IND Vs PAK: ಕೊಹ್ಲಿ ಹಾಗೂ ರಾಹುಲ್‌ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ

ಶ್ರೀಲಂಕಾದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಷ್ಯಾ ಕಪ್ (IND Vs PAK match highlights)

ಸೂಪರ್- 4 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (K.L.Rahul) ಆಕರ್ಷಕ ಶತಕದ ಸಹಾಯದೊಂದಿಗೆ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ಬೃಹತ್

ಮೊತ್ತ ದಾಖಲಿಸಿತು. ಅಲ್ಲದೆ 233 ರನ್ ಗಳಿಸಿದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್ ಅವರು ಗರಿಷ್ಠ ಮೊತ್ತದ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಬರೆದಿದ್ದಾರೆ.


ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಕೊಹ್ಲಿ-ರಾಹುಲ್‌ 233 ರನ್‌ ಜೊತೆ ಆಟವಾಡಿದ್ದು ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ (Virat Kohil) ಇಬ್ಬರೂ ಪಾಕ್‌ ಎದುರು

ಆಕರ್ಷಕ ಶತಕಗಳನ್ನು ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ಮೊತ್ತದ ಜೊತೆಯಾಟವಾಡಿದ ಕೊಹ್ಲಿ-ರಾಹುಲ್‌, ಕೊಲಂಬೊ (ಶ್ರೀಲಂಕಾ) ಸಾಂಪ್ರದಾಯಿಕ ಎದುರಾಳಿ

ಪಾಕಿಸ್ತಾನ (Pakstian) ವಿರುದ್ದ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಕನ್ನಡಿಗರು ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ. ಆ ಮೂಲಕ ಪಾಕ್

ವಿರುದ್ಧ ಏಕದಿನ ಏಷ್ಯಾ ಕಪ್ ಟೂರ್ನಿಯಲ್ಲಿ ಅತ್ಯಧಿಕ ಆಟವಾಡಿದ ಜೋಡಿ ಎಂಬ ನೂತನ ದಾಖಲೆಯನ್ನು ಕೊಹ್ಲಿ ಹಾಗೂ ರಾಹುಲ್ ಕರೆಸಿಕೊಂಡಿದ್ದಾರೆ.


ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೀಸಲು ದಿನವಾದ ಸೋಮವಾರ ಎರಡು ವಿಕೆಟ್‌ ನಷ್ಟಕ್ಕೆ 147 ರನ್‌ಗಳಿಂದ ಬ್ಯಾಟಿಂಗ್‌ (Batting) ಮುಂದುವರಿಸಿದ ಭಾರತ ತಂಡ ನಿಗದಿತ 50

ಓವರ್‌ಗಳ ಮುಕ್ತಾಯಕ್ಕೆ 356 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 357 ರನ್‌ಗಳ ಕಠಿಣ ಗುರಿಯನ್ನು ಭಾರತ ಕ್ರಿಕೆಟ್ ತಂಡ ನೀಡಿತು.


ಸೋಮವಾರ ಭಾರತ ತಂಡದಪರ ವಿರಾಟ್‌ ಕೊಹ್ಲಿ 94 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ ನಂತರ 122 ರನ್‌ಗಳನ್ನು ಸಿಡಿಸಿದ್ದು, ಆ ಮೂಲಕ ವೃತ್ತಿ ಜೀವನದ 47ನೇ

ಒಡಿಐ ಶತಕ ಸಿಡಿಸಿದರು. ಹಾಗೂ ಕೊಹ್ಲಿಗೆ ಕೊನೆಯವರೆಗೂ ಸಾಥ್‌ ನೀಡಲು ಕನ್ನಡಿಗ ಕೆ.ಎಲ್‌ ರಾಹುಲ್‌ 106 ಎಸೆತಗಳಲ್ಲಿ ಎರಡು ಸಿಕ್ಸರ್‌ (Sixer) ಹಾಗೂ 12 ಬೌಂಡರಿಗಳೊಂದಿಗೆ ಅಜೇಯ

111 ರನ್‌ಗಳನ್ನು ಸಿಡಿಸಿದರು.

