ಭಾರತವೇ ನಮಗೆ ದೊಡ್ಡಣ್ಣ, ಭಾರತವನ್ನೇ ನಾವು ಅನುಸರಿಸಬೇಕು : ಅರ್ಜುನ್ ರಣತುಂಗಾ!

srilanka

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ(Srilanka) ನಿರ್ಮಾಣ ಆಗಿರುವ ಆರ್ಥಿಕ ಸಂಕಷ್ಟದಿಂದ ಇಡೀ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ದ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿವೆ. ಕೂಡಲೇ ಅಧ್ಯಕ್ಷ(President) ಗೋಟಬಯ ರಾಜಪಕ್ಸ(Gotabaya Rajapakse) ರಾಜೀನಾಮೆ(Resign) ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಗೋಟಬಯ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮಿತ್ರಪಕ್ಷಗಳು ಸರ್ಕಾರದಿಂದ ಹೊರ ನಡೆದರು ಅಧ್ಯಕ್ಷ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ನಡುವೆ ಭಾರತ ದ್ವೀಪ ರಾಷ್ಟ್ರಕ್ಕೆ ಸಹಾಯಹಸ್ತ ಚಾಚಿದೆ. ಇಂಧನ(Oil), ಔಷಧ(Medicines), ಆಹಾರ(Food) ಸೇರಿದಂತೆ ಕೆಲ ಅಗತ್ಯ ನೆರವನ್ನು ನೀಡುತ್ತಿದೆ. ಹೀಗಾಗಿ ಭಾರತವೇ ನಮಗೆ ದೊಡ್ಡಣ್ಣ, ನಾವು ಭಾರತವನ್ನು ಅನುಸರಿಸಬೇಕೆಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಹೇಳಿದ್ದಾರೆ.

“ನಾವು ಹಣಕ್ಕಾಗಿ ಜಗತ್ತಿನ ಮುಂದೆ ಭಿಕ್ಷೆ ಬೇಡುವಂತ ಸ್ಥಿತಿ ಬಂದಿದೆ. ಅದೃಷ್ಟವಶಾತ್ ಭಾರತ ದೇಶ ನಮಗೆ ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಸಾಕಷ್ಟು ಸಹಾಯ ಮಾಡುತ್ತಿದೆ. ಮೂಲಭೂತ ವಸ್ತುಗಳನ್ನು ನೀಡಿ ಔದಾರ್ಯ ತೋರಿದೆ” ಎಂದು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಇನ್ನು ರಾಜಪಕ್ಸ ಕುಟುಂಬದ ಹಿಡಿತದಲ್ಲಿರುವ ಶ್ರೀಲಂಕಾ ಅಕ್ಷರಶಃ ದಿವಾಳಿಯಾಗಿದೆ. ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಜನರ ಆಕ್ರೋಶ ಮುಗಿಲು ಮುಟ್ಟಿದೆ. ಜನರ ಈಗೀನ ಆಕ್ರೋಶ ರಕ್ತಪಾತಕ್ಕೆ ಕಾರಣವಾಗದಿದ್ದರೆ ಸಾಕು.

ಶಾಂತಿಯುತವಾಗಿ ನಮ್ಮ ದೇಶ ಈ ಸಮಸ್ಯೆಯಿಂದ ಹೊರಬರಬೇಕಿದೆ. ಆದರೆ ರಾಜಪಕ್ಸ ಸರ್ಕಾರ ಅಸ್ತಿತ್ವದಲ್ಲಿದ್ದಷ್ಟು ದಿನ ದೇಶಕ್ಕೆ ಅಪಾಯವಿದೆ ಎಂದಿದ್ದಾರೆ. ಇನ್ನು ಭಾರತ ಸರ್ಕಾರ ನೆರೆಯ ಶ್ರೀಲಂಕಾಕ್ಕೆ ಸಾಕಷ್ಟು ನೆರವು ನೀಡಿದೆ. ಕಳೆದ 24 ಗಂಟೆಯಲ್ಲಿ ಭಾರತ 36 ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಮತ್ತು 40 ಸಾವಿರ ಮೆಟ್ರಿಕ್ ಟನ್ ಡಿಸೇಲ್ ಪೂರೈಸಿದೆ. ಇದುವರೆಗೂ ಭಾರತ ಒಟ್ಟು 2,70,000 ಮೆಟ್ರಿಕ್ ಟನ್ ಇಂಧನವನ್ನು ಶ್ರೀಲಂಕಾಕ್ಕೆ ನೀಡಿದೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ.

ಇನ್ನು ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಅಧ್ಯಕ್ಷ ಗೋಟಬಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ‘ಗೋಟ ಗೋ ಹೋಮ್’ ಎಂಬ ಘೋಷಣೆಗಳು ಇಡೀ ಶ್ರೀಲಂಕಾದಾದ್ಯಂತ ಕೇಳಿ ಬರುತ್ತಿದೆ. ಆದರೆ ಅಧ್ಯಕ್ಷ ಮಾತ್ರ ತನ್ನ ಮೊಂಡುಹಠ ಬೀಡುತ್ತಿಲ್ಲ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ದವಿದೆ ಎಂದು ಘೋಷಿಸಿದ್ದಾನೆ.

Exit mobile version