ಭಾರತದ ಮೊದಲ ದೇಶಿ ನ್ಯಾವಿಗೇಷನ್‌ “ನಾವಿಕ್” ಕುರಿತ ವಿಶೇಷ ಸಂಗತಿಗಳು ಇಲ್ಲಿವೆ ನೋಡಿ

India

Bengaluru : ಕಳೆದ ಅನೇಕ ದಶಕಗಳ ಪರಿಶ್ರಮದಿಂದ ಅಂತಿಮವಾಗಿ ಭಾರತ (India) ತನ್ನದೇ ಆದ ನ್ಯಾವಿಗೇಷನ್‌ ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಿದ್ದು,

(India First Own GPS NavIC) ಈ ಮೂಲಕ ನ್ಯಾವಿಗೇಷನ್‌ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಮುಂದಿನ ವರ್ಷದಿಂದ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲ ಮೊಬೈಲ್‌ಗಳಲ್ಲಿಯೂ ಜಿಪಿಎಸ್‌ (GPS) ಬದಲಾಗಿ ನಾವಿಕ್‌ ಇರಲಿದೆ.

NAVIC

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿ ಪಡಿಸಿರುವ, ನ್ಯಾವಿಗೇಷನ್ “ನಾವಿಕ್” (Navik) ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯಾಗಿದೆ.

ಈ ನಾವಿಕ್‌ನ ವಿಶೇಷತೆಗಳೆಂದರೆ, (India First Own GPS NavIC) ನಾವಿಕ್ ಎಂಟು ಉಪಗ್ರಹಗಳನ್ನು ಹೊಂದಿರುವ ನ್ಯಾವಿಗೇಷನ್‌ ವ್ಯವಸ್ಥೆಯಾಗಿದ್ದು, ಭಾರತದ ನೆಲದ ವ್ಯಾಪ್ತಿಯನ್ನು ಮತ್ತು ಗಡಿಯಾಚೆಗಿನ 1,500 ಕಿಲೋಮೀಟರ್ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತದೆ.

ನಾವಿಕ್ ವ್ಯವಸ್ಥೆಯು ಭಾರತ ಹಾಗೂ ಸುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿದೆ. ಇದನ್ನು ನೈಸರ್ಗಿಕ ವಿಕೋಪಗಳ ಕುರಿತಾದ ಮಾಹಿತಿ ಕಲೆ ಹಾಕಲು ಬಳಸಬಹುದು.

https://youtu.be/3RqdCsy7XP8

ನಾವಿಕ್ ಒಂದು ಸಂಪೂರ್ಣ ದೇಶೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಸಂಪೂರ್ಣವಾಗಿ ಭಾರತದ ನಿಯಂತ್ರಣದಲ್ಲಿ ಇರಲಿದೆ.

ಇದನ್ನೂ ಓದಿ : https://vijayatimes.com/history-of-angkor-wat-temple/

ತನ್ನದೇ ಸ್ವಂತ ನ್ಯಾವಿಗೇಷನ್‌ ವ್ಯವಸ್ಥೆಗೆ ಭಾರತ ವಿನಿಯೋಗಿಸಿರುವುದು 174 ಮಿಲಿಯನ್‌ ಡಾಲರ್. ಮೊಬೈಲ್ ಸಂಪರ್ಕ ಸಿಗದ ಆಳ ಸಮುದ್ರಗಳಿಗೆ ತೆರಳುವ ಮೀನುಗಾರರಿಗೆ ಎಚ್ಚರಿಕೆಯ ಸಂದೇಶದ ಮುನ್ಸೂಚನೆ ಕಳುಹಿಸಲು ಬಳಸಿಕೊಳ್ಳಬಹುದು.

ನಾವಿಕ್ ವ್ಯವಸ್ಥೆಯು ವಿದೇಶೀ ಉಪಗ್ರಹಗಳ ಮೇಲಿನ ಭಾರತದ ಅವಲಂಬನೆಯನ್ನು ತೊಡೆದು ಹಾಕಲು ನೆರವಾಗಲಿದೆ.

NAVIC

ಭಾರತ ದೇಶೀಯ ಉದ್ದಿಮೆಗಳು ನಾವಿಕ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸಿ, ಆ ಮೂಲಕ ಅದನ್ನು ಇನ್ನಷ್ಟು ಅಭಿವೃದ್ಧಿ ಹೊಂದಲು ನೆರವಾಗಬೇಕೆಂದು ಬಯಸುತ್ತದೆ. ಭಾರತದ ಸ್ಯಾಟಲೈಟ್ ನ್ಯಾವಿಗೇಷನ್ ಡ್ರಾಫ್ಟ್ ನೀತಿಯ ಪ್ರಕಾರ,

ಇದನ್ನೂ ಓದಿ : https://vijayatimes.com/human-rights-situation-in-xinjiang-region/

ಭಾರತ ಸರ್ಕಾರ ತನ್ನ ನ್ಯಾವಿಗೇಷನ್ ವ್ಯವಸ್ಥೆಯ ವ್ಯಾಪ್ತಿಯನ್ನು ಪ್ರಾಂತೀಯ ವ್ಯವಸ್ಥೆಯಿಂದ ಜಾಗತಿಕ ವ್ಯಾಪ್ತಿ ಹೊಂದಿರುವ ವ್ಯವಸ್ಥೆಯನ್ನಾಗಿಸಲು ಪ್ರಯತ್ನ ಪಡುವುದಾಗಿ ಹೇಳಿದೆ. ಭಾರತಕ್ಕೆ ತನ್ನದೇ ಆದ ನ್ಯಾವಿಗೇಷನ್ ವ್ಯವಸ್ಥೆ ಇರುವುದು ಯಾವತ್ತಿಗೂ ಸುರಕ್ಷಿತ.
Exit mobile version