ಇಂಗ್ಲೆಂಡನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಅರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

Indian Rupee

Washington : ಇಂಗ್ಲೆಂಡ್‌(England) ಅನ್ನು  ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಅರ್ಥಿಕತೆಯಾಗಿ(Financial) ಭಾರತ(India) ಹೊರಹೊಮ್ಮಿದೆ. ಈ ಮೂಲಕ ಭಾರತ ತನ್ನ ಆರ್ಥಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ತನ್ನ ಆರ್ಥಿಕ ಶಕ್ತಿಯನ್ನು ವೃದ್ದಿಸಿಕೊಳ್ಳುತ್ತಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ(International Finance Fund)  ಪ್ರಕಟ ಮಾಡಿರುವ ಮಾಹಿತಿಯ ಪ್ರಕಾರ, 2021ರ ಹಣಕಾಸು ವರ್ಷದ ಜಿಡಿಪಿ(GDP) ಬೆಳವಣಿಗೆಯಿಂದಾಗಿ ಭಾರತ ಇಂಗ್ಲೆಂಡ್‌ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ರಾಷ್ಟ್ರವಾಗಿ  ಹೊರಹೊಮ್ಮಿದೆ ಎಂದು ಹೇಳಿದೆ. 

ಕೋವಿಡ್‌ ನಂತರ ಇಂಗ್ಲೆಂಡ್‌ ಅನೇಕ ಆರ್ಥಿಕ ಸಮಸ್ಯೆಗಳ ಸುಳಿಗೆ ಸಿಲುಕಿದ ಪರಿಣಾಮ ಆರ್ಥಿಕತೆ ಕುಸಿತ ಕಂಡಿದೆ. ಇದೇ ವೇಳೆ ಭಾರತ ತನ್ನ ಜಿಡಿಪಿ ಅನ್ನು ವೃದ್ದಿಸಿಕೊಂಡಿದೆ. ಪ್ರಸ್ತುತ ಭಾರತದ ಜಿಡಿಪಿ ಬೆಳವಣಿಗೆ ದರ 13.6 ಎಂದು ಕೇಂದ್ರೀಯ ಅಂಕಿ ಅಂಶ ಸಂಸ್ಥೆ ವರದಿ ನೀಡಿದೆ.

ಇನ್ನು  ಭಾರತದ ರೂಪಾಯಿ(Indian Rupee) ಮೌಲ್ಯದ ಮುಂದೆ ಯುಕೆಯ ಪೌಂಡ್‌ ಮೌಲ್ಯ ಈ ವರ್ಷ ಶೇಕಡಾ 8 ರಷ್ಟು ಕುಸಿತ ಕಂಡಿದೆ. ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಸ್ಥಿರತೆ ಕಂಡುಕೊಂಡಿದೆ.  2010 ರಲ್ಲಿ ವಿಶ್ವದ ದೊಡ್ಡ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ 5ನೇ ಸ್ಥಾನದಲ್ಲಿತ್ತು.

ಆದರೆ ಇತ್ತೀಚಿನ ದಶಕಗಳಲ್ಲಿ ಭಾರತದ ಆರ್ಥಿಕ  ಬೆಳವಣಿಗೆ ಗಣನೀಯ ಪ್ರಗತಿ ಸಾಧಿಸಿದೆ. ಸದ್ಯ ವಿಶ್ವ ಅತಿದೊಡ್ಡ ಆರ್ಥಿಕತೆ ಹೊಂದಿರುವ 15 ದೇಶಗಳ ಪಟ್ಟಿ ಇಲ್ಲಿದೆ ನೋಡಿ.  

  1. ಯುನೈಟೆಡ್ ಸ್ಟೇಟ್ಸ್: $20.89 ಟ್ರಿಲಿಯನ್
  2. ಚೀನಾ: $14.72 ಟ್ರಿಲಿಯನ್
  3. ಜಪಾನ್: $5.06 ಟ್ರಿಲಿಯನ್
  4. ಜರ್ಮನಿ: $3.85 ಟ್ರಿಲಿಯನ್
  5. ಭಾರತ: $2.67 ಟ್ರಿಲಿಯನ್
  6. ಯುನೈಟೆಡ್ ಕಿಂಗ್‌ಡಮ್: $2.66 ಟ್ರಿಲಿಯನ್
  7. ಫ್ರಾನ್ಸ್: $2.63 ಟ್ರಿಲಿಯನ್
  8. ಇಟಲಿ: $1.89 ಟ್ರಿಲಿಯನ್
  9. ಕೆನಡಾ: $1.64 ಟ್ರಿಲಿಯನ್
  10. ದಕ್ಷಿಣ ಕೊರಿಯಾ: $1.63 ಟ್ರಿಲಿಯನ್
  11. ರಷ್ಯಾ: $1.48 ಟ್ರಿಲಿಯನ್
  12. ಬ್ರೆಜಿಲ್: $1.44 ಟ್ರಿಲಿಯನ್
  13. ಆಸ್ಟ್ರೇಲಿಯಾ: $1.32 ಟ್ರಿಲಿಯನ್
  14. ಸ್ಪೇನ್: $1.28 ಟ್ರಿಲಿಯನ್
  15. ಇಂಡೋನೇಷ್ಯಾ: $1.05 ಟ್ರಿಲಿಯನ್
Exit mobile version