ನಿರೀಕ್ಷೆಗೂ ಮೀರಿ ಭಾರತದ GDP ಬೆಳವಣಿಗೆ: ಮೊದಲ ಸ್ಥಾನದಲ್ಲಿ ಭಾರತ – ಯಾವ ದೇಶದ್ದು ಎಷ್ಟು?

New Delhi: ಭಾರತದ ಜಿಡಿಪಿ (GDP) ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ವೃದ್ದಿಯಾಗಿದ್ದು, ಹಲವು ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಈ ಹಿಂದೆ ಅನೇಕ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭಾರತ 6.8ರಷ್ಟು ಜಿಡಿಪಿ ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿದ್ದವು. ಅದೇ ರೀತಿ ಆರ್ಬಿಐ 6.5ರಷ್ಟು ಭಾರತದ ಜಿಡಿಪಿ ಬೆಳವಣಿಗೆ ಹೊಂದಬಹುದು ಎಂದು ಅಂದಾಜಿಸಿತ್ತು. ಆದರೆ ಇದೀಗ ಭಾರತ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.

ಜುಲೈ (July)– ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ 7.6ರಷ್ಟು ಬೆಳವಣಿಗೆ ಸಾಧಿಸುವ ಮೂಲಕ, ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲೇ ಭಾರತ ಮುಂದುವರಿದಿದೆ. ಉತ್ಪದನಾ ವಲಯ (13.9%), ನಿರ್ಮಾಣ(13.3%), ಗಣಿಗಾರಿಕೆ(10.0%) ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆಯಿಂದ ಭಾರತದ ಜಿಡಿಪಿ ದರ ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ.

ಆದರೆ ಕೃಷಿ (1.2%), ಹೋಟೆಲ್ (Hotel), ಸಾರಿಗೆ (4.3%) ರಿಯಲ್ ಎಸ್ಟೇಟ್(6.0%) ಕ್ಷೇತ್ರಗಳ ಬೆಳವಣಿಗೆ ದರ ಕಡಿಮೆಯಾಗಿದೆ. ಹಣದುಬ್ಬರ ಹಾಗೂ ಜಾಗತಿಕ ಆರ್ಥಿಕ ಸಮಸ್ಯೆಗಳ ನಡುವೆಯೂ ಭಾರತದ ಆರ್ಥಿಕತೆ ಸತತ ಎರಡು ತ್ರೈಮಾಸಿಗಳಲ್ಲಿ ಶೇಕಡಾ 7ರಷ್ಟು ಅಧಿಕ ಪ್ರಗತಿ ಸಾಧಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆ ತನ್ನ ಲಯಕ್ಕೆ ಮರಳಿದೆ. ಈ ನಡುವೆ ಕೈಗಾರಿಕೆ ಮತ್ತು ಸೇವಾ ವಲಯಗಳು ತಮ್ಮ ವೇಗವನ್ನು ಕಾಯ್ದುಕೊಂಡಿದ್ದು, ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿನ ಕುಸಿತವನ್ನು ಸರಿದೂಗಿಸಿತು.

ವಿವಿಧ ದೇಶಗಳ ಜಿಡಿಪಿ ಬೆಳವಣಿಗೆ ದರ : ಭಾರತ 7.6%, ಫಿಲಿಪೈನ್ಸ್ (Philippines) 5.9%, ರಷ್ಯಾ 5.5%, ಅಮೆರಿಕ 5.2%, ಚೀನಾ 4.9%, ಯುಕೆ 0.6%, ಜರ್ಮನಿ -0.4%, ಜಪಾನ್ -2.1%

GDP ಎಂದರೇನು?
GDPಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ (Grass Domestic Production) ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಎನ್ನುತ್ತಾರೆ. ಒಂದು ದೇಶದ ಆರ್ಥಿಕತೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನೇ ಜಿಡಿಪಿ ಎನ್ನಲಾಗುತ್ತದೆ.

Exit mobile version