ಕೊಹ್ಲಿ-ರಾಹುಲ್‌ ಜೋಡಿಯಿಂದ ದಾಖಲೆಯ ಜೊತೆಯಾಟ
ಪಾಕಿಸ್ತಾನ ತಂಡದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌ ರಾಹುಲ್‌ ಮೂರನೇ ವಿಕೆಟ್‌ಗೆ (Wicket) 233 ರನ್‌ಗಳನ್ನು ಗಳಿಸಿದರು ಅಲ್ಲದೆ

ಪಾಕಿಸ್ತಾನ್ ವಿರುದ್ಧ ಮೂಡಿಬಂದ (ಯಾವುದೇ ವಿಕೆಟ್‌) ಅತ್ಯಂತ ಗರಿಷ್ಠ ಆಟ ಇದಾಗಿತ್ತು. 1996ರಲ್ಲಿ ಸಚಿನ್‌ ತೆಂಡೂಲ್ಕರ್‌ ಹಗೂ ನವಜೋತ್‌ ಸಿಂಗ್‌ ಸಿಧು (231*) ಆಟವನ್ನು ಕೊಹ್ಲಿ-ರಾಹುಲ್‌

ಜೋಡಿ (IND Vs PAK match highlights) ಮುರಿಯಿತು.

ಪಾಕಿಸ್ತಾನ ವಿರುದ್ಧ ಭಾರತ ತಂಡದಿಂದ ಮೂಡಿಬಂದ ಗರಿಷ್ಠ ಮೊತ್ತದ ದಾಖಲೆಗಳು
231 ರನ್: ಎರಡನೇ ವಿಕೆಟ್‌ಗೆ ನವಜೋತ್ ಸಿಂಗ್ ಸಿಧು- ಸಚಿನ್ ತೆಂಡೂಲ್ಕರ್ (ಶಾರ್ಜಾ 1996)
201 ರನ್: ಮೂರನೇ ವಿಕೆಟ್‌ಗೆ ರಾಹುಲ್ ದ್ರಾವಿಡ್- ವೀರೇಂದ್ರ ಸೆಹ್ವಾಗ್ ( ಕೊಚ್ಚಿ- 2005)
210 ರನ್: ಮೊದಲನೇ ವಿಕೆಟ್‌ಗೆ ಶಿಖರ್ ಧವನ್- ರೋಹಿತ್ ಶರ್ಮಾ (ದುಬೈ- 2018)
233 *ರನ್: ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ- ಕೆ.ಎಲ್.ರಾಹುಲ್ (ಪ್ರೇಮದಾಸ ಸ್ಟೇಡಿಯಂ)

ಏಷ್ಯಾ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಜೊತೆಯಾಟ
223 ರನ್- ಶೋಯಿಬ್ ಮಲಿಕ್- ಯೂನಿಸ್ ಖಾನ್ (ಹಾಂಕಾಂಗ್ ವಿರುದ್ಧ- 2004)
224ರನ್- ಮೊಹಮ್ಮದ್ ಹಫೀಜ್- ಎನ್. ಜೆಮ್ ಶೆಡ್ (ಭಾರತ ವಿರುದ್ಧ- 2012)
233* ರನ್- ವಿರಾಟ್ ಕೊಹ್ಲಿ- ಕೆ.ಎಲ್.ರಾಹುಲ್ (ಪಾಕಿಸ್ತಾನ ವಿರುದ್ಧ- 2023)
214 ರನ್- ಬಾಬರ್ ಆಝಮ್- ಇಫ್ತಿಕರ್ ಅಹಮದ್ (ನೇಪಾಳ ವಿರುದ್ಧ- 2023)

ಇದನ್ನು ಓದಿ: ಬೆಂಗಳೂರು ಬಂದ್: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಹೆಚ್ಚುವರಿ ಬಿಎಂಟಿಸಿ ಕಾರ್ಯಾಚರಣೆ

Exit mobile version