಯಲ್ಲಿನ ಅಕ್ರಮ ಅರಣ್ಯ ನಾಶದೊಂದಿಗೆ ವಿಶ್ವದ ಮೂರು ಪ್ರಮುಖ ಬೀಫ್ ಉತ್ಪಾದನಾ ಸಂಸ್ಥೆಗಳು ಸಂಬಂಧ ಹೊಂದಿವೆ

ಎಂಬ ಸಂಗತಿಯನ್ನು ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟ್ನೆಸ್ ತನಿಖೆಯಲ್ಲಿ ಬಹಿರಂಗಪಡಿಸಿದೆ. ಈ ತನಿಖೆಯಲ್ಲಿ ಜೆಬಿಎಸ್, ಮಿನರ್ವ

ಹಾಗೂ ಮಾರ್ಫ್ರಿಗ್ ಸಂಸ್ಥೆಗಳು ಅಕ್ರಮ ಅರಣ್ಯ ನಾಶದಲ್ಲಿ ಭಾಗಿಯಾಗಿವೆ ಎಂದು ಹೇಳಲಾಗಿತ್ತು. ಆದರೆ, ಆ ಎಲ್ಲ ಸಂಸ್ಥೆಗಳೂ ಯಾವುದೇ ಅಕ್ರಮದ ಆರೋಪವನ್ನು

ಅಲ್ಲಗಳೆದಿದ್ದವು. ಸೆರಾಡೊದ ಸಣ್ಣ ಪ್ರಮಾಣದ ವಿಸ್ತರಣೆಯಾದ ಮ್ಯಾಟೊ ಗ್ರಾಸೊ ಸ್ಥಿತಿಯ ಬಗ್ಗೆ ಈ ತನಿಖೆಯು ಗಮನ ಹರಿಸಿತ್ತು.

ಈ ಮೂರು ಸಂಸ್ಥೆಗಳ ಒಡೆತನದ ಜಾನುವಾರುಗಳಿಗಾಗಿ ನಡೆದಿದ್ದ ಅರಣ್ಯನಾಶದ ಸಂದರ್ಭದಲ್ಲಿ ಮರಗಳನ್ನು ಕತ್ತರಿಸಲು ಯಾವುದೇ ಪರವಾನಗಿ ಇರಲಿಲ್ಲ

ಹಾಗೂ ಅದು ಅಕ್ರಮವಾಗಿತ್ತು ಎಂಬುದು ಈ ತನಿಖೆಯಲ್ಲಿ ಪತ್ತೆಯಾಗಿತ್ತು. ಯೂರೋಪ್ (Europe) ಒಕ್ಕೂಟ ಅರಣ್ಯ ನಾಶ ನಿಯಮಗಳ ಪ್ರಕಾರ, ಯೂರೋಪ್

ಒಕ್ಕೂಟಕ್ಕೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು 2020ರ ನಂತರ ಅರಣ್ಯ ನಾಶ ಮಾಡಿದ ಜಮೀನಿನಲ್ಲಿ ತಯಾರಿಸಿಲ್ಲ

ಎಂದು ಸಾಬೀತು ಪಡಿಸಬೇಕು ಇಲ್ಲವೇ ಭಾರಿ ದಂಡವನ್ನು ತೆರಬೇಕು.

ವಿಶ್ಲೇಷಕರ ಪ್ರಕಾರ, ಪಾಲನೆಯಾಗಬೇಕಾದ ಸೂಕ್ತ ದತ್ತಾಂಶಗಳನ್ನು ಒದಗಿಸಲು ವಿಫಲವಾಗುವ ಸಣ್ಣ ರೈತರಿಗೆ ಈ ಕಾನೂನು ದಂಡ ವಿಧಿಸುತ್ತದೆ. ಆ ಮೂಲಕ

ಅವರ ಪ್ರಮುಖ ಆದಾಯ ಮೂಲಕ್ಕೆ ಕತ್ತರಿ ಹಾಕುತ್ತದೆ. ಕಿರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಡಿಸೆಂಬರ್ (December) 30, 2024ರಿಂದ ಜೂನ್ 30, 2025

ರವರೆಗೆ ಯೂರೋಪ್ ಒಕ್ಕೂಟದಲ್ಲಿ ಜಾರಿಯಾಗಿರುವ ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳು ಕಾನೂನನ್ನು ಪಾಲಿಸುವಂತೆ ಬೀಫ್ ಉತ್ಪಾದನಾ

ಸಂಸ್ಥೆಗಳಿಗೆ ನೀಡಿರುವ ಗಡುವಿನ ಬೆನ್ನಿಗೇ ಈ ಸುದ್ದಿಯು ಬಂದಿದೆ. ಈ ಕಾನೂನಿನಿಂದ ತೊಂದರೆಗೀಡಾಗುವ ಕೆಲವು ಉತ್ಪನ್ನಗಳ ಪೈಕಿ ಬೀಫ್, ಕಾಫಿ, ಪಾಮೊಲಿನ್

ಎಣ್ಣೆ (Beef, coffee, palm oil) ಹಾಗೂ ಸೋಯಾ ಸೇರಿವೆ.

ಗ್ಲೋಬಲ್ ವಿಟ್ನೆಸ್ (Global Witness) ಅಭಿಯಾನಗಾರರು ಈ ಕಾನೂನಿನಲ್ಲಿರುವ ಮತ್ತೊಂದು ಸಮಸ್ಯೆಯನ್ನು ಮುಂದು ಮಾಡಿದ್ದು, ಈ ಕ್ರಮಗಳು ಅಮೆಝಾನ್

ಕಾಡುಗಳಂತೆ ಸೆರಾಡೊ ಪ್ರಸ್ಥ ಭೂಮಿಯ ಕಾಡುಗಳಿಗೆ ವಿಧಿಸಲಾಗಿರುವಷ್ಟು ಕಠಿಣವಾಗಿಲ್ಲ ಎಂದು ಅಪಸ್ವರವೆತ್ತಿದ್ದಾರೆ. ಅಮೆರಿಕಾ ಕೃಷಿ ಇಲಾಖೆಯ ಪ್ರಕಾರ,

2023ರಲ್ಲಿ ಬ್ರೆಝಿಲ್ ಅತಿ ದೊಡ್ಡ ಬೀಫ್ ರಫ್ತುದಾರನಾಗಿರುವುದನ್ನು ಪಟ್ಟಿಯು ತೋರಿಸುತ್ತಿದೆ. ಮುನ್ನೋಟಗಳ ಪ್ರಕಾರ, ಆ ವರ್ಷದಲ್ಲಿ ಬ್ರೆಝಿಲ್ ದೇಶವು 3

ದಶಲಕ್ಷ ಟನ್ ಗಿಂತ ಹೆಚ್ಚು ಬೀಫನ್ನು ರಫ್ತು ಮಾಡಿದೆ.

ಇದನ್ನು ಓದಿ: ಬೆಂಗಳೂರಲ್ಲಿ ಹಲವೆಡೆ ಆರ್‌ಟಿಒ ಕಾರ್ಯಾಚರಣೆ: ನೊಂದಣಿ ಮಾಡದ 163 ಖಾಸಗಿ ನೀರಿನ ಟ್ಯಾಂಕರ್‌ ಸೀಜ್!

Exit mobile version