ತವಾಂಗ್ ಸೆಕ್ಟರ್‌ನಲ್ಲಿ ಹೆಚ್ಚಿದ ಭಾರತ-ಚೀನಾ ಪಡೆಗಳ ಘರ್ಷಣೆ : ಭಾರತೀಯ ಪೋಸ್ಟ್‌ ವಶಕ್ಕೆ ಪಡೆಯುವ ಚೀನಾ ಯತ್ನ ವಿಫಲ

Arunachal Pradesh : ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಸುಮಾರು 300 ಚೀನೀ ಸೈನಿಕರು (India-China Troops Clash) ದಾಳಿಯಲ್ಲಿ ಪಾಲ್ಗೊಂಡಿದ್ದು, ಭಾರತೀಯ ಪೋಸ್ಟ್‌ ಅನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದಾರೆ.

ಆದರೆ ಚೀನಿ ಪಡೆಗಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಪಡೆಗಳು, ತೀವ್ರ ಪ್ರತಿರೋಧ ಒಡ್ಡುವ ಮೂಲಕ ಪೋಸ್ಟ್‌ ಮೇಲೆ ಹಿಡಿತ ಬಿಗಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

ತವಾಂಗ್ ಸೆಕ್ಟರ್‌ನಲ್ಲಿ ನಡೆದ ಘರ್ಷಣೆಯಲ್ಲಿ ಎರಡೂ ಕಡೆ ಸುಮಾರು 50ಕ್ಕೂ ಹೆಚ್ಚು ಯೋಧರಿಗೆ ಗಾಯಗಳಾಗಿವೆ.

ಆದರೆ ಯಾವುದೇ ಸಾವು ಸಂಭವಿಸಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಚೀನಾದ ಕಡೆಯಿಂದ ಗಾಯಗೊಂಡ ಸೈನಿಕರ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.

300ಕ್ಕೂ ಹೆಚ್ಚು ಚೀನೀ ಸೈನಿಕರು 17,000 ಅಡಿ ಎತ್ತರದ ಶಿಖರವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಭಾರತೀಯ ಸೇನಾ ಯೋಧರು ಅದನ್ನು ವಿಫಲಗೊಳಿಸಿದರು.

ಇದನ್ನೂ ನೋಡಿ : https://fb.watch/hoaBzjyjrr/ ಭಯಾನಕ ಛಾಪಾ ಹಗರಣ ಬಯಲು !

ಚೀನಾ ಸೈನಿಕರು(Chinese soldiers) ಭಾರತೀಯ ಪೋಸ್ಟ್ ಅನ್ನು ಬೇರುಸಹಿತ ಕಿತ್ತುಹಾಕಲು ಬಯಸಿದ್ದರು, ಆದರೆ ಭಾರತೀಯ ಪಡೆಗಳಿಂದ ಚೀನಾದ ಪ್ರಯತ್ನವನ್ನು ಯಶಸ್ವಿಯಾಗಿ ತಡೆಯಲಾಯಿತು ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಇನ್ನು ಈ ಪ್ರದೇಶದಲ್ಲಿ ಈಗ ಹಿಮಪಾತವಾಗಿದ್ದು, ಎರಡೂ ಪಡೆಗಳು ತಕ್ಷಣವೇ ಆ ಪ್ರದೇಶದಿಂದ ನಿರ್ಗಮಿಸಿದರು ಎನ್ನಲಾಗಿದೆ.

ಈ ನಡುವೆ ಗಡಿಯಲ್ಲಿ ನಡೆದ ಘರ್ಷಣೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್(Congress) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಕೇಂದ್ರ ಸರ್ಕಾರ(Central Govt) ಚೀನಾಗೆ ಕಠಿಣ ಶಬ್ದಗಳಲ್ಲಿ ಉತ್ತರ ನೀಡಬೇಕು.

ಸರ್ಕಾರ ದಿಟ್ಟ ನಿಲುವು ತಾಳಬೇಕು. ಈ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಕಟುವಾದ ಧ್ವನಿಯಲ್ಲಿ ಚೀನಾಕ್ಕೆ ವಿವರಿಸುವ ಸಮಯ ಬಂದಿದೆ.”

ಎಂದು ಕಾಂಗ್ರೆಸ್‌ನ ತನ್ನ ಅಧಿಕೃತ ಟ್ವಿಟರ್(twitter) ಖಾತೆಯಲ್ಲಿ ಹೇಳಿದೆ.ಇನ್ನು ಚೀನಾ-ಭಾರತೀಯ ಪಡೆಗಳ ಮುಖಾಮುಖಿಯಲ್ಲಿ ಎರಡು ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘರ್ಷಣೆಯಲ್ಲಿ ಕನಿಷ್ಠ ಆರು ಭಾರತೀಯ ಯೋಧರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಗುವಾಹಟಿಗೆ ಕರೆತರಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಗಡಿಯಲ್ಲಿ ಘರ್ಷಣೆ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ(Narendra modi) ನೇತೃತ್ವದಲ್ಲಿ, ರಕ್ಷಣಾ ಸಚಿವ ರಾಜನಾಥ್‌ಸಿಂಗ್‌, ಗೃಹ ಸಚಿವ ಅಮಿತ್‌ಶಾ(Amit shah),

ಇದನ್ನೂ ಓದಿ : https://vijayatimes.com/indian-box-office-movies-2022/

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ದೋವಲ್‌ಮತ್ತು ಸೇನೆಯ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

Exit mobile version