ಅಜಿತ್ ದೋವಲ್ – ವಾಂಗ್ ಯಿ ಮಾತುಕತೆ ; ಸೇನೆ ಹಿಂದಕ್ಕೆ ಪಡೆಯಲು ಚೀನಾ ಒಪ್ಪಿಗೆ!

india- china

ಭಾರತದ(India) ಪ್ರವಾಸದಲ್ಲಿರುವ(Tour) ಚೀನಾದ(China) ವಿದೇಶಾಂಗ ಸಚಿವ ವಾಂಗ್ ಯಿ, ನಿನ್ನೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajith Dowal) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಚೀನಾ-ಭಾರತದ(China-India) ನಡುವೆ ನೆಲೆಗೊಂಡಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಇಬ್ಬರು ನಾಯಕರು ಚರ್ಚೆ ನಡೆಸಿದರು.

ನಿನ್ನೆ ಭಾರತಕ್ಕೆ ಆಗಮಿಸಿದ ಚೀನಾ ವಿದೇಶಾಂಗ ಸಚಿವರ ನೇತೃತ್ವದ ಅಧಿಕಾರಿಗಳ ತಂಡ ಮೊದಲು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿತು. ನಂತರ ಸರಣಿ ಸಭೆಗಳನ್ನು ಅಜಿತ್ ದೋವಲ್ ಅವರೊಂದಿಗೆ ನಡೆಸಿತು. ಈ ಸಭೆಯಲ್ಲಿ ಭಾರತ ಮತ್ತು ಚೀನಾ ಇಕ್ಕಟ್ಟನ್ನು ಬಿಟ್ಟು ಶಾಂತಿ-ಸಂಧಾನಕ್ಕೆ ಬದ್ದರಾಗಿರುವ ನಿಟ್ಟಿನಲ್ಲಿ ಮಹತ್ವ ಘೋಷಣೆ ಮಾಡಲಾಯಿತು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಗಡಿಯಲ್ಲಿರುವ ಚೀನಾದ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದು ಅಜಿತ್ ದೋವಲ್‍ರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು 2021ರ ಜೂನ್ 14ರ ರಾತ್ರಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ಭಾರತದ 20 ಸೈನಿಕರು ಮತ್ತು ಚೀನಾದ 45 ಸೈನಿಕರು ಹತರಾಗಿದ್ದರು. ಈ ಘಟನೆಯಿಂದ ಎರಡು ರಾಷ್ಟ್ರಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭಾರತದ ಮೇಲೆ ಆಕ್ರಮಣ ಮಾಡುವ ನಿಟ್ಟಿನಲ್ಲಿ ಸೇನೆ ಜಮಾವಣೆ ಮಾಡಲು ಚೀನಾ ಮುಂದಾಗಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಸುಮಾರು 50 ಸಾವಿರ ಸೈನಿಕರನ್ನು ಗಲ್ವಾನ್ ಕಣಿವೆಗೆ ಕಳುಹಿಸಿತ್ತು. ಎರಡು ದೇಶಗಳು ಶಶ್ಸ್ತ್ರ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದವು.

ಆದರೆ ಚೀನಾ ಭಾರತದ ಮೇಲೆ ದಾಳಿ ಮಾಡುವ ಸಾಹಸಕ್ಕೆ ಕೈಹಾಕಲಿಲ್ಲ. ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ ಎಂದು ಸೇನಾಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಯಿತು. ಆದರು ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿರಲಿಲ್ಲ. ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇದೆ. ಹೀಗಾಗಿ ಸದ್ಯ ಭಾರತಕ್ಕೆ ಭೇಟಿ ನೀಡಿರುವ ಚೀನಾ ವಿದೇಶಾಂಗ ಸಚಿವರ ಈ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಘೋಷಣೆಯೊಂದಿಗೆ ಸಂಧಾನಕ್ಕೆ ಮುಂದಾಗಿದೆ.

Exit mobile version